Asianet Suvarna News Asianet Suvarna News

10 ಗಂಟೆ ಕಾದರೂ ವಿಮಾನ ಬರಲೇ ಇಲ್ಲ , Go Air ವಿರುದ್ಧ ರೊಚ್ಚಿಗೆದ್ದ ಪ್ರಯಾಣಿಕರು!

  • 10 ಗಂಟೆ ಕಾದರೂ Go Air ವಿಮಾನ ಬರಲಿಲ್ಲ, ಪ್ರಯಾಣಿಕರು ಹೈರಾಣು
  • ವಿಮಾನದ ಕುರಿತು ಯಾವುದೇ ಮಾಹಿತಿ ನೀಡಿದ ಅಧಿಕಾರಿಗಳು
  • ರೊಚ್ಚಿಗೆದ್ದ ಪ್ರಯಾಣಿಕರಿಂದ ಅಧಿಕಾರಿಗಳ ತರಾಟೆ
Passengers waits 10 hours for Go air G8 873 flight No clarity form officials Bengaluru ckm
Author
Bengaluru, First Published Oct 9, 2021, 9:27 PM IST
  • Facebook
  • Twitter
  • Whatsapp

ಬೆಂಗಳೂರು(ಅ.09):   ಹವಾಮಾನ ಬದಲಾವಣೆ, ತಾಂತ್ರಿಕ ಕಾರಣ ಸೇರಿದಂತೆ ಕೆಲ ಸಂದರ್ಭಗಳಲ್ಲಿ ವಿಮಾನ ವಿಳಂಬವಾಗಿದೆ, ವಿಮಾನ ರದ್ದಾಗಿದೆ ಅನ್ನೋ ಸಂದೇಶ ಏರ್‌ಪೋರ್ಟ್‌ನಲ್ಲಿ ನೀಡಲಾಗುತ್ತದೆ. ತಕ್ಷಣವೇ ಪರ್ಯಾಯ ವಿಮಾನದ ವ್ಯವಸ್ಥೆ ಅಥವಾ ಮುಂದಿನ ಸಮಯವನ್ನು ಘೋಷಿಲಾಗುತ್ತದೆ. ಆದರೆ ಗೋ ಏರ್ ವಿಮಾನಕ್ಕಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಗಂಟೆ ಕಾದಿದ್ದಾರೆ. ಆದರೆ ವಿಮಾನ ಬರಲೇ ಇಲ್ಲ, ಟೇಕ್ ಆಫ್ ಆಗಲೇ ಇಲ್ಲ. ವಿಳಂಭ ಅಥವಾ ರದ್ದು ಸೂಚನೆಯೂ ಇಲ್ಲ. ಅಧಿಕಾರಿಗಳನ್ನು ಕೇಳಿದರೆ ಉದ್ಧಟತನದ ಉತ್ತರ. 

ಮಂಗ್ಳೂರಿಂದ ಮಸ್ಕತ್‌ಗೆ ಹೋಗಬೇಕಿದ್ದ ವಿಮಾನ ರದ್ದು: ಆಕ್ರೋಶ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. GoAir G8 873 (ಗೋ ಏರ್) ವಿಮಾನ ಪ್ರಯಾಣಕ್ಕಾಗಿ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಂದು ಎಲ್ಲಾ ಭದ್ರತಾ ಪರಿಶೀಲನೆ ಮುಗಿಸಿ ಕಾಯಲು ಆರಂಭಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಗೋ ಏರ್ ಹೋರಟ ಉದಾಹರಣೆ ತೀರಾ ವಿರಳ. ಹೀಗಾಗಿ ಅರ್ಧ ಗಂಟೆ ಲೇಟಾದರು ಪ್ರಯಾಣಿಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

 

ಎಂದು, ಎರಡು ಹೀಗೆ 10 ಗಂಟೆ ವಿಮಾನಕ್ಕಾಗಿ ಕಾದಿದ್ದಾರೆ. ಬದಲಿ ವಿಮಾನವೂ ಇಲ್ಲ, ವಿಮಾನ ರದ್ದಾಗಿದೆ ಅನ್ನೋ ಸೂಚನೆಯೂ ಇಲ್ಲ. ಗೋ ಏರ್ ಅಧಿಕಾರಿಗಳನ್ನು ಕೇಳಿದರೆ ಉದ್ಧಟತನದ ಉತ್ತರ ನೀಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಗೋ ಏರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಖಾಲಿ ಫ್ಲೈಟ್‌ನಲ್ಲಿ ಟಚ್ ಇಟ್ ಸಾಂಗ್‌ಗೆ ಗಗನ ಸಖಿ ಡ್ಯಾನ್ಸ್

10 ಗಂಟೆ ಬಳಿಕವೂ ಪ್ರಯಾಣಿಕರಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣಾವಾಗಿತ್ತು.

ಗೋ ಏರ್ ವಿಮಾನದ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಪರದಾಡುವಂತಾಗಿದೆ. 

 

Follow Us:
Download App:
  • android
  • ios