ಮುಂಬೈ(ಡಿ.12): ಕೊನೆಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ರಾಜ್ಯಸಭೆಯಲ್ಲೂ ಮಸೂದೆ ಪಾಸಾಗುವ ಮೂಲಕ ರಾಷ್ಟ್ರಪತಿ ಅಂಕಿತಕ್ಕೆ ಕಾಯುತ್ತಿದೆ.

ಆದರೆ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿಪಕ್ಷಗಳೂ ಸೇರಿದಂತೆ ಸಮಾಜದ ವಿವಿಧ ವರ್ಗಗಳು ತೀವೃವಾಗಿ ವಿರೋಧಿಸಿವೆ.

ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!

ಇದೀಗ ಪೊಲೀಸ್ ಇಲಾಖೆಯಲ್ಲೂ CAB  ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಮಸೂದೆ ವಿರೋಧಿಸಿ ಹಿರಿಯ ಐಪಿಎಸ್ ಅಧಿಕಾರಿಯೋರ್ವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ಕೆಡರ್’ನ ಹಿರಿಯ ಐಪಿಎಸ್ ಅಧಿಕಾರಿ ಅಬ್ದುರ್ ರೆಹಮಾನ್, CAB ಮಸೂದೆ ವಿರೋಧಿಸಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರದ ಮಾನವ ಹಕ್ಕು ಆಯೋಗದ ಐಜಿಪಿಯಾಗಿರುವ ಅಬ್ದುರ್ ರೆಹಮಾನ್, ಪೌರತ್ವ ತಿದ್ದುಪಡಿ ಮಸೂದೆ ದೇಶದ ಬಹುತ್ವವನ್ನು ನಾಶಪಡಿಸಲಿದೆ ಎಂದು ಕಿಡಿಕಾರಿದ್ದಾರೆ.

ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!

ಟ್ವಿಟ್ಟರ್’ನಲ್ಲಿ ರಾಜೀನಾಮೆ ಪತ್ರದ ಫೋಟೋ ಹಾಕಿರುವ ಅಬ್ದುರ್ ರೆಹಮಾನ್, ಪೌರತ್ವ ತಿದ್ದುಪಡಿ ಮಸೂದೆ ಅಸಾಂವಿಧಾನಿಕ ಎಂದು ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಇತಿಹಾಸವನ್ನು ತಿರುಚಿ, ದೇಶವನ್ನು ಧಾರ್ಮಿಕ ಅಸಹಿಷ್ಣು ರಾಷ್ಟ್ರವನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ ಎಂದೂ ಅಬ್ದುರ್ ಗಂಭೀರ ಆರೋಪ ಮಾಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ: ಈಶಾನ್ಯ ಧಗಧಗ