* ಶ್ರೀಗಂಗಾನಗರದಲ್ಲಿ  ಪೆಟ್ರೋಲ್‌ 125 ರು. ಡೀಸೆಲ್‌ 115 ರು.ನತ್ತ* ತೈಲ ದರ ಏರಿಕೆಗೆ ಕಡಿವಾಣ  ಇಲ್ಲ* ನಿರಂತರವಾಗಿ ಏರುತ್ತಿದೆ  ತೈಲ ಮತ್ತು ಅಡುಗೆ ಅನಿಲ*  ದಾಖಲೆಯನ್ನು ಮೀರು ಏರಿಕೆ

ನವದೆಹಲಿ (ಅ. 31) ತೈಲ ದರ ಏರಿಕೆ ನಾಗಾಲೋಟ ಮುಂದುವರೆದಿದ್ದು, ಶನಿವಾರ ಪೆಟ್ರೋಲ್‌ (Petrol) ಮತ್ತು ಡೀಸೆಲ್‌ ದರ ತಲಾ 35 ಪೈಸೆಯಷ್ಟುಹೆಚ್ಚಳವಾಗಿದೆ. ಇದರೊಂದಿಗೆ ದೇಶದಲ್ಲೇ ಅತಿ ಹೆಚ್ಚು ದರ ಹೊಂದಿರುವ ರಾಜಸ್ಥಾನದ ಶ್ರೀಗಂಗಾನಗರದಲ್ಲಿ (Sri Ganganagar) ಪೆಟ್ರೋಲ್‌ ದರ 121.13 ರು. ಮತ್ತು ಡೀಸೆಲ್‌ (Diesel )ದರ 110.29 ರು. ತಲುಪಿದೆ.

ಇನ್ನು ಮಧ್ಯಪ್ರದೇಶದ ಅನುಪ್ಪುರ್‌ನಲ್ಲಿ ಪೆಟ್ರೋಲ್‌ ಬೆಲೆ 121.13 ರು. ಗಡಿ ದಾಟಿದರೆ, ಡೀಸೆಲ್‌ ದರ 110.29 ರು.ಗೆ ತಲುಪಿದೆ. ಉಳಿದಂತೆ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 108.99 ರು., ಮುಂಬೈನಲ್ಲಿ 114.81 ರು., ಬೆಂಗಳೂರಿನಲ್ಲಿ 112.79 ರು.ಗೆ ತಲುಪಿದೆ. ಇನ್ನು ಡೀಸೆಲ್‌ ಬೆಲೆ ದೆಹಲಿಯಲ್ಲಿ 97.72 ರು., ಮುಂಬೈನಲ್ಲಿ 105.86, ಬೆಂಗಳೂರಿನಲ್ಲಿ 103.72 ರು.ಗೆ ತಲುಪಿದೆ.

ದರ ಇಳಿಕೆಗೆ ಯೋಗಿ ಸೂತ್ರ.. ತೆರಿಗೆ ಇಳಿಕೆ

ಅಕ್ಟೋಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಅನಿಲದ ಬೆಲೆಯನ್ನು ಹೆಚ್ಚಿಸಿದ್ದವು. ವಾಣಿಜ್ಯ ಸಿಲಿಂಡರ್​ಗಳ(Commercial Cylinder) ಬೆಲೆಯನ್ನು 43.5 ರೂಪಾಯಿಗಳಷ್ಟು ಏರಿಕೆ ಮಾಡಿದ್ದವು. 

ಮತ್ತೆ ಎಲ್​ಪಿಜಿ ಅಡುಗೆ ಸಿಲಿಂಡರ್( Domestic LPG Cylinders) ಬೆಲೆ ಮತ್ತೆ 15 ರೂ. ಹೆಚ್ಚಳ ಮಾಡಲಾಗಿತ್ತು. ಬೆಲೆ ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ ₹902.5 ರೂ ಆಗಲಿದ್ದು ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ. ಆಗಿದ್ದು ನವೆಂಬರ್ ಒಂದಕ್ಕೆ ಮತ್ತೊಂದು ಶಾಕ್ ಸಿಗುವ ಸಾಧ್ಯತೆ ಇದೆ.