Asianet Suvarna News Asianet Suvarna News

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

CAB ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ| ಪ್ರತಿಭಟನಾಕಾರರ ಹಿಂಸಾಚಾರಕ್ಕೆ ತತ್ತರಿಸಿದ ಈಶಾನ್ಯ ಭಾರತ| ಪ್ರತಿಭಟನೆ ಕೈಬಿಡುವಂತೆ ಈಶಾನ್ಯ ರಾಜ್ಯಗಳ ಜನೆತೆಗೆ ಪ್ರಧಾನಿ ಮೋದಿ ಮನವಿ| ನಿಮ್ಮ ಹಕ್ಕುಗಳನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂದ ಪ್ರಧಾನಿ ಮೋದಿ| ಈಶಾನ್ಯ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ಗಟ್ಟಿಯಾಗಿ ನಿಂತಿದೆ ಎಂದ ಪ್ರಧಾನಿ|

PM Assures Assam And Eastern States On Citizenship Bill
Author
Bengaluru, First Published Dec 12, 2019, 12:20 PM IST

ನವದೆಹಲಿ(ಡಿ.12): ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 

ಈ ಕುರಿತು ಮೌನ ಮುರಿದಿರುವ ಪ್ರಧಾನಿ ಮೋದಿ, ನಿಮ್ಮ ಹಕ್ಕು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಶಾನ್ಯ ರಾಜ್ಯಗಳ ಜನೆತೆಗೆ ಭರವಸೆ ನೀಡಿದ್ದಾರೆ.

ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!

 ಸರಣಿ ಟ್ವೀಟ್’ಗಳ ಮೂಲಕ ಈಶಾನ್ಯ ರಾಜ್ಯಗಳ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!

ನಿಮ್ಮ ಅನನ್ಯ ಗುರುತು ಹಾಗೂ ಸುಂದರ ಸಂಸ್ಕೃತಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಪೌರತ್ವ ಮಸೂದೆ ಕುರಿತಂತೆ ಅನಗತ್ಯ ಭಯಬೇಡ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

’‘‘ಈಶಾನ್ಯ ರಾಜ್ಯಗಳ ರಾಜಕೀಯ, ಭಾಷೆ, ಸಾಂಸ್ಕೃತಿಕ ಹಾಗೂ ಭೂ ಹಕ್ಕುಗಳನ್ನು ಸಾಂವಿಧಾನಿಕವಾಗಿ ರಕ್ಷಿಸಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಅಸ್ಸಾಂ ಮತ್ತು ಈಶಾನ್ಯ ಭಾರತದ ನನ್ನ ಸಹೋದರ-ಸಹೋದರಿಯರಿಗೆ ನಾನು ಭರವಸೆ ನೀಡುತ್ತೇನೆ’..ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

CAB ಅಪಾಯಕಾರಿ: ಮಸೂದೆ ವಿರೋಧಿಸಿ ಕೆಲಸ ಬಿಟ್ಟ ಐಪಿಎಸ್ ಅಧಿಕಾರಿ!

Follow Us:
Download App:
  • android
  • ios