PM Modi In Kargil: ಶಕ್ತಿ ಇಲ್ಲದೆ ಶಾಂತಿ ಸಾಧ್ಯವಿಲ್ಲ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಮುಖ ಯುದ್ಧಭೂಮಿ ಕಾರ್ಗಿಲ್‌ನಲ್ಲಿ ನಿಂತು ಮಹತ್ವದ ಸಂದೇಶವನ್ನು ಸಾರಿದ್ದಾರೆ. ಭಾರತೀಯ ಸೇನೆಯನ್ನು ಬಲಿಷ್ಠಗೊಳಿಸುವುದರ ಹಿಂದಿನ ಉದ್ದೇಶವೇನು ಎಂದು ಹೇಳಿರುವ ಅವರು, ಶಕ್ತಿ ಇಲ್ಲದೆ ನಾವಾಡುವ ಶಾಂತಿ ಮಾತುಗಳಿಗೆ ಬೆಲೆ ಇರೋದಿಲ್ಲ ಎಂದಿದ್ದಾರೆ.

peace is not possible without strength PM Modi Deepavali Celebration In Kargil With Soldiers san

ಕಾರ್ಗಿಲ್‌ (ಅ. 24):ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕಾರ್ಗಿಲ್‌ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಈ ಸಂದರ್ಭದಲ್ಲಿ, ನಾವು ಸಾಮಾನ್ಯ ನಾಗರಿಕರು ನಮ್ಮ ದೀಪಾವಳಿ ಪಟಾಕಿ ಹಾಗೂ ನಿಮ್ಮ ದೀಪಾವಳಿ ಪಟಾಕಿ ವಿಭಿನ್ನ. ಸ್ಫೋಟಗಳೂ ಕೂಡ ವಿಭಿನ್ನ ಎಂದು ಹೇಳಿದ್ದಾರೆ. ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಕ್ತಿ ಇಲ್ಲದೆ ಶಾಂತಿ ಕಾಪಾಡಲು ಸಾಧ್ಯವಿಲ್ಲ. ಭಾರತ ಯಾವಾಗಲೂ ಯುದ್ಧವನ್ನು ಕೊನೆಯ ಉಪಾಯವೆಂದು ಪರಿಗಣಿಸಿದೆ. ಪೌರಾಣಿಕ ಕಾಲದಿಂದಲೂ ಇದು ನಡೆದುಕೊಂಡು ಬಂದ ಪದ್ಧತಿ. ಲಂಕಾದಲ್ಲಾಗಲಿ, ಕುರುಕ್ಷೇತ್ರದಲ್ಲಾಗಿ, ಕೊನೆಯ ಕ್ಷಣದವರೆಗೂ ಯುದ್ಧವನ್ನು ತಪ್ಪಿಸುವ ಪ್ರಯತ್ನಗಳು ನಡೆದಿದ್ದವು. ನಾವು ವಿಶ್ವಶಾಂತಿಯ ಪರವಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಪ್ರತಿ ವರ್ಷವೂ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಸಿಯಾಚಿನ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಇದೇ ವೇಳೆ ಯೋಧರಿಗೆ ನೀವೇ ನನ್ನ ಕುಟುಂಬ ಎಂದು ಹೇಳುವ ಮೂಲಕ ಅವರ ವಿಶ್ವಾಸ ವೃದ್ಧಿಸುವ ಮಾತುಗಳನ್ನಾಡಿದರು.

ನೀವು ಹಲವು ವರ್ಷಗಳಿಂದಲೂ ನನ್ನ ಕುಟುಂಬ. ನನ್ನ ದೀಪಾವಳಿಯ ಸಿಹಿ ನಿಮ್ಮಿಂದಲೇ ಮೂಡುತ್ತದೆ. ನನ್ನ ದೀಪಾವಳಿಯ ಬೆಳಕು ನಿಮ್ಮ ನಡುವೆಯೇ ಇದೆ. ಮುಂದಿನ ದೀಪಾವಳಿಯವರೆಗೆ (Deepavali ) ಈ ಬೆಳಕು ನನ್ನ ಸ್ಥಾನವನ್ನು ಬೆಳಗುತ್ತದೆ. ಶೌರ್ಯದ ಅದ್ಭುತ ಕಥೆಗಳ ಜೊತೆಗೆ ನಮ್ಮ ಸಂಪ್ರದಾಯ, ಆಚರಣೆಗಳೊಂದಿಗೆ ಅದು ಬೆಳಗುತ್ತದೆ. ಅದಕ್ಕಾಗಿಯೇ ಭಾರತವು ತನ್ನ ಹಬ್ಬಗಳನ್ನು ಪ್ರೀತಿಯಿಂದ ಆಚರಿಸುತ್ತದೆ. ಇಡೀ ಜಗತ್ತನ್ನು ತನ್ನೊಂದಿಗೆ ಸೇರಿಸಿಕೊಂಡು ಆಚರಣೆ ಮಾಡುತ್ತದೆ.

'ಕಾರ್ಗಿಲ್‌ (Kargil Victory) ವಿಜಯದ ಸಾಕ್ಷಿಯಾಗಲು ನಾನು ಅದೃಷ್ಟಶಾಲಿಯಾಗಿದ್ದೆ ಮತ್ತು ನಾನು ಆ ಯುದ್ಧವನ್ನು ಹತ್ತಿರದಿಂದ ನೋಡಿದ್ದೇನೆ. 23 ವರ್ಷಗಳ ಹಳೆಯ ಚಿತ್ರಗಳನ್ನು ತೋರಿಸಿ ಆ ಕ್ಷಣವನ್ನು ನೆನಪಿಸಿದ ಇಲ್ಲಿನ ಅಧಿಕಾರಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ದೇಶದ ಸಾಮಾನ್ಯ ಪ್ರಜೆಯಾಗಿ ನನ್ನ ಕರ್ತವ್ಯ ನನ್ನನ್ನು ಯುದ್ಧಭೂಮಿಗೆ ಕರೆತಂದಿತ್ತು. ನಮ್ಮ ಕೈಲಾದ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ನಾವು ಪುಣ್ಯ ಸಂಪಾದಿಸಲು ಬಂದಿದ್ದೇವೆ’ ಎಂದರು. ನೀವು ಗಡಿಯಲ್ಲಿ ಗುರಾಣಿಯಾಗಿ ನಿಂತಿದ್ದರೆ ದೇಶದೊಳಗಿನ ದೇಶದ ಶತ್ರುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.. ಭಯೋತ್ಪಾದನೆ, ನಕ್ಸಲಿಸಂ ಇತ್ಯಾದಿಗಳ ಬೇರುಗಳನ್ನು ಕಿತ್ತೊಗೆಯಲು ಯಶಸ್ವಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಕ್ಸಲಿಸಂ ಒಂದು ಕಾಲದಲ್ಲಿ ದೇಶದ ಬಹುಭಾಗವನ್ನು ವಶಪಡಿಸಿಕೊಂಡಿತ್ತು, ಆದರೆ ಇಂದು ಆ ವ್ಯಾಪ್ತಿಯು ಕುಗ್ಗುತ್ತಿದೆ ಎಂದರು

ಚೀನಾ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮಕ್ಕೆ ಮೋದಿ ಭೇಟಿ, ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ!

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಕಾರ್ಗಿಲ್‌ನಲ್ಲಿ ಮೇಜರ್ ಅಮಿತ್ ಅವರನ್ನು ಭೇಟಿಯಾದರು, ಅವರು ಈ ಹಿಂದೆ ನವೆಂಬರ್ 2001 ರಲ್ಲಿ ಗುಜರಾತ್‌ನ ಬಲಾಚಾಡಿಯ ಸೈನಿಕ ಶಾಲೆಯಲ್ಲಿ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಈ ಚಿತ್ರವನ್ನು ಹಿಡಿದುಕೊಂಡೇ ಮೋದಿ (PM Narendra Modi) ಅವರ ಜೊತೆ ಪೋಸ್‌ ನೀಡಿದರು.

ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್‌ ತಲುಪಿದ ಪ್ರಧಾನಿ ಮೋದಿ!

400 ಕ್ಕೂ ಹೆಚ್ಚು ರೀತಿಯ ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳುವ ಬದಲು ಭಾರತದಲ್ಲಿ ನಿರ್ಮಿಸಲು ನಿರ್ಧರಿಸಿದ ಎಲ್ಲಾ 3 ಸಶಸ್ತ್ರ ಪಡೆಗಳನ್ನು ನಾನು ಪ್ರಶಂಸಿಸುತ್ತೇನೆ. ನಮ್ಮ ಯೋಧರು ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಿದಾಗ, ಅವರು ಹೆಮ್ಮೆಪಡುತ್ತಾರೆ ಮಾತ್ರವಲ್ಲದೆ ಶತ್ರುವನ್ನು ಸೋಲಿಸಲು ಇನ್ನಷ್ಟು ಶ್ರಮ ವಹಿಸುತ್ತಾರೆ. ಈ ದೇಶದ ಸೈನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ತಡೆರಹಿತ ಸಂಪರ್ಕದೊಂದಿಗೆ (Indian Army) ಹೈಟೆಕ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ... ಮಹಿಳಾ ಅಧಿಕಾರಿಗಳ ಸೇರ್ಪಡೆ ನಮ್ಮ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios