ನಿಗದಿತ ಸಮಯಕ್ಕಿಂತ ಮೊದಲೇ ಬಂದ ರೈಲು ಖುಷಿಯಿಂದ ನಿಲ್ದಾಣದಲ್ಲೇ ಕುಣಿದು ಕುಪ್ಪಳಿಸಿದ ಜನ ಗಾರ್ಭ ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಯಾಣಿಕರು
ಡಾನ್ಸ್ ಇಷ್ಟಪಡುವವರಿಗೆ ಡಾನ್ಸ್ ಮಾಡುವುದಕ್ಕೆ ಇಂತಹದ್ದೇ ಕಾರಣ ಬೇಕು ಎಂಬುದಿಲ್ಲ. ಮ್ಯೂಸಿಕ್ ಅಥವಾ ತಮಟೆ ಸದ್ದು ಕೇಳಿದರೆ ಸಾಕು ನಿಂತಲ್ಲೇ ಹೆಜ್ಜೆ ಹಾಕಲು ಶುರು ಮಾಡುತ್ತಾರೆ. ಹಾಗೆಯೇ ಗುಜರಾತಿ ಮೂಲದ ಗಾರ್ಭ ಡಾನ್ಸ್ ಮಾಡುವವರು ಹಾಗೂ ಇಷ್ಟಪಡುವವರದೂ ಇದೇ ಕತೆ ಅವಕಾಶ ಸಿಕ್ಕಿದಲ್ಲಿ ಅವರು ಎಲ್ಲಿ ಬೇಕಾದರಲ್ಲಿ ನರ್ತಿಸಬಲ್ಲರು. ಹಾಗೆಯೇ ಈಗ ರೈಲೊಂದು ಸಮಯಕ್ಕೆ ಮೊದಲೇ ಬಂತು ಎಂದು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಪ್ರಯಾಣಿಕರು ಗಾರ್ಭ ನೃತ್ಯ ಮಾಡಿದ್ದಾರೆ. ಅಲ್ಲದೇ ಇವರೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ಇದ್ದ ಇತರರು ಕೂಡ ತಮ್ಮ ಜೊತೆ ಡಾನ್ಸ್ ಮಾಡಿ ಸಂಭ್ರಮಿಸುವಂತೆ ಮಾಡಿದ್ದಾರೆ.
ಮಧ್ಯಪ್ರದೇಶದ (Madhya Pradesh) ರತ್ಲಂ ರೈಲು ನಿಲ್ದಾಣದಲ್ಲಿ (Ratlam railway station) ಬುಧವಾರ (ಮೇ.25) ಈ ದೃಶ್ಯ ಸೆರೆಯಾಗಿದೆ. ಬಾಂದ್ರಾ-ಹರಿದ್ವಾರ ಎಕ್ಸ್‌ಪ್ರೆಸ್ ತನ್ನ ಆಗಮನದ ಅಂದಾಜು ಸಮಯಕ್ಕಿಂತ 20 ನಿಮಿಷಗಳ ಮುಂಚಿತವಾಗಿ ರಾತ್ರಿ 10:15 ಕ್ಕೆ ರತ್ಲಂ ನಿಲ್ದಾಣವನ್ನು ತಲುಪಿತು. ಈ ರೈಲಿಗೆ ರತ್ಲಾಮ್ ಜಂಕ್ಷನ್‌ನಲ್ಲಿ (Ratlam Junction) ನಿಲುಗಡೆ ಸಮಯ ಸಾಮಾನ್ಯವಾಗಿ 10 ನಿಮಿಷಗಳು ಆದರೆ ಮುಂಚಿತವಾಗಿ ರೈಲು ಬಂದಿದ್ದರಿಂದ ಸುಮಾರು ಅರ್ಧ ಘಂಟೆಯವರೆಗೆ ಈ ರೈಲು ಇದೇ ನಿಲ್ದಾಣದಲ್ಲಿ ಇರುವುದು.
ಹೀಗಾಗಿ ಅರ್ಧ ಗಂಟೆ ರೈಲು ಚಲಿಸುವುದಿಲ್ಲ ಎಂದು ತಿಳಿದ ಜನರು, ಮನರಂಜನೆ ಮತ್ತು ಸಂಭ್ರಮಾಚರಣೆ ಮಾಡಲು ಶುರು ಮಾಡಿದರು. ಕೆಲವು ಬೇಸರಗೊಂಡ ಗುಜರಾತಿ ಪ್ರಯಾಣಿಕರು ( Gujarati passengers) ಪ್ಲಾಟ್‌ಫಾರ್ಮ್ 4 ರಲ್ಲಿ ಇಳಿದು, ಜನಪ್ರಿಯ ಗಾರ್ಬಾ ಟ್ರ್ಯಾಕ್‌ಗಳನ್ನು ಪ್ಲೇ ಮಾಡಿದರು ಮತ್ತು ದೊಡ್ಡ ವೃತ್ತದಲ್ಲಿ ಗಾರ್ಬಾ ಮಾಡಲು ಪ್ರಾರಂಭಿಸಿದರು. ರೈಲಿನ ಹೊರಗೆ ಜನರು ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿದ ಸಹ ಪ್ರಯಾಣಿಕರು ತಾವೂ ಕೂಡ ಗಾರ್ಬಾ ಫೆಸ್ಟ್‌ಗೆ ಸೇರಲು ಇಳಿದರು.
ತಮಟೆ ಸದ್ದಿಗೆ ಸಿಟಿ ಹುಡುಗಿ ಸಖತ್ ಸ್ಟೆಪ್ ವಿಡಿಯೋ ವೈರಲ್
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣಗಳಾದ ಕೂ (Koo) ಮತ್ತು ಫೇಸ್‌ಬುಕ್‌ನಲ್ಲಿ (Facebook) ಈ ಸಂತೋಷದಾಯಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಯಾನಿಕರು ಯಾವುದೇ ಪೂರ್ವ ತಯಾರಿ ಇಲ್ಲದಿದ್ದರು ಹಾಯಾಗಿ ಗಾರ್ಭ ಡಾನ್ಸ್ ಮಾಡುತ್ತಾ ಎಂಜಾಯ್ ಮಾಡುವುದನ್ನು ಕಾಣಬಹುದು.
ಏನ್ ಸ್ಟೆಪ್ ಗುರು: ಬಸ್ ಸ್ಟ್ಯಾಂಡ್‌ನಲ್ಲಿ ತಾತನ ಡಾನ್ಸ್‌ಗೆ ಯುವಕರೇ ಪೆಚ್ಚು
ಸಾಮಾಜಿಕ ಜಾಲತಾಣಗಳು ಅದ್ಭುತ ಮತ್ತು ಆಸಕ್ತಿದಾಯಕ ವೀಡಿಯೊಗಳ ತಾಣವಾಗಿದ್ದು, ಉತ್ತಮ ಮನೋರಂಜನೆ ನೀಡುತ್ತವೆ. ಹಾಗೆಯೇ ಇಲ್ಲೊಂದು ಅದೇ ರೀತಿಯ ಮನೋರಂಜನೆ ನೀಡುವ ವಿಡಿಯೋವೊಂದು ವೈರಲ್ ಆಗಿದೆ. ಹಣ ತೆಗೆಯಲು ಎಟಿಎಂಗೆ ಹೋದ ಯುವತಿ ಎಟಿಎಂ ಯಂತ್ರದಿಂದ ಹಣ ಬರುತ್ತಿದ್ದಂತೆ ಎಟಿಎಂ ಒಳಗೆಯೇ ಸಖತ್ ಆಗಿ ಡಾನ್ಸ್ ಮಾಡುತ್ತಾಳೆ. ಇದರ ವಿಡಿಯೋ ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಎಟಿಎಂ ಒಳಗೆ ಇಬ್ಬರು ಹುಡುಗಿಯರು ಕಾಣಿಸಿಕೊಂಡಿದ್ದಾರೆ. ಕಪ್ಪು ಟಾಪ್ ಮತ್ತು ಕಪ್ಪು ಮಾಸ್ಕ್ ಧರಿಸಿರುವ ಹುಡುಗಿ ಎಟಿಎಂ ಮೆಷಿನ್‌ನಿಂದ ಹಣ ತೆಗೆಯುವ ಸಮಯದಲ್ಲಿ ಸಖತ್ ಆಗಿ ಡಾನ್ಸ್ ಮಾಡುತ್ತಾಳೆ. ವೀಡಿಯೊದ ಕೊನೆಯಲ್ಲಿ ಅವಳು ಹಣ ಹಿಂಪಡೆದ ನಂತರ ಕೃತಜ್ಞತೆಯಿಂದ ಎಟಿಎಂ ಯಂತ್ರಕ್ಕೆ ನಮಸ್ಕರಿಸುವುದನ್ನು ಕಾಣಬಹುದು.
ಅವಳ ವೇತನ ಆಗುವ ದಿನ ಅದಾಗಿತ್ತು. ಅಂತಿಮವಾಗಿ ಅವಳ ಕೈಗೆ ಹಣ ಬಂದಾಗ ಆಕೆಗೆ ಸಂತಸ ತಡೆಯಲಾಗದೆ ಡಾನ್ಸ್ (Dance)ಮಾಡಿರಬೇಕು ಎಂದು ಅವಳ ನೃತ್ಯವನ್ನು ನೆಟ್ಟಿಗರು ವಿಶ್ಲೇಷಿಸಿದ್ದಾರೆ.