ಮಾರ್ಚ್ 28ಕ್ಕೆ ಗೋವಾದಲ್ಲಿ ಮುಖ್ಯಮಂತ್ರಿ ಪ್ರಮಾಣವಚನಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಪ್ರಮೋದ್ ಸಾವಂತ್ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಭಾಗಿ
ಪಣಜಿ (ಮಾ. 26): ಉತ್ತರ ಪ್ರದೇಶದ (Uttar Pradesh) ಬಳಿಕ, ತೀವ್ರ ಜಿದ್ದಾಜಿದ್ದಿನಿಂದ ದಕ್ಷಿಣ ಭಾರತದಲ್ಲಿ ಗೆದ್ದುಕೊಂಡಿರುವ ರಾಜ್ಯವಾದ ಗೋವಾದಲ್ಲಿ(Goa) ಸೋಮವಾರ ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa Chief Minister designate Pramod Sawant ) ಅವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಭರದಿಂದ ನಡೆದಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಒಂದೇ ಒಂದು ನಿಯಮ ವಿಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಮಾಸ್ಕ್ ಅಥವಾ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ಸೂಚಿಸಲಾಗಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸ್ಥಳಕ್ಕೆ ಕಪ್ಪು ಮಾಸ್ಕ್ ಅಥವಾ ಕಪ್ಪು ಬಟ್ಟೆ ಧರಿಸಿದವರನ್ನು ಒಳಗೆ ಬಿಡಲಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ (BJP chief Sadanand Shet Tanavade) ಶನಿವಾರ ಹೇಳಿದ್ದಾರೆ. ಪಣಜಿ ಬಳಿಯ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರ ಸಮ್ಮುಖದಲ್ಲಿ ಸಮಾರಂಭ ನಡೆಯಲಿದೆ ಎಂದು ತನವಾಡೆ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
"ಕಪ್ಪು ಬಣ್ಣದ ಮಾಸ್ಕ್ ಮತ್ತು ಕಪ್ಪು ಉಡುಪುಗಳನ್ನು ಧರಿಸಿದ ಜನರನ್ನು ಸ್ಥಳದ ಒಳಗೆ ಅನುಮತಿಸಲಾಗುವುದಿಲ್ಲ, ಆದರೆ, ಸಮಾರಂಭವು ಎಲ್ಲರಿಗೂ ಮುಕ್ತವಾಗಿದೆ" ಎಂದು ಅವರು ಹೇಳಿದರು. ಫೆಬ್ರವರಿ 14 ರಂದು ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಸವನ್ನು ಮಾರ್ಚ್ 10 ರಂದು ಪ್ರಕಟಿಸಲಾಗಿತ್ತು. 40 ವಿಧಾನಸಭಾ ಸ್ಥಾನದಲ್ಲಿ ಬಿಜೆಪಿ ಸ್ವತಂತ್ರವಾಗಿ 20 ಸ್ಥಾನ ಗೆದ್ದಿದ್ದರೂ, ಕೆಲವು ಸ್ವತಂತ್ರರು ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವು ಬೆಂಬಲ ನೀಡಿದ ನಂತರ ಬಿಜೆಪಿಯು ಆರಾಮದಾಯಕ ಬಹುಮತವನ್ನು ಪಡೆದುಕೊಂಡು ಸರ್ಕಾರ ರಚಿಸಲಿದೆ.
ಪುಷ್ಕರ್ ಸಿಂಗ್ ಧಾಮಿ, ಪ್ರಮೋದ್ ಸಾವಂತ್‌ಗೆ ಮುಖ್ಯಮಂತ್ರಿ ಪಟ್ಟ: ಮಣಿಪುರಕ್ಕೆ 2ನೇ ಸಲ ಬಿರೇನ್ ಸಿಂಗ್ ಸಿಎಂ
ಈ ನಡುವೆ ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶನಿವಾರ ತಾಲೀಗಾವೊದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು. ಎಲ್ಲಾ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಎಲ್ಲಾ ಉನ್ನತ ನಿಯೋಜಿತ ಕೈಗಾರಿಕೋದ್ಯಮಿಗಳು ಮತ್ತು ಮಿಷನರಿಗಳಿಗೆ ಆಹ್ವಾನವನ್ನು ಕಳುಹಿಸಿದ್ದೇನೆ ಎಂದು ಸಾವಂತ್ ಹೇಳಿದರು. "ಇದು ಮುಕ್ತ ಕಾರ್ಯಕ್ರಮವಾಗಿದೆ, ಎಲ್ಲರೂ 10 ಗಂಟೆಗೆ ಮೊದಲು ಕ್ರೀಡಾಂಗಣದಲ್ಲಿರಿ ಎಂದು ಹೇಳುತ್ತೇನೆ. 12 ಗಂಟೆಯ ನಂತರ ಸಾರ್ವಜನಿಕರನ್ನು ನಾನು ಭೇಟಿ ಮಾಡುತ್ತೇನೆ. ಸಿದ್ಧತೆಗಳು ನಡೆಯುತ್ತಿವೆ, ಜನರು ಖುಷಿಯಾಗಿದ್ದಾರೆ" ಎಂದರು.
Government Formation ಸಿಎಂಗಳ ಆಯ್ಕೆಗೆ ಪ್ರಧಾನಿ ಮೋದಿ ಅಖಾಡಕ್ಕೆ!
ಈ ನಡುವೆ ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಳೈ ಅವರು ಮಾರ್ಚ್ 29 ರಿಂದ ಎರಡು ದಿನಗಳ ಹೊಸ ವಿಧಾನಸಭೆಯ ಅಧಿವೇಶನವನ್ನು ಕರೆದಿದ್ದಾರೆ, ಈ ಸಂದರ್ಭದಲ್ಲಿ ಮಾರ್ಚ್ 28 ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಸಿಎಂ ಪ್ರಮೋದ್ ಸಾವಂತ್ ಅವರು ವಿಶ್ವಾಸ ಮತ ಯಾಚಿಸಬೇಕು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಧಿವೇಶನದಲ್ಲಿ ಹೊಸ ಸ್ಪೀಕರ್ ಅನ್ನು ಆಯ್ಕೆ ಮಾಡಲಾಗುವುದು, ಇದು ಮಸೂದೆಗಳ ಅಂಗೀಕಾರ ಮತ್ತು ವೋಟ್-ಆನ್-ಅಕೌಂಟ್ (ಸರ್ಕಾರದ ಅಲ್ಪಾವಧಿಯ ಖರ್ಚು ಅಗತ್ಯಗಳನ್ನು ನಿಭಾಯಿಸುವ ವ್ಯಾಯಾಮ) ಸೇರಿದಂತೆ ಹಲವಾರು ಶಾಸಕಾಂಗ ವ್ಯವಹಾರಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ರಾಜ್ಯಪಾಲರು ಮಾರ್ಚ್ 29 ರಂದು ಬೆಳಿಗ್ಗೆ 11.30 ಕ್ಕೆ ಅಧಿವೇಶನವನ್ನು ಕರೆದಿದ್ದಾರೆ.
