ಜಿ ರಾಮ್ ಜಿ to ಸಬ್ದಿ ರಕ್ಷಾ; ಜನಸಾಮಾನ್ಯರಿಗೆ ಬಂಪರ್ ಕೊಡುಗೆ ಕೊಟ್ಟ ಮೋದಿ ಸರ್ಕಾರ ಹೊಸ ವರ್ಷದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ವೇಗ ನೀಡಿದೆ.ಈ ಪೈಕಿ ಜನರ ಪ್ರತಿ ನಿತ್ಯ ಬದುಕನ್ನು ಸುಂದರವಾಗಿಸಲು ಹಲವು ಕೊಡುಗೆ ನೀಡಿದ್ದಾರೆ.
ನವದೆಹಲಿ (ಜ.08) ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ. ಅಮೂಲಾಗ್ರ ಬದಲಾವಣೆ ಮೂಲಕ ಭಾರತದ ವಿಶ್ವದಲ್ಲೈ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿದೆ. ಐದನೇ ಅತೀ ದೊಡ್ಡ ಆರ್ಥಿಕತೆಯಾಗಿರುವ ಭಾರತ 2030ರ ವೇಳೆಗೆ ಜಪಾನ್ ಹಿಂದಿಕ್ಕಿ ಮೂರನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಆತ್ಮನಿರ್ಭರ ಭಾರತ ಯೋಜನೆಯಿಂದ ಭಾರತ ಸ್ವಾವಲಂಬಿಯಾಗಿ ಮುನ್ನುಗ್ಗುತ್ತಿದೆ 2025ನೇ ವರ್ಷದ ಆರಂಭದಲ್ಲೇ ಪೆಹಲ್ಗಾಂ ದಾಳಿ, ಪ್ರತಿಯಾಗಿ ಆಪರೇಶನ್ ಸಿಂದೂರ್ ಮೂಲಕ ತಿರುಗೇಟು ನೀಡಿ ಭಾರತದ ಮೇಲಿನ ದಾಳಿಗೆ ತಕ್ಕ ತಿರುಗೇಟು ನೀಡುತ್ತೇವೆ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ. 2025ರ ವರ್ಷದಲ್ಲಿ ಮೋದಿ ಆಡಳಿತ ಹಲವು ಕೊಡುಗೆಯನ್ನು ನೀಡಿದೆ.
2025: ಸುಧಾರಣೆಗಳ ವರ್ಷ
ಭಾರತದ ಆರ್ಥಿಕತೆ, ಆಡಳಿತ ಮತ್ತು ಸಾಮಾಜಿಕ ಭದ್ರತಾ ಚೌಕಟ್ಟನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ವ್ಯಾಪಕ ಶ್ರೇಣಿಯ ರಚನಾತ್ಮಕ ಬದಲಾವಣೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೂಪಿಸುವುದರೊಂದಿಗೆ, 2025 ಒಂದು ಐತಿಹಾಸಿಕ ಸುಧಾರಣಾ ವರ್ಷವಾಗಿ ಹೊರಹೊಮ್ಮಿದೆ. ಕೇಂದ್ರ ಬಜೆಟ್ 2025, ₹12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗದವರಿಗೆ ಭಾರಿ ಪರಿಹಾರ ನೀಡಿದೆ. ಇದು ಜನರ ಕೈಯಲ್ಲಿ ಹೆಚ್ಚಿನ ಹಣ ಉಳಿಯುವಂತೆ ಮಾಡಿದ್ದು, ಗೃಹಬಳಕೆಯ ವಸ್ತುಗಳ ಖರೀದಿಗೆ ಉತ್ತೇಜನ ನೀಡಿದೆ. ಮಧ್ಯಮ ವರ್ಗ ಇದರಿಂದ ನಿರಾಳವಾಗಿದೆ. 12 ಲಕ್ಷ ರೂಪಾಯಿ ವೇತನ ಪಡೆಯುವ ಕೋಟ್ಯಾಂತರ ಮಂದಿ ಇದೀಗ ಟ್ಯಾಕ್ಸ್ ತಲೆನೋವಿನಿಂದ ಮುಕ್ತಿ ಪಡೆದಿದ್ದಾರೆ. ದೇಶದ ಬೆಳವಣಿಗೆ ಅನುಸಾರವಾಗಿ ಮೋದಿ ಸರ್ಕಾರ ತೆರಿಗೆ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡುವ ಮೂಲಕ ಜನಸಾಮಾನ್ಯರ ಮೇಲಿನ ಹೊರೆ ಇಳಿಸಿದೆ.
1961ರ ಆದಾಯ ತೆರಿಗೆ ಕಾಯ್ದೆಯ ಬದಲಿಗೆ 2025ರ ಆದಾಯ ತೆರಿಗೆ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದು ತೆರಿಗೆ ನಿಯಮಗಳ ಪಾಲನೆಯನ್ನು ಸರಳಗೊಳಿಸಿದೆ ಮತ್ತು ಭಾರತವನ್ನು ಪಾರದರ್ಶಕ, ತಂತ್ರಜ್ಞಾನ ಆಧಾರಿತ ತೆರಿಗೆ ಆಡಳಿತದತ್ತ ಕೊಂಡೊಯ್ದಿದೆ.
ಜಿಎಸ್‌ಟಿ ಸಂಚಲನ
ಜಿಎಸ್‌ಟಿ (GST) ಸುಧಾರಣೆಗಳು ದೈನಂದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಿದ್ದು, ಕುಟುಂಬಗಳು, ಎಂಎಸ್‌ಎಂಇಗಳು (MSME), ರೈತರು ಮತ್ತು ಕಾರ್ಮಿಕ ಪ್ರಧಾನ ವಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಎಸ್‌ಬಿಐ (SBI) ಸಂಶೋಧನೆಯ ಪ್ರಕಾರ, 2025-26ರ ಆರ್ಥಿಕ ವರ್ಷದ ಜಿಎಸ್‌ಟಿ ಸಂಗ್ರಹವು ಅಂದಾಜು ಮೀರಲಿದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಹಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆಯಿಂದ ಜನಸಾಮಾನ್ಯರ ಅಗತ್ಯವಸ್ತು ಮಾತ್ರವಲ್ಲ, ಕಾರು ಬೈಕ್ ಸೇರಿದಂತೆ ಜನರ ಕಸನಿನ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಿದೆ.
ಎಂಎಸ್‌ಎಂಇಗಳ ವಹಿವಾಟು ಮಿತಿಯನ್ನು ವಿಸ್ತರಿಸಲಾಗಿದ್ದು, ಹೆಚ್ಚಿನ ಉದ್ಯಮಗಳು ಸರ್ಕಾರದ ಸೌಲಭ್ಯಗಳು ಮತ್ತು ಸಾರ್ವಜನಿಕ ಸಂಗ್ರಹಣಾ (Procurement) ಅವಕಾಶಗಳನ್ನು ಪಡೆಯಲು ಅರ್ಹತೆ ಪಡೆದಿವೆ. ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ (PSU) ವಾರ್ಷಿಕ ಖರೀದಿಯಲ್ಲಿ ಕನಿಷ್ಠ 25% ರಷ್ಟು ಪಾಲನ್ನು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಂದಲೇ (MSE) ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಕಾರ್ಮಿಕ ಕಲ್ಯಾಣ ಮತ್ತು ಸುಲಭ ವ್ಯವಹಾರದ ನಡುವೆ ಸಮತೋಲನ ಕಾಯ್ದುಕೊಳ್ಳಲು ನಾಲ್ಕು ಕಾರ್ಮಿಕ ಸಂಹಿತೆಗಳನ್ನು (Labour Codes) ಜಾರಿಗೆ ತರಲಾಗಿದೆ. ಇದು 29 ಕಾನೂನುಗಳನ್ನು 4 ಸಂಹಿತೆಗಳಾಗಿ ವಿಲೀನಗೊಳಿಸಿದ್ದು, ಗಿಗ್ (Gig) ಮತ್ತು ಅಸಂಘಟಿತ ಕಾರ್ಮಿಕರಿಗೂ ಸಾಮಾಜಿಕ ಭದ್ರತೆಯನ್ನು ವಿಸ್ತರಿಸಿದೆ.
ನರೇಗಾ (MGNREGA) ಬದಲಿಗೆ ವಿಬಿ-ಜಿ ರಾಮ್ ಜಿ (VB-G RAM G) ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಖಾತರಿ ಉದ್ಯೋಗವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದು ಶಾಶ್ವತ ಆಸ್ತಿಗಳ ಸೃಷ್ಟಿ, ಬಯೋಮೆಟ್ರಿಕ್ ಹಾಜರಾತಿ ಮತ್ತು ಎಐ (AI) ಮೇಲ್ವಿಚಾರಣೆಯ ಮೇಲೆ ಕೇಂದ್ರೀಕರಿಸಿದೆ. ಈ ಮೂಲಕ ದೇಶದಲ್ಲಿ ಯೋಜನೆಯನ್ನು ಪರಿಣಾಕಾರಿಯಾಗಿ ಬಳಸಲಾಗುತ್ತಿದೆ. ಹೊಸ ಗ್ರಾಮೀಣ ಉದ್ಯೋಗ ಚೌಕಟ್ಟು ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ಹಣಕಾಸು ಅನುಪಾತವನ್ನು (ವಿಶೇಷ ರಾಜ್ಯಗಳಿಗೆ 90:10) ಅಳವಡಿಸಿಕೊಂಡಿದೆ, ಇದು ಆರ್ಥಿಕ ಹೊಣೆಗಾರಿಕೆ ಮತ್ತು ರಾಜ್ಯಗಳ ಪಾಲುದಾರಿಕೆಯನ್ನು ಸುಧಾರಿಸಿದೆ.
'ಸಬ್ಕಾ ಬಿಮಾ ಸಬ್ಕಿ ರಕ್ಷಾ' ಕಾಯ್ದೆಯ ಮೂಲಕ ವಿಮಾ ವಲಯದಲ್ಲಿ ಎಫ್‌ಡಿಐ (FDI) ಮಿತಿಯನ್ನು 74% ರಿಂದ 100% ಕ್ಕೆ ಏರಿಸಲಾಗಿದೆ. ಇದು ಬಂಡವಾಳ ಹರಿವು, ಸ್ಪರ್ಧಾತ್ಮಕತೆ ಮತ್ತು ವಿಮಾ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿದೆ. ಆರೋಗ್ಯ ವಿಚಾರದಲ್ಲಿ ಜನಸಾಮಾನ್ಯರಿಗೂ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸಗಳು ನಡೆಯುತ್ತಿದೆ. ಜೊತೆಗೆ ದೇಶದ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ.
ವಸಾಹತುಶಾಹಿ ಕಾಲದ ಕಾನೂನುಗಳ ಬದಲಿಗೆ ಐದು ಪ್ರಮುಖ ಸಮುದ್ರಯಾನ ಕಾನೂನುಗಳನ್ನು ಅಂಗೀಕರಿಸಲಾಗಿದ್ದು, ಶಿಪ್ಪಿಂಗ್, ಬಂದರುಗಳು ಮತ್ತು ನಾವಿಕರ ಕಲ್ಯಾಣವನ್ನು ಆಧುನೀಕರಿಸುವ ಮೂಲಕ ಭಾರತದ 'ಬ್ಲೂ ಎಕಾನಮಿ'ಯನ್ನು (Blue Economy) ಬಲಪಡಿಸಲಾಗಿದೆ. ಕರಾವಳಿ ಹಡಗು ಕಾಯ್ದೆಯು (Coastal Shipping Act) ಕರಾವಳಿ ವ್ಯಾಪಾರದ ಪಾಲನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದರಿಂದ ವಾರ್ಷಿಕವಾಗಿ ₹10,000 ಕೋಟಿ ಲಾಜಿಸ್ಟಿಕ್ಸ್ ವೆಚ್ಚ ಉಳಿತಾಯವಾಗುವುದಲ್ಲದೆ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವೂ ಕಡಿಮೆಯಾಗಲಿದೆ.
ಸುಲಭ ವ್ಯವಹಾರವನ್ನು (Ease of Doing Business) ಉತ್ತೇಜಿಸಲು 22 ಗುಣಮಟ್ಟ ನಿಯಂತ್ರಣ ಆದೇಶಗಳನ್ನು (QCO) ರದ್ದುಗೊಳಿಸಲಾಗಿದೆ ಮತ್ತು 53 ಆದೇಶಗಳನ್ನು ಅಮಾನತುಗೊಳಿಸಲಾಗಿದೆ. ಇದರಿಂದ ಉತ್ಪಾದಕರು ಮತ್ತು ಎಂಎಸ್‌ಎಂಇಗಳ ಮೇಲಿನ ನಿಯಮಗಳ ಹೊರೆ ಕಡಿಮೆಯಾಗಿದೆ. ಸೆಕ್ಯುರಿಟೀಸ್ ಮಾರ್ಕೆಟ್ಸ್ ಕೋಡ್ 2025, ಮೂರು ಹಳೆಯ ಹಣಕಾಸು ಕಾನೂನುಗಳನ್ನು ಏಕೀಕರಿಸಿದೆ. ಇದು ಸೆಬಿ (SEBI) ಆಡಳಿತವನ್ನು ಬಲಪಡಿಸಿದೆ, ಹೂಡಿಕೆದಾರರನ್ನು ರಕ್ಷಿಸಿದೆ ಮತ್ತು ಸಣ್ಣ ಕಾರ್ಯವಿಧಾನದ ಲೋಪಗಳನ್ನು ಅಪರಾಧಮುಕ್ತಗೊಳಿಸಿದೆ.
ಭಾರತವು ಓಮನ್, ಯುಕೆ ಮತ್ತು ನ್ಯೂಜಿಲೆಂಡ್ ದೇಶಗಳೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಅಕ್ಟೋಬರ್ 1, 2025 ರಿಂದ ಭಾರತ-EFTA TEPA ಜಾರಿಗೆ ಬಂದಿದ್ದು, ಸುಂಕ ಮುಕ್ತ ರಫ್ತು ಮತ್ತು ಹೂಡಿಕೆಗೆ ಹೆಚ್ಚಿನ ಅವಕಾಶ ನೀಡಿದೆ.ವರ್ಷದ ಕೊನೆಯಲ್ಲಿ ಪರಮಾಣು ಇಂಧನ ಮತ್ತು ಉನ್ನತ ಶಿಕ್ಷಣದಲ್ಲಿ ದೀರ್ಘಕಾಲದ ಸುಧಾರಣೆಗಳನ್ನು ತರಲಾಗಿದೆ. ಶಾಂತಿ (SHANTI) ಕಾಯ್ದೆಯ ಮೂಲಕ ಪರಮಾಣು ವಿದ್ಯುತ್‌ನಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಲಾಗಿದೆ ಮತ್ತು ವಿಕ್ಷಿತ್ ಭಾರತ್ ಶಿಕ್ಷಾ ಅಧಿಸ್ಥಾನ ಮಸೂದೆಯ ಮೂಲಕ ಏಕರೂಪದ ಉನ್ನತ ಶಿಕ್ಷಣ ನಿಯಂತ್ರಕವನ್ನು ಪರಿಚಯಿಸಲಾಗಿದೆ. ಇವೆಲ್ಲವೂ 'ವಿಕ್ಷಿತ್ ಭಾರತ್ 2047' ದೃಷ್ಟಿಕೋನಕ್ಕೆ ಪೂರಕವಾಗಿವೆ.


