Asianet Suvarna News Asianet Suvarna News

ಪಠಾನ್‌ಕೋಟ್ ಡ್ಯಾಮ್‌ನಲ್ಲಿ ಸೇನೆಯ ಹೆಲಿಕಾಪ್ಟರ್ ಕ್ರಾಷ್

  • ಪಠಾನ್‌ಕೋಟ್‌ನಲ್ಲಿ ಹೆಲಿಕಾಪ್ಟರ್ ಕ್ರಾಷ್
  • ಅದೃಷ್ಟವಶಾತ್ ಪೈಲಟ್‌ಗಳು ಪಾರು
Army Helicopter Crashes Near Ranjit Sagar Dam in Pathankot Rescue Operations Underway dpl
Author
Bangalore, First Published Aug 3, 2021, 3:14 PM IST
  • Facebook
  • Twitter
  • Whatsapp

ಪಠಾನ್‌ಕೋಟ್‌(ಆ.03): ಪಂಜಾಬಿನ ಪಠಾನ್‌ಕೋಟ್‌ನ ರಂಜಿತ್ ಸಾಗರ್ ಡ್ಯಾಮ್‌ನಲ್ಲಿ ಆರ್ಮಿಯ ಹೆಲಿಕಾಪ್ಟರ್ ಕ್ರಾಷ್ ಆಗಿದೆ. ಹೆಲಿಕಾಪ್ಟರ್‌ನ ಪೈಲಟ್ ಹಾಗೂ ಕೋ-ಪೈಲಟ್ ಅದೃಷ್ಟವಶಾತ್ ಪಾರಾಗಿದ್ದಾರೆ. ಭಾರತದ ಆರ್ಮಿಯ 254 AA ಹೆಲಿಕಾಪ್ಟರ್ 10.0ರ ವೇಳೆಗೆ ಕ್ರಾಷ್ ಆಗಿದ್ದು, ಪೊಲೀಸ್ ಹಾಗೂ ಎನ್‌ಡಿಆರ್‌ಎಫ್ ಸದ್ಯ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ತಂಡವೂ ಸ್ಥಳಕ್ಕೆ ಆಗಮಿಸಿದೆ.

ಹೆಲಿಕಾಪ್ಟರ್ ಕ್ರಾಷ್ ಆಗಿರುವ ಮಾಹಿತಿ ಸಿಕ್ಕಿದೆ. ನಾವು ತಕ್ಷಣ ಸ್ಥಳದತ್ತ ಹೊರಟಿದ್ದೇವೆ ಎಂದು ಪಠಾನ್‌ಕೋಟ್ ಎಸ್‌ಎಸ್‌ಪಿ ಸುರಿಂದರ ಲಂಬಾ ಹೇಳಿದ್ದಾರೆ. ಯಾವುದೇ ಜೀವಹಾನಿ ಸಂಭವಿಸಿರುವ ಬಗ್ಗ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಪಠಾನ್ ಕೋಟ್‌ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಡ್ಯಾಮ್‌ನಲ್ಲಿ ಘಟನೆ ಸಂಭವಿಸಿದೆ. ವೆಪನ್ ಸಿಸ್ಟಂ ಹೆಲಿಕಾಪ್ಟರ್ ಪಠಾನ್‌ಕೋಟ್‌ನಿಂದ ದೈನಂದಿನ ವಿಹಾರಕ್ಕೆ ಹೊರಟಿತ್ತು.

ಕಾಶ್ಮೀರದಲ್ಲಿ ಈ ವರ್ಷ 89 ಉಗ್ರರ ಹತ್ಯೆ!

ಪಠಾಣ್‌ಕೋಟ್ ಪಂಜಾಬ್‌ ರಾಜ್ಯದ ಒಂದು ಪ್ರಮುಖ ನಗರವಾಗಿದೆ. ಪಠಾಣ್‌ಕೋಟ್ ಜಿಲ್ಲೆಯು ಅದರ ಪಶ್ಚಿಮದಲ್ಲಿ ಅಂತರಾಷ್ಟ್ರೀಯ  ಪಾಕಿಸ್ತಾನದ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ.

ಪ್ರಸಿದ್ಧ ಇತಿಹಾಸಕಾರರ ಪ್ರಕಾರಪಠಾಣ್‌ಕೋಟ್‌ನ ಹೆಸರು 'ಪಠಾಣ್' ಪದದಿಂದ ಹುಟ್ಟಿಕೊಂಡಿದೆ. ರಜಪೂತ ಆಡಳಿತಗಾರರು-17-18 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ್ದಾರೆ. ಪಠಾಣ್‌ಕೋಟ್ ತನ್ನ ಮಿಲಿಟರಿ ಬೇಸ್‌ನಿಂದಲೇ ವಿಶ್ವವಿಖ್ಯಾತವಾಗಿದೆ. ಮ್ಯಾಮನ್ ಕ್ಯಾಂಟ್. ಇದು ಏಷ್ಯಾದ ಅತಿದೊಡ್ಡ ಸೇನಾ ನೆಲೆಯಾಗಿದೆ.

Follow Us:
Download App:
  • android
  • ios