ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್‌ ತಲುಪಿದ ಪ್ರಧಾನಿ ಮೋದಿ!

ಈ ಬಾರಿಯ ದೀಪಾವಳಿಯನ್ನು ಸಂಭ್ರಮವನ್ನು ದೇಶದ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಕಳೆದಿರುವ ಪ್ರಧಾನಿ ಮೋದಿ, ಸೋಮವಾರ ಮುಂಜಾನೆಯ ವೇಳೆಗೆ ಕಾರ್ಗಿಲ್‌ ತಲುಪಿದ್ದಾರೆ. ಸತತ 9ನೇ ವರ್ಷ ಅವರು ಸೈನಿಕರೊಂದಿಗೆ ದೀಪಾವಳಿ ಸಂಭ್ರಮ ಆಚರಿಸಲಿದ್ದಾರೆ.

JK PM Modi reaches Kargil will celebrate Deepavali with army personnel for the 9th consecutive year san

ಕಾರ್ಗಿಲ್‌ (ಅ. 24): ಪ್ರಧಾನಿಯಾದ ನಂತರ ನರೇಂದ್ರ ಮೋದಿಯವರು ಸೇನಾ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸುವುದನ್ನು ವಾಡಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ವರ್ಷ ಸತತ 9ನೇ ಬಾರಿಗೆ ಪ್ರಧಾನಿಯವರು ಸೇನಾ ಸಿಬ್ಬಂದಿ ಜೊತೆ ದೀಪಾವಳಿ ಆಚರಿಸಲು ಜಮ್ಮು ಕಾಶ್ಮೀರದ ಕಾರ್ಗಿಲ್‌ತೆ ತಲುಪಿದ್ದಾರೆ. ದೀಪಾವಳಿಯ ಸಂತಸವನ್ನು ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸ್ವತಃ ಪ್ರಧಾನಿಯೇ ಬಂದು ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವ ಕಾರಣ ಸೇನಾ ಸಿಬ್ಬಂದಿಗಳ ಸಂಭ್ರಮಕ್ಕೆ ಮಿತಿಯೇ ಇಲ್ಲದಂತಾಗಿದೆ. ಪ್ರಧಾನಿ ಭೇಟಿಯ ವೇಳೆ ಸೈನಿಕರೊಂದಿಗೆ ಮಾತನಾಡಿ ಸ್ಥಿತಿಗತಿಗಳನ್ನು ಅರಿತುಕೊಳ್ಳಲಿದ್ದಾರೆ.  ಇದಕ್ಕೂ ಮುನ್ನ ಪ್ರಧಾನಿಯವರು ಈ ರೀತಿಯಾಗಿ ಗಡಿಯ ವಿವಿಧ ಪ್ರದೇಶಗಳಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ವರ್ಷದಿಂದಲೂ ಅವರು ದೀಪಾವಳಿಯನ್ನು ಸೇನಾ ಯೋಧರೊಂದಿಗೆ ಆಚರಿಸುತ್ತಿದ್ದಾರೆ.ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ದ್ರಾಸ್ ತಲುಪಿದ್ದು, ಸೇನೆಯ ಯೋಧರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ದೀಪಾವಳಿಯ ಸಂಭ್ರವನ್ನು ಆಚರಿಸಲು ದೇಶದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮೊದಲಿಗೆ ಬಾಬಾ ಕೇದಾರನಾಥ ಹಾಗೂ ಬದಿರಿನಾಥ ದರ್ಶನವನ್ನು ಅಕ್ಟೋಬರ್‌ 21 ರಂದು ಮಾಡಿದ್ದರೆ, ಆ ಬಳಿಕ 23 ಅಕ್ಟೋಬರ್‌ನಂದು ಅಯೋಧ್ಯೆಯಲ್ಲಿ (Ayodhya) ನಡೆದ ದೀಪೋತ್ಸವದಲ್ಲಿ ಭಾಗಿಯಾಗಿದ್ದರು. ಅದರೊಂದಿಗೆ ಅಯೋಧ್ಯಕ್ಕೆ ಭೇಟಿ ನೀಡಿ ರಾಮಲಲ್ಲಾ ವೃಜ್‌ಮಾನ್‌ ದರ್ಶನವನ್ನೂ ಪಡೆದಿದ್ದರು.

ಈವರೆಗೂ ಪ್ರಧಾನಿ ಮೋದಿ ದೀಪಾವಳಿ ಸಂಭ್ರಮನ್ನು ಸೇನಾ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ. ದೀಪಾವಳಿಯ ವೇಳೆ ದೇಶದ ಗಡಿಗಳಿಗೆ ಭೇಟಿ ನೀಡಿ ಅವರೊಂದಿಗೆ ಹಬ್ಬವನ್ನು ಆಚರಣೆ ಮಾಡುತ್ತಾರೆ. ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಆಚರಿಸಿದ ಸ್ಥಳಗಳು ಇಲ್ಲಿವೆ.

2014 ಅಕ್ಟೋಬರ್‌ 23:  ಇದೇ ವರ್ಷದ ಮೇ ತಿಂಗಳಿನಲ್ಲಿ ಪ್ರಧಾನಿ ಭಾರತದ ಪ್ರಧಾನಿಯಾಗಿದ್ದರು. ಆ ವರ್ಷದ ದೀಪಾವಳಿಯನ್ನು ಅಕ್ಟೋಬರ್‌ 23 ರಂದು ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಆಚರಣೆ ಮಾಡಿದ್ದರು.

2015 ನವೆಂಬರ್‌ 11: ಪ್ರಧಾನಿಯಾದ 2ನೇ ವರ್ಷದ ದೀಪಾವಳನ್ನು ಮೋದಿ ಪಂಜಾಬ್‌ನ್ಲಿ ಸೈನಿಕರೊಂದಿಗೆ ಆಚರಿಸಿದರು. ಅದರೊಂದಿಗೆ 1965ರ ಯುದ್ಧದಲ್ಲಿ ಮಡಿದ ಸೈನಿಕರಿಗಾಗಿ ನಿರ್ಮಾಣ ಮಾಡಲಾಗಿದ್ದ ಯುದ್ಧ ಸ್ಮಾರಕಕ್ಕೂ ಅವರು ಭೇಟಿ ನೀಡಿದ್ದರು.

2016 ಅಕ್ಟೋಬರ್‌ 30: 2016ರಲ್ಲಿ ದೀಪಾವಳಿ ಆಚರಿಸಲು ಪ್ರಧಾನಿ ಮೋದಿ ಹಿಮಾಚಲದ ಕಿನ್ನೌರ್‌ಗೆ ತೆರಳಿದ್ದರು ಇಲ್ಲಿ ಅವರು ಭಾರತ-ಚೀನಾ ಗಡಿಯ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.

2017 ಅಕ್ಟೋಬರ್‌ 18: 2017 ರಲ್ಲಿಯೂ ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು. ನಂತರ ಅವರು ಜಮ್ಮು ಮತ್ತು ಕಾಶ್ಮೀರದ ಗುರೇಜ್‌ನಲ್ಲಿ ಬೆಳಕಿನ ಹಬ್ಬವನ್ನು ಆಚರಣೆ ಮಾಡಿದ್ದರು.

2018 ನವೆಂಬರ್‌ 7: 2018 ರಲ್ಲಿ, ಪ್ರಧಾನಿ ಮೋದಿ ಅವರು ಉತ್ತರಾಖಂಡದ ಹರ್ಷಿಲ್‌ನಲ್ಲಿ (Harshil) ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಿದರು.

ಚೀನಾ ಗಡಿಯ ಕಾರ್ಮಿಕರ ಶೆಡ್‌ನಲ್ಲಿ ರಾತ್ರಿ ಕಳೆದ Modi: ಸರಳತೆ ಮೆರೆದ ಪ್ರಧಾನಿ

2019 ಅಕ್ಟೋಬರ್‌ 27: ಪಿಎಂ ಮೋದಿ 2019 ರಲ್ಲಿ ಎಲ್‌ಒಸಿ ಬಳಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಎಲ್‌ಒಸಿಯಲ್ಲಿ (LOC) ನಿಯೋಜಿಸಲಾದ ಸೈನಿಕರನ್ನು (Soldiers) ಭೇಟಿ ಮಾಡಲು ಪಿಎಂ ಮೋದಿ ರಜೌರಿಗೆ ತಲುಪಿದ್ದರು.

ಈ ಭಾರಿಯೂ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ, ಕೇದಾರನಾಥ ಭದ್ರಿನಾಥಕ್ಕೂ ಭೇಟಿ!

2020 ನವೆಂಬರ್‌ 14: ಜೈಸಲ್ಮೇರ್‌ನ ಲೊಂಗೆವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ (PM Narendra Modi) ದೀಪಾವಳಿ ಆಚರಿಸಿದರು. 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದ ಸಮಯದಲ್ಲಿ ಲೊಂಗೆವಾಲಾ ಪೋಸ್ಟ್‌ನಲ್ಲಿ ಸೈನಿಕರ ಸಾಹಸ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.

2021 ನವೆಂಬರ್‌ 4: 2021 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಜೌರಿಯ ನೌಶೇರಾ (Nowshera Sector) ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು.


 

Latest Videos
Follow Us:
Download App:
  • android
  • ios