ವಿಮಾನದಲ್ಲಿ ಮಹಿಳೆಯೋರ್ವಳ ಮೇಲೆ ಸಹ ಪ್ರಯಾಣಿಕ ಮೂತ್ರ ಮಾಡಿದ ಘಟನೆ ಇನ್ನು ಜನ ಮಾನಸದಿಂದ ಮಾಸಿಲ್ಲ. ಹಾಗಿರುವಾಗಲೇ ಇನ್ನೊಂದು ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ರೈಲಿನಲ್ಲಿ ಅದರಲ್ಲೂ ರೈಲ್ವೆ ಉದ್ಯೋಗಿಯೇ ಈ ಅವಾಂತರ ಮಾಡಿದ್ದಾನೆ.

ಲಕ್ನೋ: ವಿಮಾನದಲ್ಲಿ ಮಹಿಳೆಯೋರ್ವಳ ಮೇಲೆ ಸಹ ಪ್ರಯಾಣಿಕ ಮೂತ್ರ ಮಾಡಿದ ಘಟನೆ ಇನ್ನು ಜನ ಮಾನಸದಿಂದ ಮಾಸಿಲ್ಲ. ಹಾಗಿರುವಾಗಲೇ ಇನ್ನೊಂದು ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ರೈಲಿನಲ್ಲಿ ಅದರಲ್ಲೂ ರೈಲ್ವೆ ಉದ್ಯೋಗಿಯೇ ಈ ಅವಾಂತರ ಮಾಡಿದ್ದಾನೆ. ರೈಲಿನಲ್ಲಿ ಚಲಿಸುತ್ತಿದ್ದ ಮಹಿಳಾ ಪ್ರಯಾಣಿಕಳ ಮೇಲೆ ಟಿಟಿಇ ಯೇ ಮೂತ್ರ ವಿಸರ್ಜಿಸಿದ್ದು, ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಪೊಲೀಸರು ಟಿಟಿಇಯನ್ನು ಬಂಧಿಸಿದ್ದಾರೆ. ಜೊತೆಗೆ ಆತನನ್ನುಸೇವೆಯಿಂದ ಅಮಾನತುಗೊಳಿಸಿದ್ದಾರೆ. 

ಈ ಪ್ರಯಾಣ ಟಿಕೆಟ್ ಪರೀಕ್ಷಕ ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಗಳನ್ನ ಮಾಹಿತಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಭಾನುವಾರ ಮಧ್ಯರಾತ್ರಿ ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನ ಎ1 ಕೋಚ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ರೈಲು ಕೋಲ್ಕತ್ತಾದಿಂದ ಅಮೃತಸರದತ್ತ ಚಲಿಸುತ್ತಿತ್ತು.

ಪಾರ್ಶ್ವವಾಯು ಪೀಡಿತ ತಂದೆ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಸಿಟ್ಟಿಗೆದ್ದ ಮಗನಿಂದ ಕತ್ತು ಹಿಸುಕಿ ಕೊಲೆ!

ವರದಿಗಳ ಪ್ರಕಾರ, ಆರೋಪಿಯನ್ನು ಬಿಹಾರ ಮೂಲದ ಮುನ್ನಾ ಕುಮಾರ್ (Munna Kumar) ಎಂದು ಗುರುತಿಸಲಾಗಿದೆ. ಈತ ಮಹಿಳೆ ಮಲಗಿದ್ದಾಗ ಆಕೆಯ ತಲೆಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಎಚ್ಚರಗೊಂಡು ಎಲ್ಲರಿಗೂ ಈ ವಿಚಾರ ತಿಳಿಸಿದಾಗ ರೈಲಿನ ಇತರ ಪ್ರಯಾಣಿಕರು ಅಲ್ಲಿ ಬಂದು ಸೇರಿದ್ದಾರೆ. ನಂತರ ರೈಲು ಲಕ್ನೋದ ಚಾರ್‌ಬಾಗ್ ರೈಲು ನಿಲ್ದಾಣವನ್ನು (Charbagh railway station) ತಲುಪಿದಾಗ ಸಂತ್ರಸ್ತೆಯ ಪತಿ ಟಿಟಿಇಯನ್ನು ಹಿಡಿದು ಜಿಆರ್‌ಪಿಗೆ ಒಪ್ಪಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಆರೋಪಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತೀಚೆಗೆ ಈ ಬಸ್‌ ವಿಮಾನ, ರೈಲಿನಲ್ಲಿ ಮೂತ್ರ ವಿಸರ್ಜನೆ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ಮೊದಲಿಗೆ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ಉದ್ಯಮಿಯೋರ್ವ ಮೂತ್ರ ವಿಸರ್ಜನೆ ಮಾಡಿದ್ದ. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಉದ್ಯಮಿ ಶಂಕರ್‌ನನ್ನು ಬಂಧಿಸಿದ್ದರು. ಆತ ಕೆಲಸ ಮಾಡುತ್ತಿದ್ದ ಸಂಸ್ಥೆಯೂ ಕೂಡ ಆತನನ್ನು ಕೆಲಸದಿಂದ ವಜಾಗೊಳಿಸಿತ್ತು. ಇದಾದ ಬಳಿಕ ವಿಮಾನದಲ್ಲಿ ಇದೇ ರೀತಿಯ ಮತ್ತರೆಡು ಪ್ರಕರಣಗಳು ಬೆಳಕಿಗೆ ಬಂದಿದ್ದವು. 

ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ

ಸ್ಲೀಪರ್‌ ಬಸ್‌ನ ಯುವತಿ ಸೀಟಿನ ಮೇಲೆ ಮೂತ್ರ ವಿಸರ್ಜನೆ

ಇದಾದ ನಂತರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಹ ಪ್ರಯಾಣಿಕಳಾದ ಹುಡುಗಿಯ ಸೀಟಿನ ಮೇಲೆ, ಮದ್ಯಪಾನ ಮಾಡಿದ್ದ ಯುವಕ ಮೂತ್ರ ವಿಸರ್ಜನೆ ಮಾಡಿ ಕಿಡಿಗೇಡಿತನ ಮೆರೆದಿದ್ದ ಘಟನೆ ನಡೆದಿತ್ತು. . ಈ ವಿಕೃತ ಕೃತ್ಯ ಎಸಗಿದ ಯುವಕನಿಗೆ ಸಹ ಪ್ರಯಾಣಿಕರು ಧರ್ಮದೇಟು ನೀಡಿ, ಬಸ್‌ನಿಂದ ಕೆಳಗೆ ಇಳಿಸಿದ್ದರು. ವಿಜಯಪುರದಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿಯ (KSRTC) ನಾನ್‌ ಎಸಿ ಸ್ಲೀಪರ್‌ ಕೋಚ್‌ (Ac sleeper coach) ಬಸ್‌ ಹೊರಟಿತ್ತು. ಈ ಬಸ್‌ನಲ್ಲಿ 20 ವರ್ಷದ ಯುವತಿ ವಿಜಯಪುರದಿಂದಲೇ ಸೀಟ್‌ ರಿಸರ್ವೇಷನ್‌ ಮಾಡಿಕೊಂಡು ಹೋಗುತ್ತಿದ್ದರು. ಈ ಬಸ್‌ ವಿಜಯಪುರದಿಂದ ಹುಬ್ಬಳ್ಳಿ ಬಳಿಯ ಕಿರೇಸೂರ್‌ ಡಾಬಾದ (Kiresur Dabha) ಬಳಿ ಊಟ, ತಿಂಡಿಗೆಂದು ನಿಲ್ಲಿಸಿದೆ. ಈ ವೇಳೆ ಎಲ್ಲರೂ ಕೆಳಗಿಳಿದಾಗ ಮದ್ಯಪಾನ ಮಾಡಿದ್ದ 30 ವರ್ಷದ ಯುವಕ, ಪಕ್ಕದಲ್ಲಿದ್ದ ಯುತಿಯ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ.

ಊಟ ಮುಗಿಸಿ ವಾಪಸ್‌ ಬಂದ ಯುವತಿ ಮೂತ್ರ ಮಾಡಿರುವುದನ್ನು ನೋಡಿದ್ದಾಳೆ. ಈ ವೇಳೆ ಪಕ್ಕದ ಸೀಟಿನಲ್ಲಿ ಈ ವ್ಯಕ್ತಿ ಒಬ್ಬನೇ ಇರುವುದು ತಿಳಿದಿದೆ. ನಂತರ, ಚಾಲಕ ಮತ್ತು ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದನ್ನು ಕಂಡು ಕೋಪಗೊಂಡ ಸಹ ಪ್ರಯಾಣಿಕರು (Passengers) ಕುಡಿದ ಮತ್ತಿನಲ್ಲಿ ಮೂತ್ರ ಮಾಡಿದ ಯುವಕನಿಗೆ ಧರ್ಮದೇಟು ನೀಡಿ ಬಸ್‌ನಿಂದ ಕೆಳಗೆ ಇಳಿಸಿದ್ದರು. ಇನ್ನು ಚಾಲಕ ಮತ್ತು ನಿರ್ವಾಹಕ ಸೇರಿ ಸೀಟಿನ ಮೇಲೆ ನೀರು ಹಾಕಿ, ಬಟ್ಟೆಯಿಂದ ಸ್ವಚ್ಛಗೊಳಿಸಿದರೂ ಅಲ್ಲಿ ವಾಸನೆಗೆ ಬೇರೊಬ್ಬರು ಮಲಗಲು ಆಗುತ್ತಿರಲಿಲ್ಲ. ಇದರಿಂದ ಬಸ್‌ ಅನ್ನು ಹುಬ್ಬಳ್ಳಿಯ ಬಸ್‌ ನಿಲ್ದಾಣದ ಕಡೆಗೆ ತಿರುಗಿಸಿ, ಅಲ್ಲಿ ಬಸ್‌ ನಿಲ್ಲಿಸಿದ್ದಾರೆ. ಅಲ್ಲಿಂದ ಯುವತಿ ಹಾಗೂ ಅಕ್ಕಪಕ್ಕದ 6 ಸೀಟುಗಳಲ್ಲಿನ ಸಹ ಪ್ರಯಾಣಿಕರು ಆ ಬಸ್‌ನಿಂದ ಇಳಿದು ಬೇರೊಂದು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ.