ಪೊಲೀಸ್ ಇಲಾಖೆ ಸೇರಿದ ಮುದ್ದು ಮುದ್ದಾದ ಅತೀ ಕಿರಿಯ ಉದ್ಯೋಗಿಗಳ ಫೋಟೋ ಶೂಟ್.!
ಸೇನೆ ರಕ್ಷಣಾ ಪಡೆ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಶ್ವಾನಗಳು ಕಾರ್ಯ ನಿರ್ವಹಿಸುವ ವಿಚಾರ ಎಲ್ಲರಿಗೂ ಗೊತ್ತು. ಕೆಲವು ಶ್ವಾನಗಳಂತೂ ದೇಶ ಸೇವೆ ಮಾಡುತ್ತಲ್ಲೇ ಉಸಿರುಚೆಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಇಲ್ಲೊಂದು ಕಡೆ ಹೀಗೆ ಇಲಾಖೆಗೆ ಸೇರಿದ ಪುಟ್ಟ ಮರಿಗಳಿಗೆ ಪೊಲೀಸ್ ಇಲಾಖೆ ಫೋಟೋ ಶೂಟ್ ಮಾಡಿಸಿದ್ದು, ಮುದ್ದು ಶ್ವಾನಗಳ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.
puppies
ಸೇನೆ ರಕ್ಷಣಾ ಪಡೆ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಶ್ವಾನಗಳು ಕಾರ್ಯ ನಿರ್ವಹಿಸುವ ವಿಚಾರ ಎಲ್ಲರಿಗೂ ಗೊತ್ತು. ಕೆಲವು ಶ್ವಾನಗಳಂತೂ ದೇಶ ಸೇವೆ ಮಾಡುತ್ತಲ್ಲೇ ಉಸಿರುಚೆಲ್ಲಿ ಹುತಾತ್ಮರಾಗಿದ್ದಾರೆ.
puppies
ಪೊಲೀಸ್ ಇಲಾಖೆ ಅಥವಾ ರಕ್ಷಣಾ ಪಡೆ ತನ್ನ ಇಲಾಖೆಗೆ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳುವ ಶ್ವಾನಗಳನ್ನು ಪುಟ್ಟ ಮರಿಗಳಿರುವಾಗಲೇ ಕರೆ ತಂದು ಅವುಗಳಿಗೆ ಮನುಷ್ಯರಿಗೆ ನೀಡುವಂತೆ ಕಠಿಣ ತರಬೇತಿ ನೀಡುತ್ತದೆ.
puppies
ಆದರೆ ಇಲ್ಲೊಂದು ಕಡೆ ಹೀಗೆ ಇಲಾಖೆಗೆ ಸೇರಿದ ಪುಟ್ಟ ಮರಿಗಳಿಗೆ ಪೊಲೀಸ್ ಇಲಾಖೆ ಫೋಟೋ ಶೂಟ್ ಮಾಡಿಸಿದ್ದು, ಮುದ್ದು ಶ್ವಾನಗಳ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.
puppies
ಅಂದಹಾಗೆ ಈ ಫೋಟೋ ಶೂಟ್ ಮಾಡಿರುವುದು ಭಾರತ ಸರ್ಕಾರದ ಪೊಲೀಸ್ ಇಲಾಖೆ ಅಲ್ಲ, ಇದು ತೈವಾನ್‌ನ ನ್ಯೂ ತೈಪೇ ಪೊಲೀಸ್ ಇಲಾಖೆ ಮಾಡಿಸಿದ ಫೋಟೋಶೂಟ್
puppies
ಇಲ್ಲಿ ಮುದ್ದು ಮುದ್ದು ಶ್ವಾನಗಳು ಜೊತೆ ಜೊತೆಯಾಗಿ ಆಕಳಿಸುತ್ತಲೇ ಫೋಟೋಗೆ ಫೋಸ್ ನೀಡಿದ್ದು, ನೋಡಲು ಬಹಳ ಮುದ್ದಾಗಿದೆ. ತೈವಾನ್ ಪೊಲೀಸ್ ಇಲಾಖೆ ಸೇರಿದ ಈ ಹೊಸ ಮುದ್ದು ಮುದ್ದಾಗಿರುವ ಉದ್ಯೋಗಿಗಳನ್ನು ನೋಡಿ ನೀವು ಒಂದು ಕ್ಷಣ ಪ್ರೀತಿಯಲ್ಲಿ ಬೀಳೋದಂತು ಪಕ್ಕಾ!
puppies
ಲಕ್ಕಿ ಸ್ಟಾರ್, ಶುಮನ್, ಫೀಡಾ, ಬ್ರದರ್, ಎಜೆ ಮತ್ತು ಫುಲ್ ಮೂನ್ ಇವರೇ ಪೊಲೀಸ್ ಇಲಾಖೆ ಸೇರಿದ ಹೊಸ ಉದ್ಯೋಗಿಗಳಾಗಿದ್ದು, ಲ್ಯಾಬ್ರಡಾರ್ ತಳಿಯ ಶ್ವಾನದ ಮರಿಗಳಾಗಿವೆ.
puppies
ಈ ಮರಿಗಳು ತೈಪೆಯಲ್ಲಿರುವ NPA ಯ K-9 ಘಟಕದಲ್ಲಿ ಬಾಂಬ್ ವಿರೋಧಿ ಮತ್ತು ಡ್ರಗ್ ಘಟಕದಲ್ಲಿ ತಮ್ಮ ತರಬೇತಿಯನ್ನು ಪ್ರಾರಂಭಿಸಿವೆ.
puppies
ಕೇವಲ 2 ತಿಂಗಳ ಈ ಮುದ್ದು ಮುದ್ದಾದ ಶ್ವಾನಗಳು ನಿದ್ದೆ ಕಂಗಳಿಂದಲೇ ಫೋಟೋಗಳಿಗೆ ಫೋಸ್ ಕೊಟ್ಟಿದ್ದು ಪುಟ್ಟ ಮಕ್ಕಳನ್ನು ನೆನಪು ಮಾಡುತ್ತಿವೆ. ಅವುಗಳ ಪುಟ್ಟು ಪುಟ್ಟ ಕಾಲುಗಳು ನಿದ್ದೆ ಕಂಗಳ ಜೊತೆ ಅವು ಪೊಲೀಸ್ ಸೈರನ್ ಗನ್, ಹಾಗೂ ಸಮವಸ್ತ್ರದೊಂದಿಗೆ ಫೋಸ್ ನೀಡಿವೆ. ಇವೆಲ್ಲವೂ ಈ ಮುದ್ದು ಶ್ವಾನಗಳಿಗೆ ದೊಡ್ಡದೆನಿಸುತ್ತಿದೆ.
puppies
ಈ ಮುದ್ದು ಶ್ವಾನಗಳು ಸ್ವಲ್ಪ ಸಮಯದಲ್ಲೇ ತರಬೇತಿ ಮುಗಿಸಿ ರಕ್ಷಣಾ ಪಡೆಯ ಸೇರಲಿದ್ದು, ಸ್ಫೋಟಕ ಹಾಗೂ ನಿಷೇಧಿತ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
puppies
ಈ ಮರಿಗಳು ತಮ್ಮ ಪೋಷಕರ ಹೆಜ್ಜೆ ಗುರುತನ್ನು ಅನುಸರಿಸಲಿದ್ದು, ಇವುಗಳ ತಾಯಿ ಯೆಲ್ಲೋ ಹಾಗೂ ತಂದೆ ಲೀಡರ್ ಕೂಡ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಪೊಲೀಸ್ ಇಲಾಖೆಯಲ್ಲಿದ್ದರೆ ತಂದೆ ಬಾಂಬ್ ಸ್ನಿಪ್ಪಿಂಗ್ ಸ್ಕಾಡ್‌ನಲ್ಲಿದ್ದಾರೆ.