Asianet Suvarna News Asianet Suvarna News

ನಾಗ್ಪುರ ಪ್ರಯಾಣಕ್ಕೆ ವಿಮಾನ ಹತ್ತಿದ ಮಹಿಳೆಗೆ ಶಾಕ್, ಕುಳಿತುಕೊಳ್ಳುವ ಸೀಟು ನಾಪತ್ತೆ!

ವಿಮಾನದಲ್ಲಿ ಲಗೇಜ್ ನಾಪತ್ತೆಯಾಗಿರುವು ನೀವು ಕೇಳಿಬರಹುದು. ಆದರೆ ಪುಣೆ-ನಾಗ್ಪುರ ಇಂಡಿಗೋ ವಿಮಾನದಲ್ಲಿ ಕುಳಿತುಕೊಳ್ಳುವ ಸೀಟೇ ನಾಪತ್ತೆಯಾದ ಘಟನೆ ನಡೆದಿದೆ. 

Passenger report Seat cushion missing on Pune Nagpur indigo flight Shocked by netizens ckm
Author
First Published Nov 27, 2023, 11:15 AM IST

ಪುಣೆ(ನ.27)ವಿಮಾನ ಪ್ರಯಾಣದಲ್ಲಿ ಹಲವು ಅಹಿತಕರ ಘಟನೆಗಳು ವರದಿಯಾಗಿದೆ. ಲಗೇಜ್ ಬ್ಯಾಗ್ ಮಿಸ್ಸಿಂಗ್, ಸಹ ಪ್ರಯಾಣಿಕರು, ಸಿಬ್ಬಂದಿಗಳ ಅನುಚಿತ ವರ್ತನೆ, ಸೇವೆಯಲ್ಲಿ ವ್ಯತ್ಯಯ ಸೇರಿದಂತೆ ಸಾಲು ಸಾಲು ಸಮಸ್ಯೆಗಳ ಕುರಿತು ವರದಿಯಾಗಿದೆ. ಆದರೆ ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೇ ಅಚ್ಚರಿಯಾಗುವ ಘಟನೆ ನಡೆದಿದೆ. ವಿಮಾನ ಟಿಕೆಟ್ ಬುಕ್ ಆಗಿದೆ. ಚೆಕಿಂಗ್ ಎಲ್ಲಾ ಮುಗಿದು ಪ್ರಯಾಣಕ್ಕಾಗಿ ವಿಮಾನದೊಳಕ್ಕೆ ಹತ್ತಿದ ಮಹಿಳೆಗೆ ಶಾಕ್ ಆಗಿದೆ. ನೀಡಿರುವ 10ಎ ಸೀಟೇ ನಾಪತ್ತೆಯಾಗಿದೆ. ಸೀಟಿನ ಕುಶನ್ ಇರಲೇ ಇಲ್ಲ. ಸುಖಕರ ಪ್ರಯಾಣ ನರಕವಾಗಿದ ಘಟನೆ ಪುಣೆ-ನಾಗ್ಪುರ ಇಂಡಿಗೋ ವಿಮಾನದಲ್ಲಿ ನಡೆದಿದೆ.

ಸಾಗರೀಕಾ ಪಟ್ನಾಯಕ್ ಹಾಗೂ ಪತಿ ಸುಬ್ರತ್ ಪಟ್ನಾಯಕ್  ಪುಣೆಯಿಂದ ನಾಗ್ಪುರಕ್ಕೆ ತೆರಳಲು ಇಂಡಿಗೋ 6ಇ-6798 ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದ ದಂಪತಿ ಚೆಕೆಂಗ್ ಮುಗಿಸಿದ್ದಾರೆ. ತಮ್ಮ ಲಗೇಜ್ ಬ್ಯಾಗ್‌ಗಳನ್ನು ನೀಡಿ ಆಸನ ನಂಬರ್ ಕೂಡ ಪಡೆದಿದ್ದಾರೆ. ಪತ್ನಿ ಸಾಗರೀಕಾ ಪಟ್ನಾಯಕ್‌ಗೆ 10ಎ ಸೀಟು ನೀಡಲಾಗಿದೆ.

ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರ ನಡುವೆ ಪ್ಯಾಂಟ್ ಬಿಚ್ಚಿದ ಮಹಿಳೆ, ವಿಡಿಯೋ ವೈರಲ್!

ಇಂಡಿಗೋ 6ಇ-6798  ವಿಮಾನ ಹತ್ತಿದ ದಂಪತಿ ತಮ್ಮ ಸೀಟಿನ ಬಳಿ ತಲುಪಿದಾಗ ಅಚ್ಚರಿಯಾಗಿದೆ. ಕಾರಣ ಸುಬ್ರತ್ ಪಟ್ನಾಯಕ್ ಪಕ್ಕದಲ್ಲೇ ಸಾಗರೀಕಾಗೆ 10ಎ ಸೀಟು ಅಲಾಟ್ ಮಾಡಲಾಗಿತ್ತು. ಈ ಸೀಟಿನಲ್ಲಿ ಕುಶನ್ ಮಾಯವಾಗಿತ್ತು. ಅಚ್ಚರಿಗೊಂಡ ದಂಪತಿ, ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸಿಬ್ಬಂದಿ ಸೀಟಿನ ಕೆಳಗೆ ಹುಡುಕಲು ತಿಳಿಸಿದ್ದಾರೆ. ದಂಪತಿಗಳಿಬ್ಬರು ಸೀಟಿನ ಪಕ್ಕದಲ್ಲಿ, ಕೆಳಗೆ ಹುಡುಕಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ.

ಮತ್ತೆ ಸಿಬ್ಬಂದಿ ಕರೆದು ಮಾಹಿತಿ ನೀಡಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿಗಳು ತೆರಳಿ ಬೇರೊಂದು ಕುಶನ್ ತಂದು ಸೀಟಿಗೆ ಜೋಡಿಸಿದ್ದಾರೆ. ಆದರೆ ಈ ಕುಶನ್ ಸೀಟಿಗೆ ಸರಿಯಾಗಿ ಹೊಂದಿಕೆಯಾಗುತ್ತಿರಲಿಲ್ಲ. ಆದರೆ ಬೇರೆ ದಾರಿಯಿಲ್ಲದೆ ಇದೇ ಸೀಟಿನಲ್ಲಿ ಕುಳಿತು ಸಾಗರೀಕಾ ಪಟ್ನಾಯಕ್ ಪ್ರಯಾಣ ಮಾಡಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸುಬ್ರತ್ ಪಟ್ನಾಯಕ್, ಇಂಡಿಗೋದಂತ ವಿಮಾನದಲ್ಲಿ ಈ ರೀತಿ ಕುಶನ್ ಮಿಸ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

 

ಕುಡಿದು ಗಗನಸಖಿ ಮುದ್ದಾಡಲು ಹೋದ ಪ್ರಯಾಣಿಕ, ಬೆಂಗಳೂರಲ್ಲಿ ಇಳಿಯುತ್ತಿದ್ದಂತೆ ಆರೋಪಿ ಅರೆಸ್ಟ್!

ಈ ರೀತಿಯ ನಿರ್ಲಕ್ಷ್ಯ ವಿಮಾನದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಪ್ರತಿ ಪ್ರಯಾಣದ ಬಳಿಕ ಪ್ರತಿಯೊಂದು ಸೀಟು, ಸಂಪೂರ್ಣ ವಿಮಾನ ಶುಚಿಗೊಳಿಸುತ್ತಾರೆ. ಆದರೂ ಸೀಟು ಮಿಸ್ಸಾಗಿರುವುದು ಯಾರೂ ಗಮನಸಿಲ್ಲ ಅನ್ನೋದು ನಿರ್ಲಕ್ಷ್ಯದ ಪರಮಾವಧಿ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. 

Follow Us:
Download App:
  • android
  • ios