ವಿಮಾನ ಹಾರಿಸುವ ಮೊದಲು ಅಪ್ಪನ ಆಶೀರ್ವಾದ ಪಡೆದ ಮಹಿಳಾ ಪೈಲಟ್
ಇಲ್ಲೊಂದು ಕಡೆ ಪೋಷಕರೊಬ್ಬರು ತಮ್ಮ ಮಗಳ ಸಾಧನೆಯಿಂದ ಭಾವುಕರಾಗಿದ್ದಾರೆ. ಅದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ: ಮಕ್ಕಳ ಖುಷಿಯಲ್ಲಿಯಶಸ್ಸಿನಲ್ಲಿ ಪೋಷಕರು ತಮ್ಮ ಖುಷಿಯನ್ನು ಕಾಣುತ್ತಾರೆ. ಮಕ್ಕಳ ಆಸೆ ಗುರಿಗಳನ್ನು ಪೂರೈಸಲು ತಾವು ಮಾಡುತ್ತಾರೆ. ಹೀಗೆ ತ್ಯಾಗ ಮಾಡಿದ ಪೋಷಕರಿಗೆ ಮಕ್ಕಳು ತಾವೆನಿಸಿದಂತೆ ಉನ್ನತ ಹುದ್ದೆಗೆ ಏರಿದಾಗ ಹೆಸರು ಮಾಡಿದಾಗ ಇನ್ನಿಲ್ಲದ ಸಂತಸವಾಗುತ್ತದೆ. ತಮ್ಮ ತ್ಯಾಗಕ್ಕೊಂದು ಬೆಲೆ ಬಂತು ಎಂದು ಪೋಷಕರು ಹೆಮ್ಮೆಯಿಂದ ಬೀಗುತ್ತಾರೆ. ಹಾಗೆಯೇ ಇಲ್ಲೊಂದು ಕಡೆ ಪೋಷಕರೊಬ್ಬರು ತಮ್ಮ ಮಗಳ ಸಾಧನೆಯಿಂದ ಭಾವುಕರಾಗಿದ್ದಾರೆ. ಅದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೊಂದು ತಂದೆ (Father) ಮಗಳ ವಿಡಿಯೋ, ಪೈಲಟ್ ಆಗಿರುವ ಮಗಳು (daughter) ತನ್ನ ತಂದೆಯನ್ನು ತಾನೇ ಹಾರಿಸುತ್ತಿರುವ ವಿಮಾನದಲ್ಲಿ ಕರೆದೊಯ್ಯುತ್ತಾಳೆ. ಇದಕ್ಕೂ ಮೊದಲು ಆಕೆ ತಂದೆಯ ಆಶೀರ್ವಾದ ಪಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗಳ ಖುಷಿ ಹಾಗೂ ತಂದೆಯ (Father) ಬೆಲೆ ಕಟ್ಟಲಾಗದ ಭಾವನೆಗಳು ಒಂದೇ ಫ್ರೇಮ್‌ನಲ್ಲಿ ಸೆರೆ ಆಗಿವೆ. ಕೃತದ್ನ್ಯಾ ಹಲೇ (Krutadnya Hale) ಎಂಬ ಹೆಸರಿನ ಪೈಲಟ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನ ಏರ್ ಬಸ್ 320ಯಲ್ಲಿ ಈ ವಿಡಿಯೋ ಸೆರೆ ಆಗಿದ್ದು, ಈ ವಿಡಿಯೋಗೆ ಮಹಿಳಾ ಪೈಲಟ್, "ಪೈಲಟ್ ಮಗಳು ಅಪ್ಪನನ್ನು ಹಾರಿಸುತ್ತಿದ್ದಾಳೆ. ಆತನ ಆನಂದ ಭಾಷ್ಪ" ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವಿಮಾನ ಹಾರಿಸುವ ಮೊದಲು ಅಪ್ಪನ ಆಶೀರ್ವಾದ ಪಡೆದೆ. ನನ್ನ ಪೋಷಕರ ಆಶೀರ್ವಾದವಿಲ್ಲದೇ ನಾನು ವಿಮಾನ ಹಾರಿಸುವುದಿಲ್ಲ. ಕೆಲವೊಮ್ಮೆ ನಾನು ಮುಂಜಾನೆ ಹೊರಟು ಬಿಡುತ್ತೇನೆ. ಮನೆಯನ್ನು ಮುಂಜಾನೆ 3 ರಿಂದ 4 ಗಂಟೆಗೆಲ್ಲಾ ಬಿಡುತ್ತೇನೆ. ಈ ವೇಳೆ ನನ್ನ ಪೋಷಕರು ಗಾಢ ನಿದ್ದೆಯಲ್ಲಿರುತ್ತಾರೆ. ಆದರೂ ಅವರ ಪಾದಗಳನ್ನು ಮುಟ್ಟದೇ ಮನೆಯಿಂದ ಹೊರಡುವುದು ಅಪೂರ್ಣ ಎನಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಮಹಿಳಾ ಪೈಲಟ್ ವಿಮಾನದಲ್ಲಿ ಕುಳಿತಿದ್ದ ತನ್ನ ತಂದೆಯ ಕಾಲುಗಳಿಗೆ ಬಿದ್ದು, ಆಶೀರ್ವಾದ ಪಡೆಯುತ್ತಾಳೆ. ನಂತರ ತನ್ನ ತಂದೆಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾಳೆ. ಈ ವೇಳೆ ಅವರು ತುಂಬಾ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆದಾಗಿನಿಂದ ಈ ವಿಡಿಯೋವನ್ನು 5.6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಈ ತಂದೆ ಮಗಳ ಬಾಂಧವ್ಯವನ್ನು ಕೊಂಡಾಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಭಾವುಕರಾಗಿದ್ದು, ಕೆಲವರು ತಮ್ಮ ತಂದೆಯೊಂದಿಗಿನ ಬಾಂಧವ್ಯವನ್ನು ಹೇಳಿಕೊಂಡಿದ್ದಾರೆ.
ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿ ಇತಿಹಾಸ ಬರೆದ ಅಪ್ಪ ಮಗಳು
ಅನೇಕರು ಕಾಮೆಂಟ್ ಮಾಡಿದ್ದು, ಆಕೆ ತನ್ನ ತಂದೆಯನ್ನು ಗೌರವಿಸಿದ ರೀತಿ ಖುಷಿ ನೀಡಿತು ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನನ್ನ ಕಣ್ಣಲ್ಲೂ ನೀರು ತರಿಸಿತು. ನಿಮ್ಮಂತಹ ಮಹಿಳೆಯರ ಬಗ್ಗೆ ಹೆಮ್ಮೆಯೆನಿಸುತ್ತಿದೆ. ನೀವು ನಮಗೆ ಸದಾ ಪ್ರೇರಣೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾಕೋ ಗೊತ್ತಿಲ್ಲ ಈ ವಿಡಿಯೋ ನೋಡಿದ ಬಳಿಕ ನಾನು ಭಾವುಕನಾದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಅಪ್ಪ ಮಗಳ ಯರ್ರಾಬಿರ್ರಿ ಕುಣಿತಕ್ಕೆ ಚಿಂದಿ ಆಯ್ತು ಡಾನ್ಸ್ ಫ್ಲೋರ್