ರೈಲ್ವೇ ನೌಕರರಿಗೆ ಗುಡ್ ನ್ಯೂಸ್, 2028 ಕೋಟಿ ರೂ ಬೋನಸ್‌ಗೆ ಕೇಂದ್ರ ಅನುಮೋದನೆ!

ಭಾರತೀಯ ರೈಲ್ವೇ ನೌಕರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇದೀಗ ನೌಕರರಿಗೆ ಬೋನಸ್ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನೌಕರರು ಬೋನಸ್ ರೂಪದಲ್ಲಿ ನೌಕರರಿಗೆ ಬೋನಸ್ ರೂಪದಲ್ಲಿ ಸಿಗಲಿದೆ ಗರಿಷ್ಠ 17,951 ರೂಪಾಯಿ!

Union cabinet approves rs 2000 crore for railway employees bonus ckm

ನವದೆಹಲಿ(ಸೆ.03) ನವರಾತ್ರಿ ಹಾಗೂ ದೀಪಾವಳಿಗೆ ಕೇಂದ್ರ ಸರ್ಕಾರ ಇದೀಗ ಭಾರತೀಯ ರೈಲ್ವೇ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ರೈಲ್ವೇ ನೌಕರರಿಗೆ ಬೋನಸ್ ನೀಡಲು ಬರೋಬ್ಬರಿ 2,028.57 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ. ಇದರಿಂದ ಭಾರತದ 11,72,240 ರೈಲ್ವೇ ಉದ್ಯೋಗಿಗಳ ಖಾತೆಗೆ ಬೋನಸ್ ಹಣ ಜಮೆ ಆಗಲಿದೆ. ನೌಕರರ ಬೋನಸ್ ರೂಪದಲ್ಲಿ ಸಿಗಲಿದೆ ಗರಿಷ್ಠ 17,951 ರೂಪಾಯಿ. ರೈಲ್ವೇಯ ಎಲ್ಲಾ ವಿಭಾಗದ ನೌಕರರಿಗೆ ಈ ಬೋನಸ್ ಹಣ ಸಿಗಲಿದೆ.

ರೈಲ್ವೇ ನೌಕರರ ಉತ್ಯುತ್ತಮ ಕಾರ್ಯಕ್ಷಮತೆಗಾಗಿ ಈ ಬೋನಸ್ ನೀಡಲಾಗುತ್ತದೆ. ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್(ಪಿಎಲ್‌ಬಿ) ರೈಲ್ವೇಯ ಎಲ್ಲಾ ವಿಭಾಗದ ನೌಕರರಿಗೆ ಅನ್ವಯಿಸಲಿದೆ. ಉತ್ತಮ ಕಾರ್ಯಕ್ಷಮತೆ ತೋರಿದ ನೌಕರ ಗರಿಷ್ಠ 17,951 ರೂಪಾಯಿ ಬೋನಸ್ ರೂಪದಲ್ಲಿ ಪಡೆಯಲಿದ್ದಾರೆ. ಲೋಕೋ ಪೈಲೆಟ್ಸ್, ಟ್ರಾಕ್ ನಿರ್ವಹಮೆ ಮಾಡುವ ನೌಕರರು, ಟ್ರೈನ್ ಮ್ಯಾನೇಜರ್, ಸೂಪರ್‌ವೈಸರ್, ತಾಂತ್ರಿಕ ಸಿಬ್ಬಂದಿ, ಸ್ಟೇಶನ್ ಮಾಸ್ಟರ್, ಮಿನಿಸ್ಟ್ರಿಯಲ್ ಸಿಬ್ಬಂದಿ ಸೇರಿದಂತೆ ಹಲವು ವಿಭಾಗದ ನೌಕರರ ಕಾರ್ಯಕ್ಷಮತೆ ಪರಿಗಣಿಸಿ ಈ ಬೋನಸ್ ನೀಡಲಾಗುತ್ತದೆ.

ಈ ರಾಜ್ಯದ ವಂದೇ ಭಾರತ್ ರೈಲು ಸೇವೆ ಸ್ಥಗಿತಕ್ಕೆ ಮುಂದಾದ ಕೇಂದ್ರ ಸರ್ಕಾರ!

ಪಿಎಲ್‌ಬಿ ಸ್ಕೀಮ್ ಮೂಲಕ ರೈಲ್ವೇಯಲ್ಲಿ ಉತ್ತಮ ಕೆಲಸ ಮಾಡುವ ನೌಕರರಿಗೆ ಉತ್ತೇಜನ ಹಾಗೂ ಇತರ ನೌಕರರಿಗೆ ಪ್ರೇರಣೆಯಾಗಲು ಬೋನಸ್ ನೀಡಲಾಗುತ್ತದೆ. ಪಿಎಲ್‌ಬಿ ಅಡಿಯಲ್ಲಿ ರೈಲ್ವೇ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ರೈಲ್ವೇ ಸೇವೆಯನ್ನು ಮತ್ತಷ್ಟು ಬಲಪಡಿಸಲು ನೆರವಾದ ನೌಕರರನ್ನು ಪರಿಗಣಿಸಲಾಗುತ್ತದೆ. ಪಿಎಲ್‌ಬಿಯಲ್ಲಿ ಒರ್ವ ನೌಕರ ಗರಿಷ್ಠ 17,951 ರೂಪಾಯಿ ಬೋನಸ್ ಹಣ ಪಡೆಯಲಿದ್ದಾರೆ.

ಪಿಎಲ್‌ಬಿ ಮೂಲಕ ಬೋನಸ್ ನೀಡಲು ಕೇಂದ್ರ ಸರ್ಕಾರ ಹಣ ಅನುಮೋದಿಸಿದೆ. ಶೀಘ್ರದಲ್ಲೇ ರೈಲ್ವೇ ನೌಕರರ ಖಾತೆಗೆ ಬೋನಸ್ ಹಣ ಜಮೆ ಆಗಲಿದೆ. ಕೇಂದ್ರದ ಅನುಮೋದನೆ ಮಾಹಿತಿ ಹೊರಬೀಳುತ್ತಿದ್ದಂತೆ ರೈಲ್ವೇ ನೌಕರರ ಮುಖದಲ್ಲಿ ಸಂತಸ ಮನೆ ಮಾಡಿದೆ. 

ಭಾರತೀಯ ರೈಲ್ವೇ ವರ್ಷದಿಂದ ವರ್ಷಕ್ಕೆ ಸೇವೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದೀಗ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ರೈಲು ಟಿಕೆಟ್ ಬುಕಿಂಗ್‌ನಲ್ಲಿ ಹಲವು ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ನವೀಕರಣ ಮಾಡಲಾಗುತ್ತಿದೆ. ರೈಲುಗಳ ವಿದ್ಯುತ್ತೀಕರಣ ಬಹುತೇಕ ಮುಕ್ತಾಯಗೊಂಡಿದೆ. ಇನ್ನು ರೈಲು ಸೇವೆಯಲ್ಲೂ ಪಾರದರ್ಶಕತೆ ಹಾಗೂ ಉತ್ತಮ ಸೇವೆಗೆ ಆದ್ಯತೆ ನೀಡಲಾಗಿದೆ.

ಇದೀಗ ಹಬ್ಬದ ಸೀಸನ್‌ಗಾಗಿ ಹೆಚ್ಚುವರಿ 6,000 ರೈಲು ಸೇವೆ ನೀಡಲಾಗಿದೆ. ಇರುವ ರೈಲುಗಳ ಕೋಚ್ ಸಂಖ್ಯೆ ಹೆಚ್ಚಿಸಲಾಗಿದೆ. ಈ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ರೈಲು ಪ್ರಯಾಣಿಕರು ಹಬ್ಬ ಆಚರಿಸಲು ಅನುವು ಮಾಡಿಕೊಡಲಾಗಿದೆ.

ಹಬ್ಬದ ಪ್ರಯುಕ್ತ ಬೆಂಗಳೂರು ಸಂಪರ್ಕಿಸುವ ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ!
 

Latest Videos
Follow Us:
Download App:
  • android
  • ios