ನವದೆಹಲಿ(ನ.14): ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ಹಲವು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿದೆ. ಹಲವು ಲಸಿಕೆ ಪ್ರಯೋಗ ಆರಂಭಿಕ ಯಶಸ್ಸು ತಂದುಕೊಟ್ಟಿದೆ. ಆದರೆ Pfizer ಲಸಿಕೆ ಇದೀಗ ಕೊರೋನಾ ಸೋಂಕಿತರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. Pfizer ಲಸಿಕೆಯನ್ನು 6 ದೇಶದ ಸ್ವಯಂ ಪ್ರೇರಿತ 43,500 ಮಂದಿಗೆ ಪ್ರಯೋಗ ಮಾಡಲಾಗಿದೆ. ಆದರೆ ಪರಿಣಾಮ ಮಾತ್ರ ನಿರೀಕ್ಷಿತವಾಗಿಲ್ಲ.

ಕೊರೋನಾ ವಿರುದ್ಧ ಹೋರಾಟದಲ್ಲಿ remdesivir ಯಶಸ್ವಿ; ಬೆಂಗಳೂರು ವೈದ್ಯರ ಅಧ್ಯಯನ!

ಕೊರೋನಾ ಸೋಂಕಿತರಿಗೆ Pfizer ಲಸಿಕೆ ಪ್ರಯೋಗಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಈ ಲಸಿಕೆ ತೆಗೆದುಕೊಂಡ ಹಲವರಲ್ಲಿ ತಲೆನೋವು, ಜ್ವರ ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಕಂಡು ಬಂದಿದೆ. ಈ ಕುರಿತು ಲಸಿಕೆ ಪಡೆದುಕೊಂಡ ಸ್ವಯಂಪ್ರೇರಿತರು ಈ ಕುರಿತು ವರದಿ ಮಾಡಿದ್ದಾರೆ. 

ಕೊರೋನಾ ದೂರ? ರಷ್ಯಾದಿಂದ ಬಂತು ಬಹುದೊಡ್ಡ ಗುಡ್‌ ನ್ಯೂಸ್!.

44 ವರ್ಷದ ಗ್ಲೆನ್ ಡೆಶೀಲ್ಡ್ಸ್ Pfizer ಲಸಿಕೆ ಪಡೆದ ಬಳಿಕ ತೀವ್ರ ತಲೆನೋವು ಹಾಗೂ ಆಸ್ವಸ್ಥತೆ ಕಂಡು ಬಂದಿದೆ. ಆದರೆ ಕೆಲ ಹೊತ್ತಿನ ಬಳಿಕ ಎಲ್ಲವೂ ಸರಿಯಾಗಿದೆ ಎಂದು ಡೆಶೀಲ್ಡ್ಸ್ ಹೇಳಿದ್ದಾರೆ. ಮೊದಲ ಡೊಸೇಜ್ ಪಡೆದ ಬಳಿಕ ಈ ರೀತಿ ಆಗಿದೆ ಎಂದು ಡೆಶೀಲ್ಡ್ಸ್ ಹೇಳಿದ್ದಾರೆ.

Pfizer ಲಸಿಕೆ ಪ್ರಾಯೋಗಿಕ ಹಂತದಲ್ಲಿ ಬಹುತೇಕ ಯಶಸ್ವಿಯಾಗಿದೆ. ಶೇಕಡಾ 90 ರಷ್ಟು ಕೊರೋನಾ ವಿರುದ್ಧ ಹೋರಾಡುವಲ್ಲಿ ಫಲಪ್ರದವಾಗಿದೆ ಎಂದು Pfizer ಹೇಳಿದೆ.