ನವದೆಹಲಿ(ಮೇ.12): ಕೊರೋನಾ ವೈರಸ್ ನಿಯಂತ್ರಕ್ಕೆ ಲೌಕ್‌ಡೌನ್ ಹೇರಿದ ಬಳಿಕ ಇದೀಗ 3ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿ ಮಾತನಾಡಿದ್ದಾರೆ. ಪ್ರಮುಖವಾಗಿ ಪ್ರಧಾನಿ ಮೋದಿ ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. ರೈತರು, ಬಡವರು, ಶ್ರಮಿಕ ವರ್ಗ, ಕಾರ್ಮಿಕ ವರ್ಗ, ಮಧ್ಯಮ ವರ್ಗ, ಸಣ್ಣ ಉದ್ದಿಮೆ ಸೇರಿದಂತೆ ಸಂಪೂರ್ಣ ಭಾರತ ನಿವಾಸಿಗಳ ಅಭಿವೃದ್ದಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. 

ಕೊರೋನಾ ಜೊತೆಗೇ ಬಾಳಬೇಕು ಅಂದ್ರಲ್ಲ ಮೋದಿ, ಹಾಗಂದ್ರೇನು?.

ಎಲ್ಲಾ ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ನೆರವಾಗಲಿದೆ. ಈ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣದ ಕನಸನ್ನು  ಮೋದಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತದ 5 ಸ್ತಂಭ ಸೂತ್ರವನ್ನು ಮೋದಿ ಹೇಳಿದ್ದಾರೆ. ಆರ್ಥಿಕತೆ, ಮೂಲ ಸೌಕರ್ಯ, ತಂತ್ರಜ್ಞಾನ ಆಧಾರಿತ ವ್ಯವಸ್ಥೆ, ಜನಸಂಖ್ಯೆ ಹಾಗೂ ಬೇಡಿಕೆ ಈ 5 ಸ್ತಂಭ ಸೂತ್ರ ಎಂದು ಮೋದಿ ಹೇಳಿದರು. 

 

' ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ಕಾನೂನುಗಳ ಮಿಶ್ರಸಾರ ಕರ್ನಾಟಕದಲ್ಲಿ ಜಾರಿಗೊಳಿಸಲಿ'

ಸ್ಥಳೀಯ ಉತ್ಪನ್ನಗಳ ಖರೀದಿ, ಮಾರಾಟ ಹಾಗೂ ಪ್ರಚಾರ
ಕೊರೋನಾ ವೈರಸ್ ಕಾರಣ ಸ್ಥಳೀಯ ಉತ್ಪನ್ನಗಳು ಜಾಗತೀಕ ಉತ್ಪನ್ನವಾಗಿ ಬದಲಾಗಿದೆ. ಈ ಹಿಂದೆ ಖಾದಿ ಖರೀದಿಸಲು ಕರೆ ಕೊಟ್ಟಾಗ ಖಾದಿ ಬಟ್ಟೆಗೆ ಬೇಡಿಕೆ ಹೆಚ್ಚಾಯಿತು. ಇದೀಗ ಎಲ್ಲರೂ ಸ್ಥಳೀಯ ಉತ್ಪನ್ನಗಳ ಖರೀದಿಗೆ ಮುಂದಾಗಬೇಕು. ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ಥಳೀಯ ಉತ್ಪನ್ನಗಳ ಮಾರಾಟ ಹಾಗೂ ಪ್ರಚಾರಕ್ಕೂ ಅಷ್ಟೇ ಪ್ರಮುಖ್ಯ ನೀಡಬೇಕು ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಭಾರತವನ್ನು ಸಂಪೂರ್ಣ ಸ್ವಾವಲಂಬಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದಿದ್ದಾರೆ. 

 

ಉದ್ಯೋಗ ಸೃಷ್ಟಿಗೆ ಮೋದಿ ಮಹಾ ಪ್ಲಾನ್; ಸಪೋರ್ಟ್ ಮಾಡುತ್ತಾ ಅಮೆರಿಕಾ?.

ಶಾಸ್ತ್ರಗಳಲ್ಲಿ ಭಾರತ ಸ್ವಾವಲಂಬಿ ಎಂದು ಹೇಳಿದೆ. ಇದೀಗ ಭಾರತದ ಅವಲಂಬಿತ ಬದುಕಿನಿಂದ ಹೊರಬರುತ್ತಿದೆ. ಕೊರೋನಾ ವಕ್ಕರಿಸಿದ ಆರಂಭದಲ್ಲಿ ಶೂನ್ಯದಲ್ಲಿದ್ದ ಪಿಪಿಇ ಕಿಟ್ ಹಾಗೂ ಮಾಸ್ಕ್ ಉತ್ಪಾದನೆ ಇದೀಗ ಪ್ರತಿ ದಿನ 2ಲಕ್ಷ ದಾಟಿದೆ. ಇದು ನಾವು ಸ್ವಾವಲಂಬಿಯಾಗುವ ಸೂಚನೆ ನೀಡಿದೆ.

ಲಾಕ್‌ಡೌನ್ 4.0 ಘೋಷಿಸಿದ ಮೋದಿ
ಸದ್ಯ ವಿಸ್ತರಿಸಲಾಗಿರುವ ಲಾಕ್‌ಡೌನ್ 3.0 ಮೇ.17ಕ್ಕೆ ಅಂತ್ಯವಾಗಲಿದೆ. ಹೀಗಾಗಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಲಾಕ್‌ಡೌನ್ 4 ವಿಸ್ತರಣೆ ಕುರಿತು ಹೇಳಿದ್ದಾರೆ. ಹೊಸ ರೂಪ, ಹೊಸ ನಿಯಮ ಮೂಲಕ ಪೂರ್ಣಪ್ರಮಾಣದಲ್ಲಿ ಲಾಕ್‌ಡೌನ್ 4 ಜಾರಿಗೆ ಬರಲಿದೆ. ಈ ಕುರಿತು ಶೀಘ್ರದಲ್ಲಿ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಮೋದಿ ಹೇಳಿದ್ದಾರೆ. 

ಮೇ.17ರ ಬಳಿಕ ಮತ್ತೆ ಲಾಕ್‌ಡೌನ್ ಫಿಕ್ಸ್: ಹೊಸ ರೀತಿ ಎನ್ನುವುದೇ ಸಸ್ಪೆನ್ಸ್...!.

ಪೊಲೀಯೋ, ಕುಪೋಷಣೆ ಸೇರಿದಂತೆ ಹಲವು ಪಿಡುಗಗಳನ್ನು ಹೊಡೆದೋಡಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಇದೀಗ ಕೊರೋನಾ ವಿರುದ್ಧದ ಯುದ್ದದಲ್ಲಿ ಭಾರತವನ್ನು ಇತರ ದೇಶ ಕೊಂಡಾಡುತ್ತಿದೆ. ಕೊರೋನಾ ವಿರುದ್ಧದ ಯುದ್ದದಲ್ಲೂ ಭಾರತ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

 

ಲಾಕ್‌ಡೌನ್ ಸಮಯದಲ್ಲಿ ಪ್ರಧಾನಿ ಮೋದಿಯ 3ನೇ ಭಾಷಣ;

ದೇಶದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿದ್ದಂತೆ ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ಮಾರ್ಚ್ 25 ರಿಂದ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡುವುದಾಗಿ ಘೋಷಿಸಿದ್ದರು. ಮೊದಲ ಹಂತದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿತ್ತು. 

ಮಾರ್ಚ್ 25 ರಿಂದ ಎಪ್ರಿಲ್ 14ವರೆಗೆ ಮೊದಲ ಹಂತದ ಲಾಕ್‌ಡೌನ್ ಘೋಷಣೆಯಾಗಿತ್ತು. ಬಳಿಕ ಮೇ.03ರ ವರೆಗೆ ವಿಸ್ತರಿಸಿದ ಮೋದಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮೇ. 17ರ ವೆರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. 

3ನೇ ಹಂತದ ಲಾಕ್‌ಡೌನ್ ಅಂತ್ಯವಾಗುತ್ತಿದ್ದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನಿನ್ನೆ(ಮೇ.11) ಎಲ್ಲಾ ರಾಜ್ಯಗಳ ಸಿಎಂ ಜೊತೆ ಮ್ಯಾರಥಾನ್ ಮೀಟಿಂಗ್ ಮಾಡಿದ್ದರು. ಸುದೀರ್ಘ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ವೇಳೆ ಲಾಕ್‌ಡೌನ್ ಮುಂದುವರಿಕೆಗೆ 50-50 ಅಭಿಪ್ರಾಯ ವ್ಯಕ್ತವಾಗಿತ್ತು.