ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷಗಾದಿ, ನ.8ಕ್ಕೆ ಪ್ರಧಾನಿ ಮೋದಿ ಲೋಗೋ, ವೆಬ್‌ಸೈಟ್ ಅನಾವರಣ!

ಭಾರತವು ಜಿ20 ಶೃಂಗದ ಅಧ್ಯಕ್ಷ ಗಾದಿ ವಹಿಸಿಕೊಳ್ಳುತ್ತಿದೆ. ಇದರ ಹಿನ್ನಲೆಯಲ್ಲಿ ಲೋಗೊ, ಥೀಮ್ ಮತ್ತು ವೆಬ್‌ಸೈಟ್ ಅನ್ನು ನವೆಂಬರ್ 08ರಂದು ಪ್ರಧಾನಿ ಮೋದಿ ಅನಾವರಣ ಮಾಡಲಿದ್ದಾರೆ. 

PM Narendra Modi to unveil logo theme and website of India G20 Presidency on 8th November via video conferencing ckm

ನವದೆಹಲಿ(ನ.07): ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಪ್ರಾತಿನಿದ್ಯ ಸಿಗುತ್ತಿದೆ. ಭಾರತ ಪ್ರತಿ ನಿರ್ಧಾರ, ನಿಲುವು ಹಾಗೂ ಹೆಜ್ಜೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ಜಗತ್ತಿಗೆ ಭಾರತ ಮಾದರಿಯಾಗುತ್ತಿದೆ. ಇದೀಗ ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ಕ್ಕೆ ಲೋಗೊ, ಥೀಮ್ ಹಾಗೂ ವೆಬ್‌ಸೈಟ್  ಅನಾವರಣ ಮಾಡಲಿದ್ದಾರೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ.  ಪ್ರಧಾನಮಂತ್ರಿ ಅವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ ಭಾರತದ ವಿದೇಶಾಂಗ ನೀತಿಯು ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಪಾತ್ರಗಳನ್ನು ಕೈಗೊಳ್ಳಲು ವಿಕಸನಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತವು 2022 ಡಿಸೆಂಬರ್ 01ರಂದು ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದೆ. ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವು ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಕುರಿತ ಜಾಗತಿಕ ಕಾರ್ಯಸೂಚಿಗೆ ಕೊಡುಗೆ ನೀಡಲು ಭಾರತಕ್ಕೆ ಒಂದು ಅನನ್ಯ ಅವಕಾಶ ನೀಡಲಿದೆ. ನಮ್ಮ ಜಿ20  ಅಧ್ಯಕ್ಷತೆಯ ಲೋಗೊ, ಥೀಮ್ ಮತ್ತು ವೆಬ್‌ಸೈಟ್, ಭಾರತದ ಸಂದೇಶ ಮತ್ತು ಜಗತ್ತಿಗೆ ಭಾರತದ ಆದ್ಯತೆಗಳನ್ನು ಸಾರಲಿದೆ.

ಜಿ20 ಶೃಂಗಸಭೆಯು  ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ಏರ್ಪಡಿಸುವ  ಪ್ರಧಾನ ವೇದಿಕೆಯಾಗಿದ್ದು, ಜಾಗತಿಕ ಜಿಡಿಪಿಯ 85%, ಜಾಗತಿಕ ವ್ಯಾಪಾರದ 75% ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಆರ್ಥಿಕ ಸಹಕಾರವನ್ನು ಪ್ರತಿನಿಧಿಸುತ್ತದೆ. ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು, ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ 32 ವಲಯಗಳಿಗೆ ಅನ್ವಯವಾಗುವ ಸುಮಾರು 200 ಸಭೆಗಳನ್ನು ನಡೆಸಲಿದೆ. ಭಾರತವು ಆಯೋಜಿಸುತ್ತಿರುವ ಅತ್ಯುನ್ನತ ಅಂತಾರಾಷ್ಟ್ರೀಯ ಕೂಟಗಳಲ್ಲಿ ಜಿ20 ಶೃಂಗಸಭೆಯು ಒಂದಾಗಿದೆ.

ಔಷಧಿ, ಸರ್ಕಾರ ಬದಲಿಸುವುದು ಸೂಕ್ತವಲ್ಲ, ಹಿಮಾಚಲ ಸಂಪ್ರದಾಯಕ್ಕೆ ಅಂತ್ಯ ಹಾಡಲು ಮೋದಿ ಮನವಿ!

ಹಂಪಿ ಸೇರಿ 55 ಕಡೆ ಜಿ20 ದೇಶಗಳ ಸಭೆ
ಅಮೆರಿಕ, ಚೀನಾ, ಭಾರತ, ರಷ್ಯಾ, ಬ್ರಿಟನ್‌, ಜಪಾನ್‌ ಮುಂತಾದ ಪ್ರಬಲ ದೇಶಗಳಿರುವ ಜಿ20 ಒಕ್ಕೂಟದ ಮುಂದಿನ ಸಭೆಗಳು ಕರ್ನಾಟಕದ ಪ್ರಸಿದ್ಧ ಪಾರಂಪರಿಕ ತಾಣವಾದ ಹಂಪಿ ಸೇರಿದಂತೆ ದೇಶಾದ್ಯಂತ 55 ಪ್ರಸಿದ್ಧ ಸ್ಥಳಗಳಲ್ಲಿ ನಡೆಯಲಿವೆ. ಜಿ20 ಒಕ್ಕೂಟದ ಅಧ್ಯಕ್ಷ ಸ್ಥಾನ ಈ ವರ್ಷ ಭಾರತಕ್ಕೆ ಲಭಿಸಿದೆ. ಒಂದು ವರ್ಷದ ಅವಧಿಯಲ್ಲಿ ಭಾರತವು 200 ಸಭೆಗಳನ್ನು ನಡೆಸಲಿದ್ದು, ಅವುಗಳನ್ನು 55 ಸ್ಥಳಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಭಾರತದಲ್ಲಿರುವ ಪಾರಂಪರಿಕ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸುಂದರ ಹಾಗೂ ಪಾರಂಪರಿಕ ತಾಣಗಳಲ್ಲಿ ಜಿ20 ಸಭೆಗಳನ್ನು ನಡೆಸಿದರೆ ಅವು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯಲಿವೆ. ಆಗ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಯೋಚಿಸಿದೆ.

ಜಿ7 ವೇದಿಕೆಯಲ್ಲಿ ವಿಶ್ವ ನಾಯಕರಿಗೆ ಭಾರತೀಯ ಕಲೆಯ ಪ್ರದರ್ಶನ ಮಾಡಿದ ಪ್ರಧಾನಿ ಮೋದಿ!

ಭಾರತದ ಜಿ20 ಅಧ್ಯಕ್ಷತೆಯ ಅವಧಿ 2022ರ ಡಿ.1ರಿಂದ 2023ರ ನ.30ರವರೆಗೆ ಇರಲಿದೆ. 2023ರ ಸೆ.9 ಹಾಗೂ 10ರಂದು ಜಿ20 ದೇಶಗಳ ವಾರ್ಷಿಕ ಶೃಂಗಸಭೆ ನಡೆಯಲಿದೆ. ಅದಕ್ಕೂ ಮುನ್ನ ಭಾರತದ 200 ಸ್ಥಳಗಳಲ್ಲಿ 55 ಸಭೆಗಳು ನಡೆಯಲಿವೆ. ಹಂಪಿ, ಖಜುರಾಹೋ, ಸಿಲಿಗುರಿ, ರಣ್‌ ಆಫ್‌ ಕಚ್‌ ಮುಂತಾದ ಸ್ಥಳಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಇವುಗಳಲ್ಲದೆ ದೇಶದ 2 ಹಾಗೂ 3ನೇ ಹಂತದ ನಗರಗಳು ಹಾಗೂ ರಾಜ್ಯ ರಾಜಧಾನಿಗಳಲ್ಲೂ ಸಭೆಗಳು ನಡೆಯಲಿವೆ. ಹಂಪಿ ಹಾಗೂ ಖಜುರಾಹೋ ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ. 

Latest Videos
Follow Us:
Download App:
  • android
  • ios