Asianet Suvarna News Asianet Suvarna News

ಪಠಾನ್‌ಕೋಟ್ ಡ್ಯಾಮ್‌ನಲ್ಲಿ ಸೇನಾ ಹೆಲಿಕಾಪ್ಟರ್ ಕ್ರಾಶ್ ಘಟನೆ ; 2 ತಿಂಗಳ ಬಳಿಕ ಪೈಲೆಟ್ ಮೃತದೇಹ ಪತ್ತೆ!

  • ರಂಜಿತ್ ಸಾಗರ ಅಣೆಕಟ್ಟಿನಲ್ಲಿ ಸೇನಾ ಹೆಲಿಕಾಪ್ಟರ್ ಕ್ರಾಶ್ ಘಟನೆ
  • 2ನೇ ಪೈಲೆಟ್ ಮತೃದೇಹ ಪತ್ತೆ ಹಚ್ಚಿದ ಸೇನೆ
  • 76 ದಿನ ಸತತ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ
     
Pathankot Ranjit Sagar Dam Army Helicopter crash 2nd pilot body found after 76 days ckm
Author
Bengaluru, First Published Oct 17, 2021, 7:38 PM IST

ಪಠಾಣ್‌ಕೋಟ್(ಅ.17): ಎರಡು ತಿಂಗಳ ಹಿಂದೆ ಪಂಜಾಬ್‌ನ ಪಠಾಣ್‌ಕೋಟ್ ಬಳಿ ಇರುವ ರಂಜಿತ್ ಸಾಗರ ಅಣೆಕಟ್ಟು ಬಳಿ ಭಾರತೀಯ ಸೇನೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸೇನಾ ಹೆಲಿಕಾಪ್ಟರ್ ಕ್ರಾಶ್‌ನಲ್ಲಿ ಕಾಣೆಯಾಗಿದ್ದ 2ನೇ ಪೈಲೆಟ್ ಜಯಂತ್ ಜೋಶಿ ಮೃತದೇಹ 2 ತಿಂಗಳ ಬಳಿಕ ಪತ್ತೆಯಾಗಿದೆ.

 

ಪಠಾನ್‌ಕೋಟ್ ಡ್ಯಾಮ್‌ನಲ್ಲಿ ಸೇನೆಯ ಹೆಲಿಕಾಪ್ಟರ್ ಕ್ರಾಷ್

ಭಾರತೀಯ ಸೇನೆ ಕಳೆದ 76 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿತ್ತು. 76ನೇ ದಿನ ರಂಜಿತ್ ಸಾಗರ ಅಣೆಕಟ್ಟಿನಲ್ಲಿ ಜಯಂತ್ ಜೋಶಿ ಮೃತದೇಹ ಪತ್ತೆಯಾಗಿದೆ. ಈ ಕಾರ್ಯಾಚರಣೆಗೆ ಭಾರತೀಯ ಸೇನೆ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗಿತ್ತು. 

ಅಣೆಕಟ್ಟಿನ 65 ರಿಂದ 70 ಮೀಟರ್ ಆಳದ ಬೆಡ್ಡಿನಲ್ಲಿ ಕ್ಯಾಪ್ಟನ್ ಜಯಂತ್ ಜೋಶಿ ಮೃತದೇಹ ಪತ್ತೆ ಹಚ್ಚಿ ಹೊರತೆಗಯಲಾಗಿದೆ. ಹಗಲು ರಾತ್ರಿ ಸೇನೆ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದೆ. ಅಗಸ್ಟ್ 3 ರಂದು ಸೇನಾ ಹೆಲಿಕಾಪ್ಟರ್ ರಂಜಿತ್ ಸಾಗರ್ ಡ್ಯಾಮ್ ಬಳಿ ಪತನಗೊಂಡಿತು. 

ಉಧಂಪುರ ಬಳಿ ಸೇನಾ ಹೆಲಿಕಾಪ್ಟರ್‌ ಪತನ, ಮುಂದುವರಿದ ರಕ್ಷಣಾ ಕಾರ್ಯ!

ಭಾರತೀಯ ಸೇನೆಯ 254 AA ಹೆಲಿಕಾಪ್ಟರ್ ಪತನಗೊಂಡಿತ್ತು. ಬೆಳಗ್ಗೆ 10.20ಕ್ಕೆ ಹೆಲಿಕಾಪ್ಟರ್ ಪತನಗೊಂಡಿರುವ ಮಾಹಿತಿ ಪಡೆದ ಭಾರತೀಯ ಸೇನೆ ರಕ್ಷಣಾ ಕಾರ್ಯಕ್ಕೆ ಧಾವಿಸಿತ್ತು. ಪಠಾಣ್‌ಕೋಟ್ ಸೇನಾ ನೆಲೆಯಿಂದ 30 ಕಿ.ಮೀ ದೂರದಲ್ಲಿರುವ ರಂಜಿತ್ ಸಾಗರ್ ಬಳಿ ನಡೆದ ದುರಂತ ಭಾರತವನ್ನೇ ಬೆಚ್ಚಿ ಬೀಳಿಸಿತ್ತು.

 

ತರಬೇತಿ ಸೇನಾ ಹೆಲಿಕಾಪ್ಟರ್ ಪತನವನ್ನು ಭಾರತೀಯ ಸೇನೆ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ರಕ್ಷಣಾ ಕಾರ್ಯಾ ಹಾಗೂ ಪೈಲೈಟ್ ಪತ್ತೆ ಕಾರ್ಯಕ್ಕೆ ಸತತ ಕಾರ್ಯಾಚರಣೆ ನಡೆಸತ್ತು. ಮೊದಲ ಪೈಲೆಟ್ ಮೃತದೇಹ ಘಟನೆ ನಡೆದ ಮರುದಿನ ಪತ್ತೆಯಾಗಿತ್ತು. ಆದರೆ ಎರಡನೇ ಪೈಲೆಟ್ ಮೃತದೇಹ 76 ದಿನದ ಬಳಿಕ ಪತ್ತೆಯಾಗಿದೆ.

 

Follow Us:
Download App:
  • android
  • ios