Asianet Suvarna News Asianet Suvarna News

ವೈದ್ಯಕೀಯ ವಿದ್ಯಾರ್ಥಿಗಳಿಗೂ ಕೋವಿಡ್‌ ಡ್ಯೂಟಿ: NEET-PG ಪರೀಕ್ಷೆ ಮುಂದೂಡಿಕೆ!

ಕೊರೋನಾ ಪರಿಸ್ಥಿತಿಯಲ್ಲಿ ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲು ಕೇಂದ್ರದ ಮಹತ್ವದ ಕ್ರಮ| ಕೊರೋನಾ ಸಾಂಕ್ರಾಮಿಕವನ್ನು ನಿಭಾಸಲು ಮಾನವ ಸಂಪನ್ಮೂಲದ ಲಭ್ಯತೆಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಸಭೆ| ನೀಟ್‌ ಮುಂದೂಡಿಕೆ ಸೇರಿ ಹಲವು ನಿರ್ಧಾರ

PM authorises keys decisions to boost availability of medical personnel to fight COVID 19 pod
Author
Bangalore, First Published May 3, 2021, 3:57 PM IST

ನವದೆಹಲಿ(ಮೇ.03): ದೇಶಾದ್ಯಂತ ಆವರಿಸಿರುವ ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು, ಮತ್ತೊಮ್ಮೆ ದೇಶವನ್ನು ಸೋಂಕು ಮುಕ್ತಗೊಳಿಸುವ ನಿಟ್ಟಿನಲ್ಲಿ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬ ಸೋಂಕಿತನ ಪ್ರಾಣ ಉಳಿಸುವ ನಿಟ್ಟಿನಲ್ಲಿ ತಮ್ಮ ಇಷ್ಟ-ಕಷ್ಟ ಬದಿಗಿಟ್ಟು ಸೇವೆ ಮಾಡುತ್ತಿದ್ದಾರೆ. ಹೀಗಿದ್ದರೂ ಸದ್ಯ ದೇಶ ಆರೀಓಗ್ಯ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಹೀಗಿರುವಾಗ ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರದ ಈ ನಿರ್ಧಾರ ಕೊರೋನಾ ವಾರಿಯರ್‌ಗಳಿಗೆ ಭರವಸೆಯ ಬಬೆಳಗಾಗಲಿದೆ.

ಕೊರೋನಾ ಸಾಂಕ್ರಾಮಿಕವನ್ನು ನಿಭಾಸಲು ಮಾನವ ಸಂಪನ್ಮೂಲದ ಲಭ್ಯತೆಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಇಂದು, ಸೋಮವಾರ ಸಭೆ ನಡೆಸಿದ್ದಾರೆ. ಈ ಕುರಿತಾಗಿಉ ಚರ್ಚೆ, ಪರಿಈಲನೆ ನಡೆಸಿದ ಬಳಿಕ ಆರೋಗ್ಯ ಸಿಬ್ಬಂದಿ ಕೊರತೆ ನಿವಾರಿಸಲು ಸರ್ಕಾರ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸಭೆಯಲ್ಲಿ ತೆಗೆದುಕೊಂಡ ಕ್ರಮಗಳು ಹೀಗಿವೆ.

ಮೋದಿ ಸಭೆಯಲ್ಲಿ ಮಹತ್ವದ ನಿರ್ಧಾರ

* ಸದ್ಯದ ಪರಿಸ್ಥಿತಿಯಲ್ಲಿ ನೀಟ್‌-ಪಿಜಿ ಪರೀಕ್ಷೆಗಳನ್ನು ಕನಿಷ್ಟ ನಾಲ್ಕು ತಿಂಗಳು ಮುಂದೂಡೇಕು. ಹೀಗಾಗಿ ಈ ಪರೀಕ್ಷೆಗಳು 2021 ಆಗಸ್ಟ್ 31ರ ಮೊದಲು ನಡೆಸುವುದಿಲ್ಲ ಹಾಗೂ ಪರೀಕ್ಷೆಗೂ ಒಂದು ತಿಂಗಳು ಮೊದಲೇ ದಿನಾಂಕ ಘೋಷಿಸಲಾಗುತ್ತದೆ. ಇದರಿಂದ ಕರ್ತವ್ಯ ನಿರ್ವಹಿಸಲು ಸರ್ಹರಾದ ವೈದ್ಯರು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿಡುವಂತಾಗುಇತ್ತದೆ.

* ವೈದ್ಯಕೀಯ ಕ್ಷೇತ್ರದಲ್ಲಿ ಇಂಟರ್ನಿಯಾಗಿರುವ ವಿದ್ಯಾರ್ಥಿಗಳು ಅವರ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಕೋರೋನಾ ಸಂಬಂಧಿ ಸೇವೆಗೆ ನಿಯೋಜಿಸಲು ನಿರ್ಧರಿಸಲಾಗಿದೆ. ಇದು ಇಂಟರ್ನ್‌ಶಿಪ್‌ನ ಒಂದು ಭಾಗವಾಗಿ ಪರಿಗಣಿಸಲಾಗುತ್ತದೆ. 

"

* ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಟೆಲಿ ಕನ್ಸಲ್ಟೇಷನ್ ಹಾಗೂ ಕಡಿಮೆ ಲಕ್ಷಣಗಳನ್ನು ಹೊಂದಿರುವ ಕೊರೋನಾ ಪೀಡಿತರಿಗೆ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲು ನೇಮಿಸಲಾಗುತ್ತದೆ. ಇದು ಸದ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರ ಕೆಲಸದ ಒತ್ತಡವನ್ನು ಕಡಿಮೆಗೊಳಿಸಲಿದೆ, 

* ಇನ್ನು ಅಂತಿಮ ವರ್ಷದ ಪಿಜಿ ವಿದ್ಯಾರ್ಥಿಗಳ ಸೇವೆಯನ್ನೂ ಇಲ್ಲಿ ಬಳಸಿಕೊಳ್ಳುವುದು.

* B.Sc./GNM ಅರ್ಹತೆ ಹೊಂದಿರುವ ದಾದಿಯರನ್ನು ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ಫುಲ್‌ ಟೈಂ ಕೊರೋನಾ ಸಂಬಂಧಿ ಸೇವೆಗಳಿಗೆ ಬಳಸಿಕೊಳ್ಳುವುದು. 

* ಕೋವಿಡ್ ನಿರ್ವಹಣೆಯಲ್ಲಿ ಸೇವೆಗ ಒದಗಿಸುವ, ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯ ಪೂರ್ಣಗೊಳಿಸಿದ ಸಿಬ್ಬಂದಿಗೆ ಮುಂದಿನ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುತ್ತದೆ.

* ಕೋವಿಡ್ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬಯಸುವ ವೈದ್ಯಕೀಯ ವಿದ್ಯಾರ್ಥಿಗಳು / ವೃತ್ತಿಪರರಿಗೆ ಲಸಿಕೆ ನೀಡುವುದು. ಹೀಗೆ ಕೊರೋನಾ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರು ಸರ್ಕಾರದ ವಿಮಾ ಯೋಜನೆಯಡಿ ಒಳಪಡುತ್ತಾರೆ.

* ಕನಿಷ್ಠ 100 ದಿನಗಳ ಕೋವಿಡ್ ಕರ್ತವ್ಯ ಮಾಡುವುದಾಗಿ ಒಪ್ಪಂದ ಮಾಡುವ ಹಾಗೂ ಪೂರ್ಣಗೊಳಿಸುವ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಭಾರತ ಸರ್ಕಾರದಿಂದ ಪ್ರಧಾನ ಮಂತ್ರಿಯ ಡಿಸ್ಟಿಂಗ್ವಿಶ್ಡ್ ಕೋವಿಡ್ ನ್ಯಾಷನಲ್ ಸರ್ವಿಸ್ ಎಂಬ ಸನ್ಮಾನ ನೀಡಿ ಗೌರವಿಸಲಾಗುತ್ತದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios