Asianet Suvarna News Asianet Suvarna News

26/11 ದಾಳಿಗಿಂತಲೂ ಡೊಡ್ಡ ದಾಳಿಗೆ ಸಂಚು: ಬೆಳಗಾವಿ ಗಡೀಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದ ಶಂಕಿತರು

ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಕೆಲ ಸಮಯದ ಹಿಂದೆ ಬಾಂಬ್‌ ಸ್ಫೋಟದ ಪ್ರಯೋಗ ನಡೆಸಿದ್ದ ಇಬ್ಬರು ಶಂಕಿತ ಉಗ್ರರು, 160ಕ್ಕೂ ಹೆಚ್ಚು ಜನರನ್ನು ಬಲಿಪಡೆದ 2008ರ 26/11 ಮುಂಬೈ ದಾಳಿಗಿಂತಲೂ ದೊಡ್ಡ ದಾಳಿಯ ಸಂಚು ರೂಪಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದಾಳಿಗೆ ಹುನ್ನಾರ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

Plot for bigger attack than 26/11 attack Suspects did trail blast in Amboli forest in Maharashtra akb
Author
First Published Aug 2, 2023, 7:26 AM IST

ಮುಂಬೈ: ಕರ್ನಾಟಕದ ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಕೆಲ ಸಮಯದ ಹಿಂದೆ ಬಾಂಬ್‌ ಸ್ಫೋಟದ ಪ್ರಯೋಗ ನಡೆಸಿದ್ದ ಇಬ್ಬರು ಶಂಕಿತ ಉಗ್ರರು, 160ಕ್ಕೂ ಹೆಚ್ಚು ಜನರನ್ನು ಬಲಿಪಡೆದ 2008ರ 26/11 ಮುಂಬೈ ದಾಳಿಗಿಂತಲೂ ದೊಡ್ಡ ದಾಳಿಯ ಸಂಚು ರೂಪಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದಾಳಿಗೆ ಹುನ್ನಾರ ನಡೆಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಇತ್ತೀಚೆಗೆ, ಐಸಿಸ್‌ (ISIS) ಸಂಘಟನೆಯ ಉಪಸಂಘಟನೆಯಾದ ಸುಫಾಗೆ ಸೇರಿದ ಮೊಹಮ್ಮದ್‌ ಇಮ್ರಾನ್‌ (Mohammad Imran) ಮತ್ತು ಮೊಹಮ್ಮದ್‌ ಯೂನುಸ್‌ (Mohammad Yunus) ಎಂಬಿಬ್ಬರು ಶಂಕಿತ ಉಗ್ರರನ್ನು ಬಂಧಿಸಿತ್ತು. ಜೊತೆಗೆ ಬಂಧಿತರಿಂದ ಹಲವು ಎಲೆಕ್ಟ್ರಾನಿಕ್‌ ವಸ್ತುಗಳ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಡಿಸಿದ ವೇಳೆ ಮತ್ತು ಅವರಿಂದ ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲಿಸಿದ ವೇಳೆ ಇಮ್ರಾನ್‌ ಮತ್ತು ಯೂನಸ್‌, ಮುಂಬೈನ ಹಲವೆಡೆ ಭಾರೀ ಸ್ಫೋಟದ ಸಂಚು ರೂಪಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ವೆಬ್‌ಸೈಟೊಂದು ವರದಿ ಮಾಡಿದೆ.

ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್‌ ಬಾಂಬ್‌ ಕಿಂಗ್‌ಪಿನ್‌ ಬೆಳಗಾವಿ ಲಷ್ಕರ್‌ ಉಗ್ರ!

ಭಾರೀ ಸ್ಕೆಚ್‌:

ಹೆಚ್ಚು ಜನಸಂದಣಿ ಇರುವ ಮುಂಬೈನ ಪ್ರಮುಖ ದೇಗುಲಗಳು ಮತ್ತು ಜಲವಿದ್ಯುತ್‌ ಉತ್ಪಾದನಾ ಘಟಕಗಳು ಉಗ್ರರ ದಾಳಿಗೆ ಸಂಚು ರೂಪಿಸಿದ್ದ ಪ್ರಮುಖ ಜಾಗವಾಗಿತ್ತು. ದೇಗುಲಗಳ ಮೇಲೆ ದಾಳಿ ನಡೆಸಿದರೆ ಹೆಚ್ಚಿನ ಜನರನ್ನು ಒಟ್ಟಿಗೆ ಬಲಿಪಡೆಯಬಹುದು ಎಂಬ ಉದ್ದೇಶವಿದ್ದರೆ, ಜಲವಿದ್ಯುತ್‌ ಘಟಕಗಳು ದೇಶದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳ ಮೇಲಿನ ದಾಳಿ ಭಾರೀ ಪರಿಣಾಮವನ್ನು ಹೊಂದಿರುತ್ತದೆ ಎಂಬ ಕಾರಣಕ್ಕೆ ಉಗ್ರರನ್ನು ಅವುಗಳ ಮೇಲೆ ದಾಳಿ ಗುರಿ ರೂಪಿಸಿದ್ದರು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.

ತಪಾಸಣೆ:

ಈ ಇಬ್ಬರೂ ಶಂಕಿತ ಉಗ್ರರು, ಮುಂಬೈನ ಆಯಕಟ್ಟಿನ ಪ್ರದೇಶಗಳು, ದೇಗುಲಗಳು, ಚಾಬಾದ್‌ ಹೌಸ್‌, ಕೊಲಾಬಾ ಕೊಳಚೆ ಪ್ರದೇಶದಲ್ಲಿರುವ ನೌಕಾಪಡೆಯ ಹೆಲಿಪ್ಯಾಡ್‌ ಮೊದಲಾದವುಗಳನ್ನು ಪರಿಶೀಲಿಸಿದ್ದರು. ಇವುಗಳ ಫೋಟೋಗಳನ್ನು ಕೂಡಾ ಸಂಗ್ರಹಿಸಿದ್ದರು. ಒಂದೆಡೆ ಉಗ್ರರು ಇಂಥ ಕೇಂದ್ರಗಳ ಪರಿಶೀಲನೆ ನಡೆಸುತ್ತಿದ್ದರೆ, ಮತ್ತೊಂದೆಡೆ ದುಷ್ಕೃತ್ಯಕ್ಕೆ ಬೇಕಾಗುವ ಸ್ಫೋಟಕಗಳನ್ನು ತಯಾರಿಸಲು ಆಯ್ದ ವ್ಯಕ್ತಿಗಳಿಗೆ ತರಬೇತಿಯನ್ನೂ ನೀಡುತ್ತಿದ್ದರು ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಗೋಲ್ಡ್‌ ಮೆಡಲಿಸ್ಟ್‌ ಡಾಕ್ಟರ್‌ಗೆ ಐಸಿಸ್‌ ನಂಟು! ಭಾಷಾ ನಿಪುಣ, 18 ಪುಸ್ತಕಗಳ ಲೇಖಕ ಅರೆಸ್ಟ್

ಕರ್ನಾಟಕಕ್ಕೆ ಕರೆ ತಂದು ಪರಿಶೀಲನೆ:

ಪುಣೆ ಎಟಿಎಸ್‌ (ATS)ತಂಡ ಇತ್ತೀಚೆಗೆ ಇಮ್ರಾನ್‌ ಮತ್ತು ಯೂನುಸ್‌ನನ್ನು ಕರ್ನಾಟಕದ ಮಾರ್ಗದಲ್ಲೇ ಅಂಬೋಲಿ ಅರಣ್ಯಕ್ಕೆ ಕರೆದೊಯ್ದು ಟ್ರಯಲ್‌ ಬ್ಲಾಸ್‌ ನಡೆಸಿದ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ವರದಿಗಳು ತಿಳಿಸಿದ್ದವು.

Follow Us:
Download App:
  • android
  • ios