ಕೊರೋನಾ ವೈರಸ್‌ಗೆ ರಷ್ಯಾ ಸಿದ್ಧಪಡಿಸಿರುವ ಸ್ಪುಟ್ನಿಕ್‌-5 ಲಸಿಕೆ | ರಷ್ಯಾದ ಸ್ಪುಟ್ನಿಕ್‌ ಲಸಿಕೆ 92% ಪರಿಣಾಮಕಾರಿ|  ಸ್ಪುಟ್ನಿಕ್‌-5 ಲಸಿಕೆ 3ನೇ ಹಂತದಲ್ಲಿ 40000 ಸ್ವಯಂ ಸೇವಕರ ಮೇಲೆ ಪ್ರಯೋಗ

ಹೈದರಾಬಾದ್(ನ.12)‌: ಕೊರೋನಾ ವೈರಸ್‌ಗೆ ರಷ್ಯಾ ಸಿದ್ಧಪಡಿಸಿರುವ ಸ್ಪುಟ್ನಿಕ್‌-5 ಲಸಿಕೆ ಶೇ.92ರಷ್ಟುಪರಿಣಾಮಕಾರಿ ಆಗಿದೆ ಎಂದು ರಷ್ಯಾದ ಗಮಾಲೇಯಾ ರಿಸಚ್‌ರ್‍ ಇನ್ಸ್‌ಸ್ಟಿಟ್ಯೂಟ್‌ ತಿಳಿಸಿದೆ.

ಸ್ಪುಟ್ನಿಕ್‌-5 ಲಸಿಕೆಯನ್ನು 3ನೇ ಹಂತದಲ್ಲಿ 40000 ಸ್ವಯಂ ಸೇವಕರ ಮೇಲೆ ಪ್ರಯೋಗಕ್ಕೆ ಒಳಪಡಿಸಲಾಗಿದೆ. 16 ಸಾವಿರ ಸ್ವಯಂ ಸೇವಕರು ಮೊದಲ ಲಸಿಕೆ ಸ್ವೀಕರಿಸಿದ 21 ದಿನಗಳ ಬಳಿಕ ಅವರ ಮೇಲೆ ಉಂಟಾದ ಪರಿಣಾಮವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಇದರ ಆಧಾರದ ಮೇಲೆ ಲಸಿಕೆ ಶೇ.92ರಷ್ಟು ಪರಿಣಾಮಕಾರಿ ಆಗಿರುವುದು ದೃಢಪಟ್ಟಿದೆ.

ಇತ್ತಿಚೆಗಷ್ಟೇ ಅಮೆರಿಕ ಮೂಲದ ಫೈಝರ್‌ ಕಂಪನಿ ತನ್ನ ಲಸಿಕೆ ಶೇ.90ರಷ್ಟುಪರಿಣಾಮಕಾರಿ ಆಗಿರುವುದು ಖಚಿತಪಟ್ಟಬೆನ್ನಲ್ಲೇ, ರಷ್ಯಾದ ಲಸಿಕೆ ಕೂಡ ಯಶಸ್ವಿ ಆಗಿದೆ.

ಭಾರತದಲ್ಲಿ ಸ್ಪಟ್ನಿಕ್‌- 5 ಲಸಿಕೆ ಪ್ರಯೋಗ ಹಾಗೂ ವಿತರಣೆಗೆ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಫ್‌) ಜೊತೆ ಹೈದರಾಬಾದ್‌ ಮೂಲದ ಡಾ.ರೆಡ್ಡೀಸ್‌ ಔಷಧ ತಯಾರಿಕಾ ಕಂಪನಿ ಕೈಜೋಡಿಸಿದೆ. ಭಾರತದಲ್ಲಿ ಲಸಿಕೆ ಬಳಕೆಗೆ ಅನುಮೋದನೆ ಸಿಕ್ಕ ಬಳಿಕ ಆರ್‌ಐಐಎಫ್‌ ಡಾ.ರೆಡ್ಸೀಸ್‌ ಸಂಸ್ಥೆಗೆ 10 ಕೋಟಿ ಲಸಿಕೆಗಳನ್ನು ಪೂರೈಕೆ ಮಾಡಲಿದೆ.