ಎಸಿ ಕೋಚ್‌ ಪ್ರಯಾಣಿಕರಿಗೆ ಮಾತ್ರ ಹಾಸಿಗೆ-ದಿಂಬು-ಹೊದಿಕೆ ನೀಡುತ್ತಿತ್ತು. ಇದೀಗ ನಾನ್‌ ಎಸಿ ಸ್ಲೀಪರ್‌ ಕೋಚ್‌ ಪ್ರಯಾಣಿಕರು ಕೂಡ ಈ ಸೌಲಭ್ಯ ಪಡೆಯಬಹುದು. ಜ.1ರಿಂದ ನಾನ್‌ ಎಸಿ ಸ್ಲೀಪರ್‌ ಕೋಚ್‌ ಪ್ರಯಾಣಿಕರಿಗೆ 50 ರು. ಬಾಡಿಗೆ ಆಧಾರದಲ್ಲಿ ತಲೆದಿಂಬು ಬೆಡ್‌ಶೀಟ್‌ ವಿತರಿಸಲು ನಿರ್ಧರಿಸಿದೆ.

ನವದೆಹಲಿ: ಈವರೆಗೆ ಎಸಿ ಕೋಚ್‌ ಪ್ರಯಾಣಿಕರಿಗೆ ಮಾತ್ರ ರೈಲ್ವೆ ಇಲಾಖೆ ಹಾಸಿಗೆ-ದಿಂಬು-ಹೊದಿಕೆ ನೀಡುತ್ತಿತ್ತು. ಇದೀಗ ನಾನ್‌ ಎಸಿ ಸ್ಲೀಪರ್‌ ಕೋಚ್‌ ಪ್ರಯಾಣಿಕರು ಕೂಡ ಈ ಸೌಲಭ್ಯ ಪಡೆಯಬಹುದು. ಜ.1ರಿಂದ ನಾನ್‌ ಎಸಿ ಸ್ಲೀಪರ್‌ ಕೋಚ್‌ ಪ್ರಯಾಣಿಕರಿಗೆ ನಿಗದಿತ 50 ರು. ಬಾಡಿಗೆ ಆಧಾರದಲ್ಲಿ ತಲೆದಿಂಬು ಹಾಗೂ ಬೆಡ್‌ಶೀಟ್‌ ವಿತರಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.

10 ರೈಲುಗಳಲ್ಲಿ ಈ ಯೋಜನೆ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ

ಚೆನ್ನೈ-ಮಂಗಳೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಚೆನ್ನೈಎಗ್ಮೋರ್‌-ಮಂಗಳೂರು ಎಕ್ಸ್‌ಪ್ರೆಸ್‌ ಸೇರಿ 10 ರೈಲುಗಳಲ್ಲಿ ಈ ಯೋಜನೆ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಇದರ ಯಶಸ್ಸು ನೋಡಿಕೊಂಡು ಉಳಿದ ರೈಲುಗಳಿಗೂ ಇದನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ.

ದಕ್ಷಿಣ ರೈಲ್ವೆಯ ಈ ಪ್ರಯತ್ನದಿಂದಾಗಿ ಮಳೆಗಾಲ ಹಾಗೂ ಚಳಿಗಾಲದ ಅವಧಿಯಲ್ಲಿ ನಾನ್‌ ಎಸಿ ಸ್ಲೀಪರ್‌ ಕೋಚ್‌ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಈವರೆಗೆ ಎಸಿ ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುವವರಿಗೆ ಮಾತ್ರ ಬೆಡ್‌ಶೀಟ್‌, ತಲೆದಿಂಬು ಸೌಲಭ್ಯ

ಈವರೆಗೆ ಎಸಿ ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸುವವರಿಗೆ ಮಾತ್ರ ಬೆಡ್‌ಶೀಟ್‌, ತಲೆದಿಂಬು ಸೌಲಭ್ಯ ಇರುತ್ತಿತ್ತು. ಆದರೆ, ಅವರಿಗೆ ಶುಲ್ಕ ರಹಿತವಾಗಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಾನ್‌ ಸ್ಲೀಪರ್‌ ಕೋಚ್‌ ಪ್ರಯಾಣಿಕರಿಗೆ ತಲೆದಿಂಬು, ಹೊದಿಕೆ ಸೌಲಭ್ಯ ಕಲ್ಪಿಸುತ್ತಿರುವುದು ಇದೇ ಮೊದಲು.

ಶುಲ್ಕ ಎಷ್ಟು?:

ಕವರ್‌ ಸಹಿತ ತಲೆದಿಂಬು ಹಾಗೂ ಬೆಡ್‌ಶೀಟ್‌ಗೆ 50 ರು. ಬಾಡಿಗೆ ಪಡೆದರೆ, ಕೇವಲ ಬೆಡ್‌ಶೀಟ್‌ಗೆ 20 ರು. ಹಾಗೂ ಕವರ್‌ ಸಹಿತ ತಲೆದಿಂಬು ಬೇಕಿದ್ದರೆ 30 ರು. ವಸೂಲಿ ಮಾಡಲಾಗುತ್ತದೆ.