ಪವನ್ ಕಲ್ಯಾಣ್ ಧರ್ಮ ವಿವಾದ: ಕ್ರಿಶ್ಚಿಯನ್ ಗೆ ಸೇರಿದ್ದೇನೆಂದ ವಿಡಿಯೋ ವೈರಲ್!
ತಿರುಪತಿ ಲಡ್ಡು ವಿವಾದದ ನಡುವೆ, ಪವನ್ ಕಲ್ಯಾಣ್ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ತಾನು ಚರ್ಚ್‌ಗಳಿಗೆ ಹೋಗಿದ್ದಾಗಿ ಮತ್ತು ಬ್ಯಾಪ್ಟೈಜ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ.
ತಿರುಪತಿ ಲಡ್ಡು ವಿವಾದ ದೇಶದಾದ್ಯಂತ ಸುದ್ದಿಯಾಗುತ್ತಿದ್ದಂತೆಯೇ, ಆಂದ್ರದಲ್ಲಿ ರಾಜಕೀಯ ಕಿತ್ತಾಟ ಕೂಟ ಜೋರಾಗಿದೆ. ಈ ನಡುವೆ ನಟ, ರಾಜಕಾರಣಿ ಪವನ್ ಕಲ್ಯಾಣ್ ಕೂಡ ಭಾರೀ ಸುದ್ದಿಯಲ್ಲಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್ ಅವರ ಹಳೆ ವಿಡಿಯೋವೊಂದು ವೈರಲ್ ಆಗುತ್ತಿದೆ. ನಟ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮಾತನಾಡಿರುವುದು ಈ ವಿಡಿಯೋದಲ್ಲಿದೆ.
ವೈರಲ್ ವಿಡಿಯೋದಲ್ಲಿ, ಪವನ್ ಕಲ್ಯಾಣ್ ತನ್ನ ಮಕ್ಕಳು ಆರ್ಥೋಡಾಕ್ಸ್ ಕ್ರಿಶ್ಚಿಯನ್ನರು ಎಂದು ಒಪ್ಪಿಕೊಳ್ಳುತ್ತಾರೆ. ನಾನು ಚರ್ಚ್‌ಗಳಿಗೆ ಹೋಗಿದ್ದೇನೆ. ಬ್ಯಾಪ್ಟೈಜ್ ಆಗಿದ್ದೇನೆ ಎಂದು ಹೇಳಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಜೊತೆಗೆ ಯೇಸುವಿನ ಜನ್ಮಸ್ಥಳವಾದ ಬೆಥ್ ಲೆಹೆಮ್ಗೆ ಸ್ವತಃ ತಾನು ಭೇಟಿ ನೀಡಿದ್ದೇನೆ ಎಂದಿದ್ದಾರೆ.
ಹೀಗಾಗಿ ತಿರುಪತಿ ಲಡ್ಡು ವಿವಾದದ ಬಳಿಕ ಸನಾತನ ಧರ್ಮದ ಬಗ್ಗೆ ಮಾತನಾಡಿರುವ ಪವನ್ ಹೇಳಿಕೆಯು ಈ ಹಿಂದಿನ ಹೇಳಿಕೆಗೆ ತದ್ವಿರುದ್ಧವಾಗಿದೆ. ಯೇಸು ಅಥವಾ ಇಸ್ಲಾಂ ಬಗ್ಗೆ ಯಾಕೆ ಅಪಹಾಸ್ಯ ಮಾಡಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಕ್ರಿಶ್ಚಿಯನ್ ಧರ್ಮ ಅನುಸರಿಸುವ ಪವನ್ ಕಲ್ಯಾಣ್ ಹೇಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಅವರು 'ನಿಜವಾದ ಹಿಂದೂ ಅಲ್ಲ' ಎಂದು ಚರ್ಚಿಸಲಾಗುತ್ತಿದೆ.
ಲಡ್ಡು ವಿವಾದ: ಸನಾತನ ಧರ್ಮದ ಮೇಲಿನ ದಾಳಿ ಸಹಿಸಲ್ಲ ಪ್ರಕಾಶ್ ರಾಜ್ ಗೆ ಎಚ್ಚರಿಕೆ ಕೊಟ್ಟ ಪವನ್ ಕಲ್ಯಾಣ್
ಮಾಜಿ ಸಚಿವ ಪೆರ್ನಿ ನಾನಿ ಕೂಡ ಈ ಬಗ್ಗೆ ಮಾತನಾಡಿ, ಇದೇ ಪವನ್ ಕಲ್ಯಾಣ್ ಬ್ಯಾಪ್ಟೈಜ್ ಆಗಿದ್ದಾರಾ? ಇದೇ ಪವನ್ ಕಲ್ಯಾಣ್ ತನ್ನ ಮಕ್ಕಳಿಗೆ ಕ್ರಿಶ್ಚಿಯನ್ ಹೆಸರುಗಳನ್ನು ಆಯ್ಕೆ ಮಾಡಿ ರಷ್ಯಾದ ಚರ್ಚ್‌ನಲ್ಲಿ ಮೊಣಕಾಲುಗಳ ಮೇಲೆ ನಮಸ್ಕರಿಸಿದ್ದಾನೆಯೇ? ಕ್ರಿಶ್ಚಿಯನ್ ಧರ್ಮದೊಂದಿಗೆ ಅಂತಹ ಆಳವಾದ ಸಂಪರ್ಕ ಹೊಂದಿರುವ ವ್ಯಕ್ತಿ ಸನಾತನ ಧರ್ಮವನ್ನು ಉಳಿಸುವ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದು ಪೆರ್ನಿ ನಾನಿ ಪ್ರಶ್ನಿಸಿದ್ದಾರೆ.
ಜನರು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ಪವನ್ ಕಲ್ಯಾಣ್ ಅವರೇ ಈ ಹಿಂದೆ ನನಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದರು. ತಪ್ಪು ಮಾಡಿದವರು ಮಾತ್ರ ಪ್ರಾಯಶ್ಚಿತ್ತ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಪವನ್ ಕಲ್ಯಾಣ್ ಮತ್ತು ಅವರ ಗುರು ಚಂದ್ರಬಾಬು ಅವರು ವೈಎಸ್ ಜಗನ್ ಮೋಹನ್ ರೆಡ್ಡಿಗೆ ಹಾನಿ ಮಾಡಲು ತಿರುಮಲ ವೆಂಕಟೇಶ್ವರ ಸ್ವಾಮಿಯ ಹೆಸರನ್ನು ಸಹ ಬಳಸಿದ್ದಾರೆ. ವೈಎಸ್ ಜಗನ್ ವಿರುದ್ಧ ಸುಳ್ಳು ಭರವಸೆ ನೀಡಿ, ಸುಳ್ಳು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಪವನ್ ಕಲ್ಯಾಣ್ ತಮ್ಮ ತಪ್ಪುಗಳನ್ನು ಅರಿತು ಪ್ರಾಯಶ್ಚಿತ್ತ ದೀಕ್ಷೆಯನ್ನು ವೀಕ್ಷಿಸುತ್ತಿದ್ದಾರೆ ಎಂದು ತೋರುತ್ತದೆ ಎಂದು ಪೆರ್ನಿ ನಾನಿ ಕಿಡಿಕಾರಿದ್ದಾರೆ.
ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆಯಾಗಿದೆ ಎಂಬ ಆರೋಪದ ಬಳಿಕ 11 ದಿನಗಳ 'ಪ್ರಾಯಶ್ಚಿತ್ತ ದೀಕ್ಷಾ' (ತಪಸ್ಸು) ಅಂಗವಾಗಿ ಕನಕ ದೃಗ ದೇವಸ್ಥಾನದಲ್ಲಿ ಶುದ್ಧೀಕರಣದ ನಂತರ ಜನಸೇನಾ ಮುಖ್ಯಸ್ಥ ಪವನ್ ತನ್ನನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಯಾವುದೇ ದೇವಾಲಯಗಳಲ್ಲಿ ಈ ರೀತಿಯ ಕತ್ಯ ನಡೆಯದಂತೆ ನೊಡಿಕೊಳ್ಳಲು "ಸನಾತನ ಧರ್ಮ ರಕ್ಷಣಾ ಮಂಡಳಿ" ಮಾಡಬೇಕು. ‘ಸನಾತನ ಧರ್ಮ’ ರಕ್ಷಣೆಗೆ ಮಂಡಳಿ ಬೇಕು ಎಂಬ ಬೇಡಿಕೆ ಇಟ್ಟಿದ್ದರು. ತಾನು ಬಾಲ್ಯದಿಂದಲೂ ‘ಸನಾತನ ಧರ್ಮ’ದ ಕಟ್ಟಾ ಅನುಯಾಯಿ ಧರ್ಮದ ಮೇಲೆ ದಾಳಿ ನಡೆದರೆ ಸುಮ್ಮನಿರುವುದಿಲ್ಲ ಎಂದಿದ್ದರು.
ಉದ್ಯೋಗಿ ರಾಜೀನಾಮೆ ಬಳಿಕ ಕೆಲಸದಿಂದ ವಜಾಗೊಳಿಸಿದ ಕಂಪನಿ, ರಿಲೀವಿಂಗ್ ಲೆಟರ್‌ಗೆ 3 ತಿಂಗಳ ವೇತನ ನೀಡುವಂತೆ ಬೆದರಿಕೆ!
ಮೂರನೇ ಪತ್ನಿ ಕ್ರೈಸ್ತೆ: ಪವನ್ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಕ್ರೈಸ್ತ ಧರ್ಮದವರಾಗಿದ್ದಾರೆ. ರಷ್ಯಾದ ಮಾಡೆಲ್ 2011 ರಲ್ಲಿ ತೀನ್ ಮಾರ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಪ್ರೀತಿಯಾಗಿ 2013ರಲ್ಲಿ ವಿವಾಹವಾದರು. ಅವರ ಮಕ್ಕಳು ಕ್ರಿಶ್ಚಿಯನ್ ಮತ್ತು ರಷ್ಯಾದಲ್ಲಿ ದೀಕ್ಷಾಸ್ನಾನ ಪಡೆದಿದ್ದಾರೆ. ಇವರಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂಬ ಮಗ ಮತ್ತು ಪೊಲೆನಾ ಅಂಜನಾ ಪವೊನೋವಾ ಎಂಬ ಮಗಳಿದ್ದಾಳೆ. 2018 ರಲ್ಲಿ, ಅಣ್ಣಾ ಮತ್ತು ಪವನ್ ಕಲ್ಯಾಣ್ ಅವರು ಪೋಲೆಂಡ್‌ನ ರಾಯಭಾರಿ ಆಡಮ್ ಬುರಾಕೊವ್ಸ್ಕಿ ಅವರನ್ನು ಕರ್ನಾಟಕದ ಚರ್ಚ್ ಸೇಂಟ್ ಮೇರಿಸ್ ಬೆಸಿಲಿಕಾದಲ್ಲಿ ಭೇಟಿಯಾದಾಗ ಸುದ್ದಿಯಾದರು.