Asianet Suvarna News Asianet Suvarna News

ಭದ್ರತೆ ರಹಸ್ಯ: 15 ನಿಮಿಷ ಮುಂಚೆ ಪ್ರಧಾನಿ ಮೋದಿ ಆಗಮನ!

ನಿಗದಿತ ಸಮಯಕ್ಕಿಂತ ಪ್ರಧಾನಿ ಮೋದಿ ಆಗಮನ| 15 ನಿಮಿಷ ಮುಂಚೆ ಪ್ರಧಾನಿ ಬಂದಿದ್ಯಾಕೆ ಗೊತ್ತಾ..?| ನಿಗದಿತ ಸಮಯಕ್ಕೂ ಮುಂಚೆ ಅಥವಾ ತಡವಾಗಿ ಆಗಮಿಸೋದು ವಾಡಿಕೆ

PM Modi Arrives 15 Minutes Earlier To Yelahanka Air Force Station Due To SPG Security
Author
Bangalore, First Published Jan 2, 2020, 3:01 PM IST

ಬೆಂಗಳೂರು[ಜ.02]: ಪ್ರಧಾನಿ ನರೇಂದ್ರ ಮೋದಿ ಕಲ್ಪತರು ನಾಡಿಗೆ ಆಗಮಿಸಿದ್ದಾರೆ. ಸಿದ್ಧಗಂಗಾ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮೋದಿ, ಅದಕ್ಕೂ ಮುನ್ನ ಶತಮಾನದ ಸಂತ, ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮಸ್ಕರಿಸಿ ವೇದಿಕೆ ಏರಿದ್ದಾರೆ. ಈ ಎಲ್ಲದರ ನಡುವೆ ಪಿಎಂ ಮೋದಿ ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲೇ ಆಗಮಿಸಿರುವುದು ಹಲವರನ್ನು ಅಚ್ಚರಿಗೀಡು ಮಾಡಿದೆ. ಆದರೆ ಇದರ ಹಿಂದೆ ಒಂದು ಕಾರಣವಿದೆ.

ಹೌದು ಭದ್ರತೆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲೇ ಆಗಮಿಸಿದ್ದಾರೆ. ಅಪಾಯ ಹಾಗೂ ದಾಳಿಯಾಗುವ ಸಾಧ್ಯತೆ ದೇಶದ ಪ್ರಧಾನ ಮಂತ್ರಿಗೆ ಅತ್ಯಧಿಕ ಭದ್ರತೆ ಕೊಡಲಾಗುತ್ತದೆ. ಪ್ರಧಾನ ಮಂತ್ರಿ ಭದ್ರತೆ ಎಸ್ ಪಿಜಿ ತಂಡ ನೋಡಿಕೊಳ್ಳುತ್ತದೆ. ಹೀಗಿರುವಾಗ ಪ್ರಧಾನ ಮಂತ್ರಿ ಭದ್ರತೆ ನಿಟ್ಟಿನಲ್ಲಿ ಅವರು ಪ್ರಯಾಣಿಸುವ ಸಮಯವನ್ನು SPG ನೋಡಿಕೊಳ್ಳುತ್ತದೆ. 

ಸಾಮಾಜಿಕ ಜಾಲತಾಣದಲ್ಲಿ 'ಗೋ ಬ್ಯಾಕ್ ಮೋದಿ' ಟ್ರೆಂಡ್: ಕಾರಣಗಳು ಹಲವು!

ಭದ್ರತೆಯಲ್ಲಿ ಯಾವುದೇ ಲೋಪವಾಗಬಾರದೆಂದು ಪಿಎಂ ನಿಗದಿತ ಸಮಯಕ್ಕೂ ಮುಂಚೆ ಅಥವಾ ತಡವಾಗಿ ಆಗಮಿಸೋದು ವಾಡಿಕೆ. 1988ರಿಂದಲೂ SPG ಇದೇ ರೂಲ್ಸ್ ಫಾಲೋ ಮಾಡುತ್ತಿದೆ. ಹೀಗಾಗೇ ಇಂದು ಪ್ರಧಾನಿ ಮೋದಿ 15 ನಿಮಿಷ ಮೊದಲೇ ಆಗಮಿಸಿದ್ದರು. 

ಏನಿದು ಎಸ್‌ಪಿಜಿ?:

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಅಂಗರಕ್ಷಕರಿಂದಲೇ ಕೊಲೆಗೀಡಾದ ಕಾರಣಕ್ಕಾಗಿ 1985ರಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಎಸ್‌ಪಿಜಿ ವ್ಯವಸ್ಥೆ ಜಾರಿಗೆ ತರಲಾಯಿತು. 1988ರಲ್ಲಿ ದೇಶದ ಪ್ರಧಾನಿಗೆ ಎಸ್‌ಪಿಜಿ ಭದ್ರತೆ ಒದಗಿಸುವ ಕಾನೂನು ರೂಪಿಸಲಾಯಿತು. 

ಪೊಲೀಸರಿಗೆ ಕ್ಯಾರೇ ಅನ್ನದೆ ಒಳಗೆ ಹೋಗ್ಬಿಟ್ರು ಮೋದಿ ನೋಡಲು ಬಂದ ಅಜ್ಜ..!

ಈ ಪ್ರಕಾರ, ರಾಜೀವ್‌ ಗಾಂಧಿ ಅವರು ಪ್ರಧಾನಿ ಸ್ಥಾನದಿಂದ ಇಳಿದ ಕಾರಣಕ್ಕೆ ಅವರ ಎಸ್‌ಪಿಜಿ ಭದ್ರತೆಯನ್ನು ವಿ.ಪಿ ಸಿಂಗ್‌ ಸರ್ಕಾರ ವಾಪಸ್‌ ಪಡೆದಿತ್ತು.

ಏತನ್ಮಧ್ಯೆ, ರಾಜಕೀಯ ಕಾರ್ಯಕ್ರಮ ಹಿನ್ನೆಲೆ ತಮಿಳುನಾಡಿಗೆ ಹೋಗಿದ್ದ ರಾಜೀವ್‌ 1991ರಲ್ಲಿ ಆತ್ಮಹುತಿ ಬಾಂಬ್‌ ದಾಳಿಗೆ ಬಲಿಯಾದರು. ಆ ನಂತರ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬಕ್ಕೆ ಕನಿಷ್ಠ 10 ವರ್ಷಗಳ ಕಾಲ ಎಸ್‌ಪಿಜಿ ಭದ್ರತೆ ನೀಡಲು ಅನುವಾಗುವಂತೆ ಕಾನೂನು ತಿದ್ದುಪಡಿ ಮಾಡಲಾಗಿತ್ತು.

ಪಿಎಂ ಸ್ವಾಗತಿಸಿದ ಸಿಎಂ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತುಮಕೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಲಹಂಕ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಪ್ರಧಾನಿಗಳನ್ನು ಸ್ವಾಗತಿಸಿದರು

ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಇನ್ನು ಎಸ್‌ಪಿಜಿ ಭದ್ರತೆ ಇಲ್ಲ!

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios