ಔರಂಗ​ಬಾ​ದ್(ಮಾ.08)‌: ರಾಜ್ಯಾ​ದ್ಯಂತ ಕೊರೋನಾ ಸೋಂಕು ವ್ಯಾಪ​ಕ​ವಾಗಿ ಹಬ್ಬು​ತ್ತಿ​ರುವ ಬೆನ್ನಲ್ಲೇ, ಇದರ ನಿಯಂತ್ರ​ಣ​ಕ್ಕಾಗಿ ಔರಂಗ​ಬಾದ್‌ ಜಿಲ್ಲಾ​ಡ​ಳಿತ ಮಾ.11ರಿಂದ ಏ.4ರವ​ರೆಗೆ ಭಾಗಶಃ ಲಾಕ್‌​ಡೌನ್‌ ಜಾರಿ ಮಾಡಲು ನಿರ್ಧ​ರಿ​ಸಿದೆ.

ಈ ಪ್ರಕಾರ ವಾರಾಂತ್ಯ​ದಲ್ಲಿ ತುರ್ತು ಸೇವೆ​ಗ​ಳನ್ನು ಹೊರ​ತು​ಪ​ಡಿಸಿ ಮಾರು​ಕ​ಟ್ಟೆ​ಗಳು, ಮಾಲ್‌​ಗಳು, ಸಿನಿಮಾ ಥಿಯೇ​ಟರ್‌ ಸೇರಿ​ದಂತೆ ಇನ್ನಿ​ತರ ಇನ್ನಿ​ತ​ರ ಮನೋ​ರಂಜ​ನೆಯ ಚಟು​ವ​ಟಿ​ಕೆ​ಗ​ಳು ಸಂಪೂರ್ಣ ಬಂದ್‌ ಆಗಿ​ರ​ಲಿವೆ ಎಂದು ಅಧಿ​ಕಾ​ರಿ​ಗಳು ತಿಳಿ​ಸಿ​ದ್ದಾರೆ.

ಅಲ್ಲದೆ ಶನಿ​ವಾರ ಮತ್ತು ಭಾನು​ವಾ​ರವು ವಿಶ್ವ ಪ್ರಸಿದ್ಧ ಪಾರಂಪ​ರಿಕ ಐತಿ​ಹಾ​ಸಿಕ ಕ್ಷೇತ್ರ​ಗ​ಳಾದ ಅಜಂತಾ ಮತ್ತು ಎಲ್ಲೋರಾ ಸೇರಿ​ದಂತೆ ಜಿಲ್ಲೆ​ಯ​ಲ್ಲಿ​ರುವ ಇನ್ನಿ​ತರ ಪ್ರವಾಸಿ ತಾಣ​ಗಳು ನಿಷ್ಕಿ್ರ​ಯ​ವಾ​ಗಿ​ರ​ಲಿವೆ. ಶಾಲಾ, ಕಾಲೇ​ಜು​ಗಳು ಸೇರಿ ಇನ್ನಿ​ತರ ಶೈಕ್ಷ​ಣಿಕ ಸಂಸ್ಥೆ​ಗಳು ಬಂದ್‌ ಆಗಿ​ರ​ಲಿವೆ.

ಜೊತೆಗೆ ಈ ಅವ​ಧಿ​ಯಲ್ಲಿ ಕಲ್ಯಾಣ ಮಂಟ​ಗ​ಳು ಮತ್ತು ಬ್ಯಾಂಕ್ವೆಟ್‌ ಹಾಲ್‌​ಗ​ಳಲ್ಲಿ ಮದು​ವೆ​ಗಳಿವೆ ಅವ​ಕಾ​ಶ​ವಿ​ರಲ್ಲ. ಆದರೆ ನೋಂದಾ​ಯಿತ ಮದು​ವೆ​ಗ​ಳಿಗೆ ವಿನಾಯ್ತಿ ನೀಡ​ಲಾ​ಗಿದೆ ಎಂದಿ​ದ್ದಾರೆ.