ಈಗಾಗಲೇ ಕೊರೋನಾ ಲಸಿಕಾ ಕಾರ್ಯಕ್ರಮ ಆರಮಭವಾಗಿದೆ. ಈ ವೇಳೆ ತಾಯಂದಿರು ಹಾಗೂ ಗರ್ಭಿಣಿಯರು ಲಸಿಕೆ ಪಡೆಯಬಹುದಾ..? ಇಲ್ಲಿದೆ ಉತ್ತರ
ಹಾಸನ (ಜ.21): ಕೊರೋನಾ ವಿರುದ್ಧ ಹೋರಾಡುವ ವ್ಯಾಕ್ಸಿನ್ ವಿತರಣೆಗೆ ಈಗಾಗಲೇ ಸರಕಾರವು ಚಾಲನೆ ನೀಡಿದ್ದು, ಇದನ್ನು ಬಳಸುವುದರಿಂದ ಯಾವ ಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ ರಾತ್ರಿ ಸಲ್ಪ ಮೈ ಕೈ ನೋವು ಮತ್ತು ಜ್ವರ ಬರಬಹುದು ಎಂದು ತಾಪಂ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೇರೆಡೆ ಹಕ್ಕಿಜ್ವರ ಇರುವ ಬಗ್ಗೆ ಕೇಳಿಬಂದಿದೆ. ಆದರೆ ಹಾಸನ ಜಿಲ್ಲೆಯಲ್ಲಿ ಯಾವುದೇ ರೀತಿಯ ಹಕ್ಕಿಜ್ವರ ಇರುವುದಿಲ್ಲ. ಮಾಂಸ ಪ್ರಿಯರು ಕೋಳಿ ಮಾಂಸವನ್ನು ಧೈರ್ಯವಾಗಿ ತಿನ್ನಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಂ. ವಿಜಯ್ ತಿಳಿಸಿದರು.
ಬೆಂಗ್ಳೂರಲ್ಲಿ 20000 ಅಧಿಕ ಮಂದಿಗೆ ಕೊರೋನಾ ಲಸಿಕೆ ...
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಕ್ಕಿಜ್ವರದ ಬಗ್ಗೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಿದರು.
ಗರ್ಭಿಣಿಯರು, ಹಾಲು ಕುಡಿಸುವ ತಾಯಂದಿರು ಹಾಗೂ 18 ವರ್ಷದ ಒಳಗಿನವರಿಗೆ ವ್ಯಾಕ್ಸಿನ್ ಹಾಕುವಂತಿಲ್ಲ. ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸ್ ಇವರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ.
ಮುಂದಿನ ಹಂತದಲ್ಲಿ ಸಾರ್ವಜನಿಕರಿಗೆ ಹಾಕಲಾಗುವುದು. ಇದುವರೆಗೂ ಯಾವ ಸಮಸ್ಯೆ ಎದುರಾಗಿರುವುದಿಲ್ಲ. ಈ ಲಸಿಕೆಯಿಂದ ಕೊರೋನಾವನ್ನು ತಡೆಗಟ್ಟಬಹುದಾಗಿದೆ. ವ್ಯಾಕ್ಸಿನ್ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯಾವುದೆ ಕಾಯಿಲೆ ಅಥವಾ ಸೋಂಕು ಬಂದರೂ ಕಾಲಕ್ರಮೇಣ ಕಡಿಮೆಯಾಗುತ್ತದೆ. ಇದೆ ರೀತಿ ಮುಂದುವರೆದರೆ ಕೊರೋನಾವನ್ನು ಸಂಪೂರ್ಣ ಹೋಗಲಾಡಿಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 21, 2021, 10:59 AM IST