Asianet Suvarna News Asianet Suvarna News

ಹಳಿ ತಪ್ಪಿದ ಡೀಸೆಲ್ ರೈಲಿನತ್ತ ಬಕೆಟ್ ಹಿಡಿದು ಓಡೋಡಿ ಬಂದ ಜನ, 30 ನಿಮಿಷದಲ್ಲಿ ಎಲ್ಲಾ ಖಾಲಿ!

ಡೀಸೆಲ್ ತುಂಬಿದ ಗೂಡ್ಸ್ ರೈಲು ಹಳಿ ತಪ್ಪಿದೆ. ಜನರು ಎದ್ನೋ ಬಿದ್ನೋ ಅಂತಾ ಓಡೋಡಿ ಬಂದಿದ್ದಾರೆ. ಸಿಬ್ಬಂದಿಗಳಿಗೆ ಏನಾಗಿದೆ? ನೆರವಿಗಾಗಿ ಜನ ಬಂದಿಲ್ಲ, ಬಕೆಟ್ ಹಿಡಿದು ಬಂದ ಜನ ರೈಲಿನಲ್ಲಿ ಉಳಿದಿದ್ದ, ಡೀಸೆಲ್, ಚರಂಡಿಯಲ್ಲಿ ಹರಿಯುತ್ತಿದ್ದ ಡೀಸೆಲ್ ಅರ್ಧ ಗಂಟೆಯಲ್ಲಿ ಖಾಲಿ ಮಾಡಿದ ವಿಡಿಯೋ ಹಲವು ಪ್ರಶ್ನೆಗಳನ್ನು ಎತ್ತಿದೆ.

People rush to spot and loot diesel from derailed goods train madhya pradesh ckm
Author
First Published Oct 4, 2024, 7:47 PM IST | Last Updated Oct 4, 2024, 7:47 PM IST

ಇಂದೋರ್(ಅ.04) ಡೀಸೆಲ್ ತುಂಬಿಕೊಂಡು ಹೊರಟಿದ್ದ ಗೂಡ್ಸ್ ರೈಲು ಏಕಾಏಕಿ ಹಳಿ ತಪ್ಪಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಲೋಕೋ ಪೈಲೆಟ್ ಸೇರಿದಂತೆ ಸಿಬ್ಬಂದಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಡೀಸೆಲ್ ತುಂಬಿದ ರೈಲು ಹಳ್ಳಿ ತಪ್ಪಿದೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ಬಕೆಟ್, ಕ್ಯಾನ್ ಹಿಡಿದು ಜನರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ರೈಲಿನಲ್ಲಿದ್ದ ಡೀಸೆಲ್ ಕದ್ದಿದ್ದಾರೆ. ಕೆಲವೇ ಹೊತ್ತಲ್ಲಿ ಡೀಸೆಲ್ ಕ್ಯಾನ್, ಬಕೆಟ್‌ನಲ್ಲಿ ತುಂಬಿಕೊಂಡು ಹೋದ ಘಟನೆ ಮಧ್ಯಪ್ರದೇಶದ ರತ್ನಲಮ್ ಬಳಿ ನಡೆದಿದೆ.

ರಾಜ್‌ಕೋಟ್‌ನಿಂದ ಭೋಪಾಲ್ ಬಳಿ ಇರುವ ಬಕಿನಾ ಬಹೌರಿಗೆ ಡೀಸೆಲ್ ಸರಬರಾಜು ಹೊಸದೇನಲ್ಲ.  ಬಗೌರಿಯ ತೈಲ ಘಟಕದಲ್ಲಿ ಡೀಸೆಲ್ ಶೇಖರಿಸಲಾಗುತ್ತದೆ. ಹೀಗೆ ಗುರುವಾರ ರಾತ್ರಿ ಡೀಸೆಲ್ ತುಂಬಿದ ರೈಲು ರಾಜ್‌ಕೋಟ್‌ನಿಂದ ಪ್ರಯಾಣ ಆರಂಭಿಸಿತ್ತು. ಮಧ್ಯಪ್ರದೇಶದ ರತ್ನಲಮ್ ಬಳಿ ಬರುತ್ತಿದ್ದಂತೆ ರೈಲು ಹಳಿ ತಪ್ಪಿದೆ. ರಾತ್ರಿ 10 ಗಂಟೆಗೆ ಈ ಘಟನೆ ಸಂಭವಸಿದೆ. ಅವಘಡದಲ್ಲಿ ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರೈಲಿನಲ್ಲಿ ವಿಶೇಷ ರಿಯಾಯಿತಿ, ಯಾರಿಗೆಲ್ಲಾ ಸಿಗಲಿದೆ ಟ್ರೈನ್ ಟಿಕೆಟ್‌ನಲ್ಲಿ ಶೇ.75ರಷ್ಟು ಡಿಸ್ಕೌಂಟ್‌!

ಘಟನೆ ಸಂಭವಿಸಿದ ಕೆಲ ಹೊತ್ತಲ್ಲೇ ರೈಲು ಅಧಿಕಾರಿಗಳಿಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಮಾರ್ಗದ ಮೂಲಕ ಸಾಗುವ ರೈಲುಗಳನ್ನು ಮಾರ್ಗ ಬದಲಾಯಿಸಲಾಗಿದೆ.ಸ್ಥಳೀಯರು ಸೇರಿದಂತೆ ಹಲವರಿಗೆ ರಾತ್ರಿ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿದ ಜನರು ರೈಲಿನಿಂದ ಡೀಸೆಲ್ ಕದಿಯಲು ಆರಂಭಿಸಿದ್ದಾರೆ. ಮೂರು ಗೋಡ್ಸ್ ಬೋಗಿಗಳಲ್ಲಿದ್ದ ಸಂಪೂರ್ಣ ಡೀಸೆಲ್ ಖಾಲಿ ಮಾಡಿದ್ದಾರೆ.

ಬೆಳಗಿನ ಜಾವ ಹಳಿ ತಪ್ಪಿದ ಮತ್ತೊಂದು ಬೋಗಿಯ ಕ್ಯಾಪ್ ತೆರೆದು ಬಿಟ್ಟ ಜನರು, ಚರಂಡಿಯಿಂದ ಡೀಸೆಲ್ ಶೇಖರಿಸಿದ್ದಾರೆ. ಬಕೆಟ್, ಕ್ಯಾನ್ ಹಿಡಿದು ಓಡೋಡಿ ಬಂದ ಜನರು ಕೆಲವೇ ಕ್ಷಣದಲ್ಲಿ ಸಂಪೂರ್ಣ ಡೀಸೆಲ್ ಖಾಲಿ ಮಾಡಿದ್ದರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರತದ ಜನರು ಬದಲಾಗಿಲ್ಲ. ಹೀಗಾಗಿ ಭಾರತ ಬದಲಾಗುವು ಮಾತೆಲ್ಲಿ ಎಂದು ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ.

 

 

ಸರಕು ತುಂಬಿದ ಲಾರಿ ಅಪಘಾತವಾದಾಗ ಲಾರಿಯಲ್ಲಿದ್ದ ಸರಕು ಕದ್ದೊಯ್ಯುವುದು, ಹಳಿ ತಪ್ಪಿದ ರೈಲಿನಿಂದ ಡೀಸೆಲ್ ಕದಿಯುವುದು ಹೀಗೆ ಹಲವು ಘಟನೆಗಳು ವರದಿಯಾಗಿದೆ. ಜನರ ಮನಸ್ಥಿತಿ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಘಡಗಳ ಸಂದರ್ಭದಲ್ಲಿ ಸಾಧ್ಯವಾದರೆ ನೆರವು ನೀಡಿ ಆದರೆ ತೊಂದರೆ ಕೊಡಬೇಡಿ ಎಂದು ಜನರು ಕಮೆಂಟ್ ಮಾಡಿದ್ದಾರೆ.

ರೈಲ್ವೇ ನೌಕರರಿಗೆ ಗುಡ್ ನ್ಯೂಸ್, 2028 ಕೋಟಿ ರೂ ಬೋನಸ್‌ಗೆ ಕೇಂದ್ರ ಅನುಮೋದನೆ!
 

Latest Videos
Follow Us:
Download App:
  • android
  • ios