ಲಡ್ಡು ವಿವಾದ: ಸನಾತನ ಧರ್ಮದ ಮೇಲಿನ ದಾಳಿ ಸಹಿಸಲ್ಲ ಪ್ರಕಾಶ್ ರಾಜ್ ಗೆ ಎಚ್ಚರಿಕೆ ಕೊಟ್ಟ ಪವನ್ ಕಲ್ಯಾಣ್

ತಿರುಪತಿ ಲಡ್ಡು ವಿವಾದವು ಪವನ್ ಕಲ್ಯಾಣ್ ಮತ್ತು ಪ್ರಕಾಶ್ ರಾಜ್ ನಡುವೆ ಮಾತಿನ ಯುದ್ಧಕ್ಕೆ ಕಾರಣವಾಗಿದೆ. ಪವನ್ ಕಲ್ಯಾಣ್ ಸನಾತನ ಧರ್ಮದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

tirupati laddu row pawan kalyan slams prakash raj on his Sanatana Dharma  remark gow

ತಿರುಪತಿ ಲಡ್ಡು ವಿಷಯ ಈಗ ರಾಜಕೀಯ ತಿರುವು ಪಡೆದಿದೆ. ಈ ವಿಚಾರದಲ್ಲಿ ಆಂಧ್ರದ ಉಪ ಮುಖ್ಯಮಂತ್ರಿ ಪವನ್​ ಕಲ್ಯಾಣ್ ಮತ್ತು ನಟ ಪ್ರಕಾಶ್ ನಡುವೆ ಮತ್ತೆ ಮಾತಿನ ಯುದ್ಧ ನಡೆದಿದೆ. ಪ್ರಕಾಶ್ ಹೇಳಿಕೆಗೆ ತಿರುಗೇಟು ನೀಡಿದ ಪವನ್, ಸನಾತನ ಧರ್ಮದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. 

ಸನಾತನ ಧರ್ಮ ದ ಮೇಲಿನ ದಾಳಿಯ ಬಗ್ಗೆ ತಾನು ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ನಟ ಪವನ್ ಕಲ್ಯಾಣ್ ಜಾತ್ಯತೀತತೆ ಏಕಮುಖ ಸಂಬಂಧವಲ್ಲ ಎಂದು ನಟ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದರು.

ಮುಡಾ ಕೇಸ್‌ಗೆ ಹೈಕೋರ್ಟ್ ಶಾಕ್ ಬೆನ್ನಲ್ಲೇ ತುರ್ತು ಸಭೆ, ಶಾಸಕರ ಬೆಂಬಲವೋ? ಸಿಎಂ ರಾಜೀನಾಮೆಯೋ?

ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆಯಾಗಿದೆ ಎಂಬ ಆರೋಪದ ಬಳಿಕ  11 ದಿನಗಳ 'ಪ್ರಾಯಶ್ಚಿತ್ತ ದೀಕ್ಷಾ' (ತಪಸ್ಸು) ಅಂಗವಾಗಿ ಇಲ್ಲಿನ ಕನಕ ದೃಗ ದೇವಸ್ಥಾನದಲ್ಲಿ ಶುದ್ಧೀಕರಣದ ನಂತರ ಜನಸೇನಾ ಮುಖ್ಯಸ್ಥ ಪವನ್ ಈ ಹೇಳಿಕೆ ನೀಡಿದ್ದಾರೆ.

ದೀಕ್ಷೆ ಕೈಂಗೊಂಡಿದ್ದಕ್ಕೆ ಟೀಕಿಸುವವರನ್ನು ಪ್ರಶ್ನಿಸಿದ ಪವನ್ , ನಾನೇಕೆ ಮಾತನಾಡಬಾರದು? ನನ್ನ ಮನೆ ಮೇಲೆ ದಾಳಿ ನಡೆದಾಗ ನಾನು ಮಾತನಾಡಬಾರದೇ? ತಾನು ಬಾಲ್ಯದಿಂದಲೂ ‘ಸನಾತನ ಧರ್ಮ’ದ ಕಟ್ಟಾ ಅನುಯಾಯಿ ಧರ್ಮದ ಮೇಲೆ ದಾಳಿ ನಡೆದರೆ ಸುಮ್ಮನಿರುವುದಿಲ್ಲ. ಪ್ರಕಾಶ್ ರಾಜ್ ಅವರೇ, ನಿಮ್ಮ ಪಾಠಗಳನ್ನು ನೀವು ಕಲಿಯಬೇಕು. ನಾನು ನಿನ್ನನ್ನು ಗೌರವಿಸುತ್ತೇನೆ ಎಂದರು.

ಮುಂದುವರೆದು ಇದು ಕೇವಲ ಪ್ರಕಾಶ್ ರಾಜ್ ಮಾತ್ರವಲ್ಲ, ಜಾತ್ಯತೀತತೆಯ ಹೆಸರಿನಲ್ಲಿ ಯೋಚಿಸುವ ಎಲ್ಲ ಜನರನ್ನು ನೀವು ಅಲೆಯಬಹುದು. ನಮಗೆ ತುಂಬಾ ನೋವಾಗಿದೆ. ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡಬೇಡಿ. ಸನಾತನ ಧರ್ಮದ ಬಗ್ಗೆ ಮಾತನಾಡುವ ಮೊದಲು 100 ಬಾರಿ ಯೋಚಿಸಿ. ಇದು ಸಾಕು ಎಂದರು.

ಚಮತ್ಕಾರ! ಈ ಗ್ರಾಮದಲ್ಲಿ ಹಲವು ರೋಗಿಗಳ ಕ್ಯಾನ್ಸರ್ ಗುಣಮುಖ, ಆರೋಗ್ಯವಾಗಿರಲು ಮುಗಿಬೀಳುತ್ತಿರುವ ಜನ!

ಸನಾತನ ಧರ್ಮ ಮತ್ತು ಹಿಂದೂ ದೇವರುಗಳು ಮತ್ತು ದೇವತೆಗಳ ಮೇಲಿನ ದಾಳಿಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಪವನ್ , ಇತರ ಧರ್ಮಗಳ ಬಗ್ಗೆ ಅದೇ ರೀತಿ ಮಾತನಾಡಲು ಧೈರ್ಯ ಮಾಡುತ್ತೀರಾ ಎಂದು ಕೇಳಿದ್ದು ಮಾತ್ರವಲ್ಲ,  ‘ಸನಾತನ ಧರ್ಮ’ ರಕ್ಷಣೆಗೆ ಮಂಡಳಿ ಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.

 ಕೆಲ ದಿನಗಳ ಹಿಂದೆ ತಿರುಪತಿ ದೇವಾಲಯದಲ್ಲಿ ನೀಡಲಾಗುವ ಲಡ್ಡುಗಳಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬೆರೆಸಿರುವುದು ದೊಡ್ಡ ಆತಂಕವನ್ನು ಸೃಷ್ಟಿಸಿದೆ ದೇಶದ ಯಾವುದೇ ದೇವಾಲಯಗಳಲ್ಲಿ ಇಂತಹದ್ದು ನಡೆಯದಂತೆ ನೊಡಿಕೊಳ್ಳಲು "ಸನಾತನ ಧರ್ಮ ರಕ್ಷಣಾ ಮಂಡಳಿ" ಎಂಬುವುದನ್ನು ತಕ್ಷಣವೇ ಆರಂಭಿಸಬೇಕು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ ಪ್ರಕಾಶ್ ರಾಜ್, ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿರುವಾಗ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಕೆಲಸದಲ್ಲಿ ನಿಮ್ಮ ಗಮನವಿರಲಿ" ಎಂದು ಟೀಕಿಸಿದ್ದರು.

Latest Videos
Follow Us:
Download App:
  • android
  • ios