ಗುರು ನಾನಕ್ ಜಯಂತಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಆಯೋಜಿಸದ ಗುರು ಪುರಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಸಿಖ್ ಗುರುಗಳ ಮಾರ್ಗದರ್ಶನ ದೇಶಕ್ಕೆ ಪ್ರೇರಣೆಯಾಗಿದೆ ಎಂದರು. ಮೋದಿ ಭಾಷಣಧ ಹೈಲೈಟ್ಸ್ ಇಲ್ಲಿದೆ.
ನವದೆಹಲಿ(ನ.07) ಬಿಜೆಪಿ ಕಾರ್ಯಕರ್ತನಾಗಿ ನಾನು ಪಂಜಾಬ್‌ನಲ್ಲಿ ಹೆಚ್ಚು ಕಾಲ ಕಳೆದಿದ್ದೇನೆ. ಈ ವೇಳೆ ಸಿಖ್ ಗುರು ಮಂದಿರಕ್ಕೇ ಭೇಟಿ ನೀಡುವ ಸಿಖರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪ್ರಧಾನಿಯಾಗಿ ಗುರು ಗೋವಿಂದ್ ಜಿ, ಗೋರ್ ತೇಗ್ ಬಹದ್ದೂರ್ ಜಿ ಸೇರಿದಂತೆ ಪವಿತ್ರ ಸಿಖ್ ಗುರುಗಳ ಜಯಂತಿ ಆಚರಿಸುವ ಸೌಭಾಗ್ಯ ಒಲಿದು ಬಂದಿತ್ತು. ಗುರುಗಳ ಆಶೀರ್ವಾದ, ಪ್ರೇರಣೆಯಿಂದ ಹೊಸ ಭಾರತ ನಿರ್ಮಾಣವಾಗುತ್ತಿದೆ. ಇಂದು ಗುರು ನಾನಕ್ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಸಿಖ್ ಪರಂಪರೆಯ ಮಹತ್ವ ಹಾಗೂ ಸೇವಾ ಮನೋಭವಾನೆ ದೇಶಕ್ಕೆ ಮತ್ತಷ್ಟು ಪ್ರೇರಣೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.
ಗುರು ನಾನಕ್ ಜಯಂತಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಆಯೋಜಿಸಿದ ಗುರು ಪುರಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ, ಸಿಖ್ ಧರ್ಮ ಗುರುಗಳ ಸ್ಮರಿಸಿದರು. ಇದೇ ವೇಳೆ ಭಾರತದ ಪರಂಪರೆ, ಸಂಸ್ಕೃತಿಯಲ್ಲಿ ಸಿಖ್ ಕೊಡುಗೆ ಹಾಗೂ ಕೇಂದ್ರ ಸರ್ಕಾರ ಸಿಖ್‌ರ ಸುರಕ್ಷತೆಗೆ ತೆಗೆದುಕೊಂಡ ಕಾರ್ಯಕ್ರಮಗಳನ್ನು ಮೋದಿ ಸೂಕ್ಷ್ಮವಾಗಿ ಹೇಳಿದ್ದಾರೆ.
ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷಗಾದಿ, ನ.8ಕ್ಕೆ ಪ್ರಧಾನಿ ಮೋದಿ ಲೋಗೋ, ವೆಬ್‌ಸೈಟ್ ಅನಾವರಣ!
ಗುರು ನಾನಕ್ ಸೇರಿದಂತೆ ಎಲ್ಲಾ ಗುರುಗಳ ಚರಣಕ್ಕೆ ನಮನ ಸಲ್ಲಿಸುತ್ತೇನೆ. ಈಶ್ವರ ನಾಮ ಜಪ ಮಾಡಿ, ನಿಮ್ಮ ಕರ್ತವ್ಯದಲ್ಲಿ ಸಾಗಿ, ಕಠಿಣ ಪ್ರಯತ್ನ ಮಾಡಿದರೆ ಫಲ ಸಿಗಲಿದೆ ಅನ್ನೋ ಗುರು ನಾನಕ್ ಮಾತನ್ನು ಇಲ್ಲಿ ಸ್ಮರಿಸುತ್ತೇನೆ. ಭಾರತೀಯ ಜೀವನ ಕಲ್ಯಾಣಕ್ಕೆ ಗುರು ನಾನಕ್ ನೀಡಿದ ಸಂದೇಶ ಮಹತ್ವದ್ದಾಗಿದೆ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನಮ್ಮ ದೇಶದ ಗುರುಗಳನ್ನು ಸ್ಮರಿಸಿ, ಅವರ ಮಾರ್ಗದರ್ಶನ ಹಾಗೂ ಪ್ರೇರಣೆ ಪಡೆಯುವುದು ಅತೀವ ಮುಖ್ಯವಾಗಿದೆ ಮೋದಿ ಹೇಳಿದ್ದಾರೆ.
ಇವತ್ತು ವಿಶ್ವದಲ್ಲಿ ಎದುರಾಗಿರುವ ಅಸ್ಥಿರತೆ, ಅಪಾಯದ ದಿಕ್ಕಿನಲ್ಲಿ ಸಾಗುತ್ತಿರುವ ಸಮಾಜಕ್ಕೆ ಗುರು ನಾನಕ್ ಅವರ ಜೀವನ ಬೆಳಕು ನೀಡಲಿದೆ. ಗುರು ನಾನಕ್ ಅವರ ಪ್ರೇಮ ಸಂದೇಶ ವಿಶ್ವಕ್ಕೆ ಮಾದರಿಯಾಗಿದೆ. ಹಲವು ಭಾಷೆ, ಹಲವು ಸಂಸ್ಕೃತಿ ನಡುವೆ ಎಲ್ಲಾ ಧರ್ಮದ ಗುರುಗಳ ಮಾರ್ಗದರ್ಶನವನ್ನು ನಾವು ಪಾಲಿಸುತ್ತೇವೆ. ಕಳೆದ 8 ವರ್ಷಗಳಲ್ಲಿ ಗುರು ನಾನಕ್ ಅವರ ಆಶೀರ್ವಾದದಿಂದ ಸಿಖ್ ಸಮುದಾಯಕ್ಕಾಗಿ ಕೆಲಸ ಮಾಡಲು ಸೌಭಾಗ್ಯ ಸಿಕ್ಕಿತು ಎಂದು ಮೋದಿ ಹೇಳಿದ್ದಾರೆ.
ದ್ವೇಷ ಹರಡುವ, Gujarat ಮಾನಹಾನಿ ಮಾಡುವವರನ್ನು ಹೊರಹಾಕಲಾಗುತ್ತದೆ: ಪ್ರಧಾನಿ ಮೋದಿ
ಇತ್ತೀಚೆಗೆ ಉತ್ತರಖಂಡ ತೆರಳಿದಾಗಿ ರೋಪ್ ವೇ ಯೋಜನೆಗೆ ಶಿಲನ್ಯಾಸ ನೀಡಲಾಗಿತ್ತು. ಇದು ಸಿಖ್ ತಾಣವಾಗಿದೆ. ದೆಹಲಿ ಹಾಗೂ ಪುಣೆ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ. ಇದರಿಂದ ಆನಂದ್‌ಪುರ್ ಸಾಬ್ ತೆರಳುವ ಸಿಖ್ ಭಕ್ತರಿಗೆ ನೆರವಾಗಲಿದೆ. ಇದಕ್ಕೂ ಮೊದಲು ದೆಹಲಿ ಹಾಗೂ ಅಮೃತಸರ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ದಶಕಗಳ ಬಳಿಕ ಕರ್ತಾಪುರ್ ಕಾರಿಡಾರ್ ತೆರೆಯಲಾಗಿದೆ. ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಸಿಖ್ ಹಾಗೂ ಹಿಂದೂಗಳ ಮೇಲೆ ಸತತ ದಾಳಿ ನಡೆದಿತ್ತು. ಇವರನ್ನು ಭಾರತಕ್ಕೆ ಕರೆ ತರಲು ಪ್ರಯತ್ನಗಳನ್ನು ಮಾಡಲಾಯಿತು. ಇದರಲ್ಲಿ ಭಾರತ ಯಶಸ್ವಿಯಾಗಿದೆ ಎಂದರು.
