Asianet Suvarna News Asianet Suvarna News

ಕೇಜ್ರಿವಾಲ್ ಆಪ್ ಪಕ್ಷಕ್ಕೆ ಸಂಕಷ್ಟ: 97 ಕೋಟಿ ವಸೂಲಿಗೆ ಗವರ್ನರ್ ಆದೇಶ

ಕಳೆದ 5 ವರ್ಷದ ಅವಧಿಯಲ್ಲಿ ದಿಲ್ಲಿಯ ಆಮ್‌ ಆದ್ಮಿ ಪಕ್ಷದ (ಆಪ್‌) ಸರ್ಕಾರವು, ಸರ್ಕಾರಿ ಜಾಹೀರಾತುಗಳನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಂಡಿದೆ ಎಂಬ ಆರೋಪ ಹೊರಿಸಿ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಆಮ್‌ ಆದ್ಮಿ ಪಕ್ಷಕ್ಕೆ 97 ಕೋಟಿ ರು. ಪಾವತಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

Party promotion in government advertisement Governor order for recovery of 97 crores akb
Author
First Published Dec 21, 2022, 9:38 AM IST

ನವದೆಹಲಿ: ಕಳೆದ 5 ವರ್ಷದ ಅವಧಿಯಲ್ಲಿ ದಿಲ್ಲಿಯ ಆಮ್‌ ಆದ್ಮಿ ಪಕ್ಷದ (ಆಪ್‌) ಸರ್ಕಾರವು, ಸರ್ಕಾರಿ ಜಾಹೀರಾತುಗಳನ್ನು ಪಕ್ಷದ ಪ್ರಚಾರಕ್ಕಾಗಿ ಬಳಸಿಕೊಂಡಿದೆ ಎಂಬ ಆರೋಪ ಹೊರಿಸಿ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಆಮ್‌ ಆದ್ಮಿ ಪಕ್ಷಕ್ಕೆ 97 ಕೋಟಿ ರು. ಪಾವತಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಆದರೆ ಇದನ್ನು ಆಪ್‌ ‘ಹೊಸ ಲವ್‌ ಲೆಟರ್‌’ (ಪ್ರೇಮ ಪತ್ರ) ಎಂದು ವ್ಯಂಗ್ಯವಾಡಿದ್ದು, ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಇಂತಹ ಆದೇಶ ನೀಡುವ ಯಾವುದೇ ಅಧಿಕಾರವಿಲ್ಲ ಎಂದು ತಿರುಗೇಟು ನೀಡಿದೆ. ಇದೇ ವೇಳೆ, ‘ಇದು ಜಾಹೀರಾತು ಹಗರಣ. ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.

‘ಸರ್ಕಾರಿ ಜಾಹೀರಾತುಗಳ ವೇಷದಲ್ಲಿ ಪಕ್ಷದ ಪ್ರಚಾರಕ್ಕಾಗಿ ಆಪ್‌ ಸರ್ಕಾರ ಜಾಹೀರಾತುಗಳನ್ನು ಪ್ರಕಟಿಸಿದೆ. ಈ ಮೂಲಕ 2015ರ ಸುಪ್ರೀಂಕೋರ್ಟ್‌ ಹಾಗೂ 2016ರ ದೆಹಲಿ ಹೈಕೋರ್ಟ್‌ನ ತೀರ್ಪು ಉಲ್ಲಂಘಿಸಿದೆ. ಅಲ್ಲದೇ ಸರ್ಕಾರಿ ಜಾಹೀರಾತಿನ ವಿಷಯ ನಿಯಂತ್ರಣ ಸಮಿತಿ (2016) ನಿಗದಿ ಪಡಿಸಿದ ಮಾನದಂಡಗಳನ್ನು ಉಲ್ಲಂಘಿಸಿದೆ. ಹೀಗಾಗಿ ದೆಹಲಿ ಸರ್ಕಾರಿ ನಿಧಿಯಿಂದ ವ್ಯಯಿಸಿದ ಹಣವನ್ನು ವಸೂಲಿ ಮಾಡಬೇಕು’ ಎಂದು ವಾರ್ತಾ ಹಾಗೂ ಪ್ರಸಾರ ಇಲಾಖೆಯು ((News and Broadcasting Department)) ಕೇಂದ್ರ ಸರ್ಕಾರದ ಜಾಹೀರಾತು ನಿಯಂತ್ರಣ ಸಮಿತಿ ಸೂಚನೆ ಮೇರೆಗೆ ತನಿಖೆ ನಡೆಸಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ (V.K. Saxena) ಕ್ರಮ ಕೈಗೊಂಡಿದ್ದು, ಹಣ ವಸೂಲಿಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಆಪ್‌ ತಿರುಗೇಟು

ಆದರೆ ಇದಕ್ಕೆ ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ (AAP MLA Saurabh Bhardwaj) ತಿರುಗೇಟು ನೀಡಿದ್ದು, ‘ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ವಿವಿಧ ಜಾಹೀರಾತುಗಳನ್ನು ಪ್ರಕಟಿಸಿವೆ. ಅವರಿಂದ 22,000 ಕೋಟಿ ರು. ವಸೂಲಿ ಮಾಡಿದ ಬಳಿಕ ನಾವೂ 97 ಕೋಟಿ ರು. ಪಾವತಿಸುತ್ತೇವೆ’ ಎಂದು ಸವಾಲೆಸೆದಿದ್ದಾರೆ.

ಗವರ್ನರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಆಪ್ ಸರ್ಕಾರಕ್ಕೆ ಮುಖಭಂಗ, ಕೇಜ್ರಿವಾಲ್‌ಗೆ ಮಂಗಳಾರತಿ!

ಆಪ್‌ನಿರ್ಭರ ಅಥವಾ ಆತ್ಮನಿರ್ಭರ ನಡುವೆ ಸೂಕ್ತ ಆಯ್ಕೆ ಮಾಡಿ: ಅಮಿತ್‌ ಶಾ

ನಾನು ಭಯೋತ್ಪಾದಕ ಆಗಿದ್ದರೆ ಯಾಕೆ ಅರೆಸ್ಟ್‌ ಮಾಡಲಿಲ್ಲ? ಮೋದಿ, ರಾಹುಲ್‌ಗೆ ಕೇಜ್ರಿ ಸವಾಲು!

Follow Us:
Download App:
  • android
  • ios