ನವದೆಹಲಿ(ಜ.21): ನೆರೆಹೊರೆ ಮೊದಲು ಎಂಬ ನೀತಿಯನ್ನು ಕೊರೋನಾ ಲಸಿಕೆ ವಿತರಣೆಗೂ ವಿಸ್ತರಿಸಿರುವ ಭಾರತ ಸರ್ಕಾರ, ಈ ಯೋಜನೆಯಡಿ ಬುಧವಾರ ತನ್ನ ಅತ್ಯಾಪ್ತ ದೇಶಗಳಾದ ಭೂತಾನ್‌ ಮತ್ತು ಮಾಲ್ಡೀವ್‌್ಸಗೆ ಲಸಿಕೆ ರವಾನಿಸಿದೆ. ಮೊದಲ ಹಂತದಲ್ಲಿ ಭೂತಾನ್‌ಗೆ 1.50 ಲಕ್ಷ ಹಾಗೂ ಮಾಲ್ಡೀವ್‌್ಸಗೆ 1 ಲಕ್ಷ ಕೋವಿಶೀಲ್ಡ್‌ ಲಸಿಕೆಗಳು ತಲುಪಿವೆ.

ಈ ಮೂಲಕ ಈ ಎರಡು ರಾಷ್ಟ್ರಗಳು ಭಾರತದ ಲಸಿಕೆ ಪಡೆದ ಮೊದಲ ರಾಷ್ಟ್ರಗಳಾಗಿವೆ. ಭೂತಾನ್‌, ಮಾಲ್ಡೀವ್‌್ಸ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌ ಮತ್ತು ಸೀಶೆಲ್ಸ್‌ ರಾಷ್ಟ್ರಗಳಿಗೆ ಕೊರೋನಾ ವಿರುದ್ಧ ಹೋರಾಟಕ್ಕೆ ಲಸಿಕೆಗಳನ್ನು ಪೂರೈಕೆ ಮಾಡುವುದಾಗಿ ಮಂಗಳವಾರವಷ್ಟೇ ಹೇಳಿತ್ತು.

ಅಲ್ಲದೆ ಮುಂದಿನ ದಿನಗಳಲ್ಲಿ ಶ್ರೀಲಂಕಾ, ಆಷ್ಘಾನಿಸ್ತಾನ ಮತ್ತು ಮಾರಿಷಸ್‌ ರಾಷ್ಟ್ರಗಳಿಗೂ ಲಸಿಕೆಗಳನ್ನು ಪೂರೈಸುವುದಾಗಿ ಭಾರತ ಸರ್ಕಾರ ಹೇಳಿದೆ.