ಉದ್ಯೋಗಿ ರಾಜೀನಾಮೆ ಬಳಿಕ ಕೆಲಸದಿಂದ ವಜಾಗೊಳಿಸಿದ ಕಂಪನಿ, ರಿಲೀವಿಂಗ್ ಲೆಟರ್‌ಗೆ 3 ತಿಂಗಳ ವೇತನ ನೀಡುವಂತೆ ಬೆದರಿಕೆ!
ಕಂಪನಿಯೊಂದು ತನ್ನ ಉದ್ಯೋಗಿಯನ್ನು ರಾಜೀನಾಮೆ ನೀಡಿದ ನಂತರ ಕೆಲಸದಿಂದ ತೆಗೆದು ಹಾಕಿ ಭವಿಷ್ಯದಲ್ಲಿ ಆತನಿಗೆ ಕೆಲಸ ಸಿಗದಂತೆ ತಡೆಯುವುದಾಗಿ ಬೆದರಿಕೆ ಹಾಕಿತು. ಉದ್ಯೋಗಿ ತನ್ನ ಅಳಲನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡು ಸಹಾಯ ಕೋರಿದ್ದಾನೆ.
ಕೆಲಸದ ಒತ್ತಡದಿಂದ ಸಾವನ್ನಪ್ಪಿದ ಘಟನೆ ಇನ್ನೂ ಹಸಿಯಾಗಿರುವಾಗಲೇ ಭಾರತದ ಕಂಪನಿಯೊಂದು ತನ್ನ ಉದ್ಯೋಗಿಯನ್ನು ರಾಜೀನಾಮೆ ನೀಡಿದ ಒಂದು ದಿನದ ನಂತರ ಕೆಲಸದಿಂದ ತೆಗೆದು ಹಾಕಿತು. ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅವನಿಗೆ ಕೆಲಸ ಸಿಗದಂತೆ ತಡೆಯುವುದಾಗಿ ಬೆದರಿಕೆ ಹಾಕಿತು. ಅವನು ಯಾವುದೇ ಕಂಪನಿಗೆ ಸೇರಿದರೂ, ಹಿನ್ನೆಲೆ ಪರಿಶೀಲನೆ ನಡೆಸಿದಾಗ, ಅವನು ಕೆಲಸದಿಂದ ತೆಗೆದು ಹಾಕುವಂತೆ ತಿಳಿಸಲಾಗುವುದು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ಕಂಪನಿಯು ಉದ್ಯೋಗಿಗೆ ಅನುಭವ ಪತ್ರ ನೀಡಲು ಆತನ 3 ತಿಂಗಳ ಸಂಬಳವನ್ನು ಕೇಳಿದೆ. ಈ ವಿಚಾರವನ್ನು ಉದ್ಯೋಗ ಕಳೆದುಕೊಂಡಾತ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. ಜೊತೆಗೆ ಚೆನ್ನೈನಲ್ಲಿ ಹೊಸ ಕೆಲಸ ಹುಡುಕಲು ಸಹಾಯ ಕೋರಿದ್ದಾನೆ.
ರೆಡ್ಡಿಟ್‌ನಲ್ಲಿ "ರಾಂಡಿ31599" ಎಂಬ ಬಳಕೆದಾರ ಹೆಸರಿನಲ್ಲಿ ಬರೆದಿರುವ ಈತ, ತನ್ನ ಮೇಲೆ ಕೆಲಸದ ಒತ್ತಡ ತುಂಬಾ ಇತ್ತು. ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ. ಕೊನೆಗೆ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದಿರುವ ಬಳಕೆದಾರ , ಕಂಪನಿಗೆ ತನ್ನ ಅನಾರೋಗ್ಯದಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಒಂದು ತಿಂಗಳೊಳಗೆ ಬಿಡುಗಡೆ ಮಾಡುವಂತೆ ಕೋರಿದ್ದರು. ಆದರೆ ಕಂಪನಿಯು ಅವರ ರಾಜೀನಾಮೆಯನ್ನು ತಿರಸ್ಕರಿಸಿತು. ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲಸ ಮಾಡುವಂತೆ ಒತ್ತಡ ಹೇರಿತು.
ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಕಚೇರಿ ಮೇಲೆ ಗುಂಡಿನ ದಾಳಿ!
ರೆಡ್ಡಿಟ್‌ನಲ್ಲಿ ಹೇಳಿದಂತೆ, "ನಾನು ಒಂದು ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದೆ. ಅಲ್ಲಿ 8 ತಿಂಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದೆ. ನನ್ನ ಸಂಬಳವನ್ನು ಹೆಚ್ಚಿಸಲಾಯಿತು, ಆದರೆ ಕೆಲಸದ ಒತ್ತಡ ಅಸಹನೀಯವಾಗಿತ್ತು. ಒಂದು ತಿಂಗಳ ಹಿಂದೆ ನನಗೆ ಫ್ಯಾಟಿ ಲಿವರ್ ಸಮಸ್ಯೆ ಇದೆ ಎಂದು ಪರೀಕ್ಷೆಯಿಂದ ತಿಳಿದುಬಂದಿತು. ಸ್ವಲ್ಪ ಸಮಯದ ನಂತರ ನನಗೆ ಸಿಡುಬು ಬಂತು. ನಾನು ಮೂರು ದಿನ ರಜೆ ಕೇಳಿದಾಗ, ನನ್ನ ಸಿಇಒ ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿದರು. ನಾನು ನಿರಾಕರಿಸಿದೆ ಮತ್ತು ತಂಡವನ್ನು ಭಾಗಶಃ ಮಾತ್ರ ಬೆಂಬಲಿಸಿದೆ."
"ನನ್ನ ಆರೋಗ್ಯದ ಕಾರಣದಿಂದಾಗಿ ನನಗೆ ವಿರಾಮದ ಅಗತ್ಯವಿತ್ತು. ಆದ್ದರಿಂದ ನಾನು ರಾಜೀನಾಮೆ ನೀಡಿದೆ ಮತ್ತು 1 ತಿಂಗಳಲ್ಲಿ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. ಆದರೆ ನನ್ನ ಸಿಇಒ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದರು. ನನ್ನ ಕಳಪೆ ಆರೋಗ್ಯದ ನಂತರವೂ ಕೆಲಸ ಮಾಡುವಂತೆ ಹೇಳಿದರು."
ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ, ಉದ್ಯೋಗಿ ತನ್ನ ಗಾಯದ ಬಗ್ಗೆ ತಿಳಿಸಿ ಮತ್ತೆ ರಾಜೀನಾಮೆ ನೀಡಿದರು, ಆದರೆ ಕಂಪನಿಯು ಮತ್ತೆ ನಿರಾಕರಿಸಿತು. ಜೊತೆಗೆ ಯಾವುದೇ ಸಹಾನುಭೂತಿ ತೋರಿಸಲಿಲ್ಲ. "ಎಲ್ಲವನ್ನೂ ಸರಿಪಡಿಸಿಕೊಳ್ಳಲು ನಾನು 2 ದಿನ ರಜೆ ತೆಗೆದುಕೊಂಡೆ."
ಕಂಪನಿಯು ಉದ್ಯೋಗಿಯ ರಾಜೀನಾಮೆಯ ಮರುದಿನವೇ ಅವರನ್ನು ಕೆಲಸದಿಂದ ತೆಗೆದು ಹಾಕಿತು. ಜೊತೆಗೆ ಅವರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿತು. "ಅವರು ವಜಾಗೊಳಿಸುವ ಇಮೇಲ್ ಕಳುಹಿಸಿದರು. ಬಿಜಿವಿ ಪ್ರಕ್ರಿಯೆಯ ಸಮಯದಲ್ಲಿ ನಾನು ಅನುಚಿತವಾಗಿ ಕೆಲಸ ತೊರೆದಿದ್ದೇನೆ ಎಂದು ವರದಿ ಮಾಡುವುದಾಗಿ ಬೆದರಿಕೆ ಹಾಕಿದರು. ರಿಲೀವಿಂಗ್ ಮತ್ತು ಅನುಭವ ಪ್ರಮಾಣಪತ್ರವನ್ನು ನೀಡಲು ಕಂಪನಿಯು ಮೂರು ತಿಂಗಳ ಸಂಬಳವನ್ನು ಕೇಳಿತು ಎಂದು ಬೇಸರದಿಂದ ಬರೆದುಕೊಂಡಿದ್ದಾರೆ.
ಶಿರೂರು ಗುಡ್ಡ ಕುಸಿತ: 71 ದಿನಗಳ ಬಳಿಕ ನಾಪತ್ತೆಯಾಗಿದ್ದ ಲಾರಿ ಮತ್ತು ಕೇರಳದ ಚಾಲಕ ಅರ್ಜುನ್ ಶವ ಪತ್ತೆ
ರೆಡ್ಡಿಟ್‌ನಲ್ಲಿ ನಾನಾ ರೀತಿಯ ಸಲಹೆ: ಬಳಕೆದಾರರು ಹಂಚಿಕೊಂಡಿರುವ ಈ ಪೋಸ್ಟ್ ರೆಡ್ಡಿಟ್‌ನಲ್ಲಿ ಚರ್ಚೆಯ ವಿಷಯವಾಗಿದೆ. ಜನರು ಅವರಿಗೆ ನಾನಾ ರೀತಿಯ ಸಲಹೆಗಳನ್ನು ನೀಡುತ್ತಿದ್ದಾರೆ. ಅನೇಕ ಜನರು ನೀವು ಒಬ್ಬ ಒಳ್ಳೆಯ ವಕೀಲರನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ. ಕೆಲವರು ಬಳಕೆದಾರರಿಗೆ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ಒಬ್ಬ ಬಳಕೆದಾರರು ಹೇಳಿದರು, "ನಿಮಗೆ ಸಿಡುಬು ಸೋಂಕು ತಗುಲಿದಾಗ ನೀವು ಸಿಇಒ ಕ್ಯಾಬಿನ್‌ಗೆ ಹೋಗಬೇಕಿತ್ತು. ಅವರು ನಿಮ್ಮ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತಿದ್ದರು." ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, "ಕಂಪನಿಯು ರಾಜೀನಾಮೆಯನ್ನು ಸ್ವೀಕರಿಸಲಿಲ್ಲ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ನೀವು ಒಮ್ಮೆ ಇಮೇಲ್ ಕಳುಹಿಸಿದ ನಂತರ ಅದು ಮುಗಿಯಿತು. ಅವರು ನಿಮಗೆ ಅನುಮತಿ ನೀಡಿದರೆ ನೀವು ಅದನ್ನು ಹಿಂಪಡೆಯಬಹುದು. ನೀವು ಅವರಿಗೆ ರಜೆ ಇದೆ ಎಂದು ಹೇಳಿದಾಗ ಅವರು ನಿಮ್ಮನ್ನು ಆ ಹಕ್ಕಿನಿಂದ ವಂಚಿತಗೊಳಿಸಲು ಸಾಧ್ಯವಿಲ್ಲ. ವಕೀಲರನ್ನು ನೇಮಿಸಿಕೊಳ್ಳಿ, ಉಳಿದಂತೆ ಅವರು ಹೇಳುವುದೆಲ್ಲಾ ಅಸಂಬದ್ಧ." ಎಂದಿದ್ದಾರೆ.