Asianet Suvarna News Asianet Suvarna News

ಇಸ್ಲಾಮಿಕ್ ದೇಶಕ್ಕಾಗಿ ಸಂವಿಧಾನ, ಅಂಬೇಡ್ಕರ್‌ ಹೆಸರೇ ಗುರಾಣಿ, ಪಿಎಫ್​ಐನ ಮಹಾ ಷಡ್ಯಂತ್ರ!

ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಮಿಷನ್ 2047 ಹೆಸರಿನ ವಿಶೇಷ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

PFI plan of Action for india by 2047 aiming to make Country Islamic state document shows san
Author
Bengaluru, First Published Jul 15, 2022, 5:48 PM IST

ನವದೆಹಲಿ (ಜುಲೈ 15): ಭಾರತ ದೇಶವನ್ನು 2047ರ ವೇಳೆಗೆ ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಕಾರ್ಯಾಚರಣೆಗೆ ಸಂಬಂಧಪಟ್ಟಂತೆ ಬಿಹಾರ ಪೊಲೀಸರು ಗುರುವಾರ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಅವರಲ್ಲಿದ್ದ ದಾಖಲೆಯನ್ನು ವಶಪಡಿಸಿಕೊಂಡಾಗ, ಸಾಕಷ್ಟು ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿದೆ. ಅದರಲ್ಲಿ ಪ್ರಮುಖವಾಗಿರುವುದು, 2047ರ ಒಳಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿಸೋ ಷಡ್ಯಂತ್ರ. ಬಿಹಾರ ಪೊಲೀಸರ ತನಿಖೆಯ ವೇಳೆ ಈ ಮಹಾ ಷಡ್ಯಂತ್ರ ಬಲಯಾಗಿದೆ. ಇದಕ್ಕಾಗಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸೂತ್ರಧಾರಿ ಎನ್ನುವುದೂ ಗೋಚರವಾಗಿದೆ. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸೋ ಪ್ರಯತ್ನದ ಪ್ಲಾನ್ ಇವರದಾಗಿದೆ. ‘ಇಂಡಿಯಾ ವಿಷನ್ 2047-ಇಸ್ಲಾಮಿಕ್ ಆಳ್ವಿಕೆ ಕಡೆಗೆ ಭಾರತ’ ಎನ್ನುವ ಹೆಸರಲ್ಲಿ ಬಿಹಾರದಲ್ಲಿ ಬಂಧಿತರಾದ ಪಿಎಫ್‌ಐ ಮುಖಂಡರ ಬಳಿ ಬ್ಲ್ಯೂಪ್ರಿಂಟ್‌ ಸಿಕ್ಕಿದೆ. ಒಟ್ಟಾರೆ 8 ಪುಟಗಳ ದಾಖಲೆಯನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಫ್​ಐ ಸಂಘಟನೆಯಲ್ಲಿ ಆಂತರಿಕವಾಗಿ ರಹಸ್ಯ ಕಾರ್ಯಸೂಚಿಯ ದಾಖಲೆ ಇದ್ದು, ಇಸ್ಲಾಮಿಕ್ ಆಡಳಿತ ಸ್ಥಾಪನೆಗಾಗಿ ಶಸ್ತ್ರಾಸ್ತ್ರ ಪೂರೈಕೆ ಮತ್ತು ತರಬೇತಿಯ ಪ್ಲಾನ್ ಕೂಡ ಮಾಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಸ್ಲಾಮಿಕ್‌ ರಾಷ್ಟ್ರವನ್ನು ಸಾಧನೆ ಮಾಡಲು ಭಾರತದ ಸಂವಿಧಾನ, ಅಂಬೇಡ್ಕರ್‌ ಎನ್ನುವ ಹೆಸರನ್ನೇ ಗುರಾಣಿಯನ್ನಾಗಿ ಮಾಡಿಕೊಳ್ಳುವ ತಂತ್ರವನ್ನೂ ಹಣೆಯಲಾಗಿದೆ.

ಒಟ್ಟು ನಾಲ್ಕು ಹಂತದಲ್ಲಿ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ (Islamic state) ಮಾಡುವ ಪ್ಲ್ಯಾನ್‌ (Plan) ಮಾಡಲಾಗಿದೆ. ಮೊದಲ ಹಂತದಲ್ಲಿ, ದೇಶದಲ್ಲಿ ಭಾರತೀಯ ಎಂಬುದಕ್ಕಿಂತಲೂ ಮುಸ್ಲಿಂ ಎಂಬ ಮನೋಭಾವ ಬೆಳೆಸಬೇಕು ಅದರೊಂದಿಗೆ ಮುಸ್ಲಿಂ ಯುವಕರ ನೇಮಕಾತಿ ಮಾಡಿ ಶಸ್ತ್ರಾಸ್ತ್ರ ತರಬೇತಿ ನೀಡಬೇಕು. ಶಸ್ತ್ರಾಸ್ತ್ರಗಳಲ್ಲಿ ಪ್ರಮುಖವಾಗಿ ಕತ್ತಿ, ರಾಡ್, ಇತರೆ ಶಸ್ತ್ರಾಸ್ತ್ರ ಬಳಕೆ, ದಾಳಿ, ರಕ್ಷಣೆ ಬಗ್ಗೆ ತರಬೇತಿ ನೀಡಬೇಕು ಎಂದು ದಾಖಲೆಯಲ್ಲಿ ತಿಳಿಸಲಾಗಿದೆ.


2ನೇ ಹಂತದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ದೇಶದಲ್ಲಿ ಹೋರಾಟಕ್ಕೆ ಸಜ್ಜುಗೊಳಿಸಬೇಕು.  ಆರ್​ಎಸ್​ಎಸ್​ ಬೆಂಬಲಿತ ಸರ್ಕಾರ ಇಸ್ಲಾಂ ದಮನ ಮಾಡುತ್ತಿದೆ ಎಂದು ಮುಸ್ಲಿಮರನ್ನು ನಂಬಿಸಬೇಕು ಹಾಗೂ ಆರ್.ಎಸ್.ಎಸ್ (RSS) ಸರ್ಕಾರ ಹಿಂದೂ ದೇಶ ಮಾಡಿ, ಮುಸ್ಲಿಮರನ್ನ (Muslim) ಓಡಿಸುತ್ತದೆ ಎಂದು ಮನವರಿಕೆ ಮಾಡಬೇಕು ಎಂದು ಮುಸ್ಲಿಮರಲ್ಲಿ ತುಂಬಬೇಕು ಎಂದು ಬರೆಯಲಾಗಿದೆ. ಮುಸ್ಲಿ ತೀವ್ರವಾದವನ್ನು ಹೆಚ್ಚಿಸುವ ಸಲುವಾಗಿ ಅವರಿಗೆ ಬಾಬ್ರಿ ಮಸೀದಿ (babri Masjid) ಧ್ವಂಸದ ಘಟನೆಯನ್ನು ನೆನಪಿಸುತ್ತಲೇ ಇರಬೇಕು, ನೇರವಾಗಿ ಪಿಎಫ್‌ಐ (PFI) ಕೇಡರ್​ನಲ್ಲಿರುವವರಿಗೆ ಗನ್, ಸ್ಫೋಟಕಗಳ ತರಬೇತಿಯನ್ನು ನೀಡಬೇಕು ಎಂದು ಹೇಳಲಾಗಿದೆ.

ಸಂವಿಧಾನ, ಅಂಬೇಡ್ಕರ್‌ ಗುರಾಣಿ: ಇದಕ್ಕಿಂತ ಮಹತ್ವದ ಅಂಶ ಏನೆಂದರೆ, ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಉದ್ದೇಶ ಸಾಧನೆಗೆ ದೇಶದ ರಾಷ್ಟ್ರಧ್ವಜ, ಸಂವಿಧಾನ ಹಾಗೂ ಅಂಬೇಡ್ಕರ್‌ (Ambedkar) ಅವರ ಹೆಸರುಗಳನ್ನು ಗುರಾಣಿಯಂತೆ ಬಳಸಬೇಕು ಎಂದು ಹೇಳಿರುವ ವಿಚಾರ. ದೇಶದ ಪೊಲೀಸ್‌ (Police), ನ್ಯಾಯಾಂಗ ವ್ಯವಸ್ಥೆ (Law) ಹಾಗೂ ಸೇನೆಯೊಳಗೆ (Army) ಪಿಎಫ್‌ಐ ಸದಸ್ಯರು ನುಸಳಬೇಕು. ಸಾಮೂಹಿಕವಾಗಿ ಮುಸ್ಲಿಮರನ್ನ ಸಜ್ಜುಗೊಳಿಸಿ ಇಸ್ಲಾಮಿಕ್ ಆಳ್ವಿಕೆ ಸ್ಥಾಪಿಸುವ ಗುರಿ ಬಗ್ಗೆ ಅರಿವು ಮೂಡಿಸಬೇಕು ಎಂದು ಬರೆಯಲಾಗಿದೆ.


ಇನ್ನು ಮೂರನೇ ಹಂತದಲ್ಲಿ, ದಲಿತರು, ಆದಿವಾಸಿಗಳು, ಹಿಂದುಳಿದವರ ಮತಬ್ಯಾಂಕ್ ಅನ್ನು ಪಕ್ಷ ಗಟ್ಟಿ ಮಾಡಿಕೊಳ್ಳಬೇಕು. ಶೇ.50ರಷ್ಟು ಮುಸ್ಲಿಮರು ಮತ್ತು ದಲಿತರು, ಆದಿವಾಸಿಗಳು, ಹಿಂದುಳಿದವರ ಶೇ.10ರಷ್ಟು ಬೆಂಬಲ ಗಳಿಸಬೇಕು. ಹಿಂದೂಗಳನ್ನ (Hindu) ವಿಭಜಿಸಲು ದಲಿತರು, ಆದಿವಾಸಿಗಳು, ಹಿಂದುಳಿದವರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ. ಆರ್​ಎಸ್​ಎಸ್​ ಎಂದಿಗೂ ಮೇಲ್ವರ್ಗದ ಹಿಂದೂಗಳ ಪರ ಎಂದು ಬಿಂಬಿಸಬೇಕು, ತಾವು ಸೆಕ್ಯುಲರ್‌ ಪಕ್ಷಗಳು ಎಂದು ಹೇಳುವಂಥ ಪಕ್ಷಗಳನ್ನು ಬಿಟ್ಟು, ಮುಸ್ಲಿಂ-ಎಸ್​ಸಿ,ಎಸ್​ಟಿ, ಒಬಿಸಿಗಳಿಗೆ ಪ್ರತ್ಯೇಕ ಪಕ್ಷ ಬೇಕೆಂದು ಬಿಂಬಿಸಬೇಕು ಎಂದು ಬರೆಯಲಾಗಿದೆ.

ಇದನ್ನೂ ಓದಿ: ಕಾನ್ಪುರ ಹಿಂಸಾಚಾರದಲ್ಲಿ ಪಿಎಫ್‌ಐ ಕೈವಾಡಕ್ಕೆ ಸಾಕ್ಷ್ಯ!

ಇನ್ನು ನಾಲ್ಕನೇ ಹಾಗೂ ಕೊನೆಯ ಹಂತದಲ್ಲಿ,  ಎಲ್ಲಾ ಮುಸ್ಲೀಮರು ಬೇರೆ ಪಕ್ಷಗಳನ್ನ ಬದಿಗೊತ್ತಿ ನಮ್ಮ ಪಕ್ಷ ಮುಸ್ಲಿಂ ನಾಯಕತ್ವ ವಹಿಸಬೇಕು, ಈ ಹಂತದಲ್ಲಿ ಪಕ್ಷ ಶೇ.50ರಷ್ಟು ಎಸ್​ಸಿ,ಎಸ್​ಟಿ, ಒಬಿಸಿಗಳ ಬೆಂಬಲ ಪಡೆಯಬೇಕು. ಇಷ್ಟು ಬೆಂಬಲ ಸಿಕ್ಕರೆ ಪಕ್ಷ ಕೇಂದ್ರದಲ್ಲಿ ಮುಸ್ಲೀಮರ ನಾಯಕತ್ವ ಬರುವುದು ಖಚಿತವಾಗುತ್ತದೆ. ಅಧಿಕಾರಕ್ಕೆ ಬಂದ ಮೇಲೆ ನ್ಯಾಯಾಂಗ, ಸೇನೆ, ಪೊಲೀಸ್ ವ್ಯವಸ್ಥೆಗೆ ನಿಷ್ಠ ಸದಸ್ಯರ ತುಂಬಿಸಬೇಕು. ವಿದೇಶಿ ಇಸ್ಲಾಮಿಕ್ ದೇಶಗಳಿಂದ ಹಣ ಮತ್ತು ಇತರೆ ಸಹಾಯ ಪಡೆಯಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: Asianet Suvarna Focus: ಬ್ಯಾನ್ ಆಗುತ್ತಾ PFI? ನಿಷೇಧ ಮಾಡುವುದು ಅಷ್ಟು ಸುಲಭನಾ?

ಇಸ್ಲಾಮಿಕ್‌ ನಿಯಮದಂತೆ ಸಂವಿಧಾನ: ಈ ಎಲ್ಲಾ ನಾಲ್ಕು ಹಂತಗಳು ಯಶಸ್ವಿಯಾಗಿ ಮುಗಿದ ಬಳಿಕ  ಇಸ್ಲಾಮಿಕ್ ನಿಯಮಗಳಂತೆ ಹೊಸ ಸಂವಿಧಾನವನ್ನು ರಚಿಸಬೇಕು. ಬಾಹ್ಯ ಶಕ್ತಿಗಳ ಸಹಾಯದ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಸಂವಿಧಾನ ರಚಿಸಬೇಕು ಎನ್ನಲಾಗಿದೆ. ವ್ಯವಸ್ಥಿತವಾಗಿ ವಿರೋಧಿಗಳ ಮಟ್ಟಹಾಕಿ ಇಸ್ಲಾಮಿಕ್ ಆಳ್ವಿಕೆ ವೈಭವ ಸ್ಥಾಪನೆಯಾಗಬೇಕು ಎಂದು ತಿಳಿಸಲಾಗಿದೆ.

Follow Us:
Download App:
  • android
  • ios