ನೀವು ಶ್ವಾನಗಳ ಮಾಲೀಕರ: ಹಾಗಿದ್ರೆ ನಿಮಗೂ ಈ ಅನುಭವ ಆಗಿರಬೇಕು : Viral Video

ಸಾಮಾಜಿಕ ಜಾಲತಾಣಗಳಲ್ಲಿ ಮನೆ ಮಂದಿಯೊಂದಿಗೆ ಶ್ವಾನಗಳು ಮುದ್ದಾಡುವ, ಸಾಕಷ್ಟು ವಿಡಿಯೋಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ಶ್ವಾನ ಹಾಗೂ ಅವುಗಳ ಮಾಲೀಕನ  ನಡುವಿನ ನವಿರಾದ ಒಡನಾಟವನ್ನು ತೋರಿಸುವ ವಿಡಿಯೋವೊಂದು ವೈರಲ್ (viral video)ಆಗಿದೆ.

Are you dog owner, then you must watch this video akb

ಮನುಷ್ಯನ ಬೆಸ್ಟ್ ಫ್ರೆಂಡ್ ಆಗಿರುವ ಶ್ವಾನಗಳು ಮನುಷ್ಯರ ಒತ್ತಡಗಳನ್ನು ನಿವಾರಿಸುತ್ತವೆ. ಮನೆಯಲ್ಲೊಂದು ಶ್ವಾನವಿದ್ದರೆ ಧೈರ್ಯ ಬರುವುದು. ಜೊತೆಗೆ ಮನೆಯವರ ಒತ್ತಡ ನಿವಾರಣೆಯಾಗುವುದು, ಶ್ವಾನದೊಂದಿಗೆ ಸಮಯ ಕಳೆಯುವುದರಿಂದ ಮನುಷ್ಯನ ಒತ್ತಡ ನಿವಾರಣೆಯಾಗುತ್ತದೆ. ಇದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮನೆ ಮಂದಿಯೊಂದಿಗೆ ಶ್ವಾನಗಳು ಮುದ್ದಾಡುವ, ಸಾಕಷ್ಟು ವಿಡಿಯೋಗಳನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ಶ್ವಾನ ಹಾಗೂ ಅವುಗಳ ಮಾಲೀಕನ  ನಡುವಿನ ನವಿರಾದ ಒಡನಾಟವನ್ನು ತೋರಿಸುವ ವಿಡಿಯೋವೊಂದು ವೈರಲ್ (viral video)ಆಗಿದೆ.

ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಎರಡು ಲ್ಯಾಬ್ರಾಡಾರ್ ತಳಿಯ (Labrodar breed) ಶ್ವಾನಗಳು ನಿದ್ದೆಗೆ ಜಾರಿರುವ ಮನುಷ್ಯನನ್ನು ಮೇಲೇಳಿಸುತ್ತವೆ. ಆತ ಏಳುವವರೆಗೂ ಬಿಡದೇ ಈ ಶ್ವಾನಗಳು ಆತನ ಬೆಡ್ಶಿಟ್ ಎಳೆದು ಕಾಲುಗಳನ್ನು ನಿಧಾನಕ್ಕೆ ಕಚ್ಚುವ ಮೂಲಕ ಆತನಿಗೆ ಕಚಗುಳಿ ಇಡುತ್ತವೆ. ನಾಯಿ ಸಾಕದ ಸಾಮಾನ್ಯ ಮನುಷ್ಯರು ಹೇಗೆ ಏಳುತ್ತಾರೆ ಹಾಗೂ ನಾಯಿ ಸಾಕುವ ಶ್ವಾನಪ್ರಿಯರು ಬೆಳಗ್ಗೆ ಹೇಗೆ ಏಳುತ್ತಾರೆ ಎಂಬುದನ್ನು ತೋರಿಸುವ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ನಾಯಿ ಸಾಕದವರು ತಮ್ಮ ಮೊಬೈಲ್ ಫೋನ್‌ಗೆ (Mobile phone) ನಿದ್ದೆಗಣ್ಣಲ್ಲೇ ತಡಕಾಡುತ್ತಾ ಸಮಯ ನೋಡಿಕೊಂಡು ಮೇಲೇಳುತ್ತಾರೆ. ಆದರೆ ಶ್ವಾನ ಸಾಕಿದ ಮಾಲೀಕ ಮಾತ್ರ ಆತನಿಗೆ ಎಚ್ಚರವಾಗುವ ಮೊದಲೇ ಶ್ವಾನಗಳು ಆತನನ್ನು ಎಳಿಸುತ್ತವೆ. ಈ ವಿಡಿಯೋ ತುಂಬಾ ಮುದ್ದಾಗಿದ್ದು, ಈ ವಿಡಿಯೋ ನೋಡಿದ ಬಹುತೇಕ ಶ್ವಾನಪ್ರಿಯ ನೆಟ್ಟಿಗರು ಇದು ನಿಜ ಎಂದು ಹೇಳಿದ್ದಾರೆ. ladyandtheblues ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, 1.8 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

 

ಸಾಮಾನ್ಯವಾಗಿ ಮನೆಯಲ್ಲೊಂದು ಶ್ವಾನವಿದ್ದರೆ ನೀವು ಬೆಳಗ್ಗೆ ಜಾಸ್ತಿ ಹೊತ್ತು ಮಲಗಲು ಸಾಧ್ಯವಿಲ್ಲ. ಒಂದು ವಾಕ್ ಓಡಾಟ ಆಟಗಳನ್ನು ಇಷ್ಟಪಡುವ ಶ್ವಾನಗಳು ಮುಂಜಾನೆಯ ಹಾಗೂ ಸಂಜೆಯ ಸಮಯದಲ್ಲಿ ಆಟವಾಡಲು ಹೆಚ್ಚು ಇಷ್ಟಪಡುತ್ತವೆ. ಅಲ್ಲದೇ ಬೆಳಗ್ಗೆ ಎದ್ದಂತೆ ಶ್ವಾನಗಳಿಗೆ ನೈಸರ್ಗಿಕ ಕ್ರಿಯೆಗಳಿಗೆ (Nature call) ಹೋಗಲು ಆತುರವಾಗಿರುತ್ತವೆ. ಹಳ್ಳಿಗಳಲ್ಲಾದರೆ ಶ್ವಾನಗಳನ್ನು ರಾತ್ರಿಯ ಸಮಯದಲ್ಲಿ ಮನೆಯ ಹೊರಗೆ ಬಿಟ್ಟು ಬಿಡುತ್ತಾರೆ. ಹೀಗಾಗಿ ಅವುಗಳು ಅವುಗಳಷ್ಟಕ್ಕೆ ತಮ್ಮ ಕೆಲಸಗಳಿಗೆ ಹೋಗಿ ಬರುತ್ತವೆ. ಆದರೆ ಪೇಟೆಗಳಲ್ಲಿ ಈ ರೀತಿ ಇಲ್ಲ ಹೊರಗೆ ಬಿಟ್ಟರೆ ಇಲ್ಲಿ ಮುದ್ದಾದ ಶ್ವಾನಗಳನ್ನು ಇನ್ನಾರೋ ಕದ್ದೊಯ್ಯುವ ಸಾಧ್ಯತೆಯೂ ಇದೆ. ಹೀಗಾಗಿ ಮನೆಯ ಒಳಗಡೆಯೆ ಮನೆಯ ಓರ್ವ ಸದಸ್ಯನಂತೆ ಶ್ವಾನಗಳನ್ನು ಶ್ವಾನಪ್ರಿಯರು ಸಾಕುತ್ತಾರೆ.

 ನಾಯಿಯನ್ನು ಒಳಗೆ ಬಿಡದ ಪಬ್‌ಗೆ ಬರೋಬ್ಬರಿ 4.3 ಲಕ್ಷ ದಂಡ

ಅಲ್ಲದೇ ಶ್ವಾನಗಳ ಮಾಲೀಕರು ಅವುಗಳನ್ನು ನಗರಗಳಲ್ಲಿ ತಮ್ಮ ಮಕ್ಕಳಂತೆ ಸಲಹುವ ಕಾರಣ ಬೆಳಗ್ಗೆದಂತೆ ಶ್ವಾನಗಳು ತಮ್ಮ ಮಾಲೀಕನನ್ನು ಅಥವಾ ತಮ್ಮ ಕೇರ್ ಟೇಕರ್ (Care Taker) ಅನ್ನು ಮಲಗಲು ಬಿಡುವುದಿಲ್ಲ, ಜೋರಾಗಿ ಬೊಬ್ಬೆ ಹೊಡೆದು ಮಾಲೀಕನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತವೆ. ಏಳುವವರೆಗೂ ಶ್ವಾನಗಳು ಅವನನ್ನು ಸುಮ್ಮನೆ ಬಿಡುವುದಿಲ್ಲ. ಬೆಳಗ್ಗೆ ಬೇಗ ಏಳುವುದು ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು, ಈ ಶ್ವಾನಗಳು ಮನುಷ್ಯೆನ ಆರೋಗ್ಯ ಕಾಪಾಡುತ್ತವೆ ಎಂದರೆ ತಪ್ಪಾಗಲಾರದು. 

ಮುದ್ದಿನ ಶ್ವಾನದ ಚಿಕಿತ್ಸೆಗೆ ಹಣ ಹೊಂದಿಸಲು ಪ್ಲಾಸ್ಮಾ ಮಾರ್ತಿದ್ದಾಳೆ ಮಹಿಳೆ !

Latest Videos
Follow Us:
Download App:
  • android
  • ios