Asianet Suvarna News Asianet Suvarna News

NDA ಮೈತ್ರಿ ಅಭ್ಯರ್ಥಿ ಗೆಲುವಿನ ಗಿಣಿಶಾಸ್ತ್ರ ಭವಿಷ್ಯ, ಗಿಣಿಯ ಮಾಲೀಕನ ಬಂಧಿಸಿದ ತಮಿಳುನಾಡು ಅರಣ್ಯ ಇಲಾಖೆ!

ತಮಿಳುನಾಡಿನ ಕಡಲೂರು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಯ ಭಾಗವಾಗಿರುವ ಪಿಎಂಕೆಯ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರ  ಭವಿಷ್ಯ ನುಡಿದಿತ್ತು. ಇದರ ಬೆನ್ನಲ್ಲಿಯೇ ತಮಿಳುನಾಡಿನ ಅರಣ್ಯ ಇಲಾಖೆ ಗಿಣಿಯ ಮಾಲೀಕನ ಬಂಧನ ಮಾಡಿದೆ.
 

Parrots Seized After Predicting PMK Win in Cuddalore LS Polls san
Author
First Published Apr 10, 2024, 7:13 PM IST

ನವದೆಹಲಿ (ಏ.10): ತಮಿಳುನಾಡಿನ ಕಡಲೂರಿನಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ ಅಭ್ಯರ್ಥಿ ನಿರ್ದೇಶಕ ತಂಗರಬಚ್ಚನ್  ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರದ ಗಿಣಿ ಇತ್ತೀಚೆಗೆ ಭವಿಷ್ಯ ನುಡಿದಿತ್ತು. ಬುಧವಾರದ ವೇಳೆ ಈ ಗಿಳಿಗಳ ಮಾಲೀಕ ಸೆಲ್ವರಾಜ್‌ ಹಾಗೂ ಆತನ ಸಹೋದರ ಸೀನುವಾಸನ್‌ ಅವರನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ. ಗಿಳಿಯನ್ನು ಅಕ್ರಮವಾಗಿ ಸೆರೆಯಲ್ಲಿಟ್ಟ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಇದರ ಬೆನ್ನಲ್ಲಿಯೆ ಪಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಶೆಡ್ಯೂಲ್ II ಜಾತಿಗಳ ಅಡಿಯಲ್ಲಿ ಗಿಳಿಗಳನ್ನು ವರ್ಗೀಕರಿಸಲಾಗಿದೆ ಮತ್ತು ಪಕ್ಷಿಯನ್ನು ಸೆರೆಯಲ್ಲಿ ಇಡುವುದು ಅಪರಾಧ ಎಂದು ಕಡಲೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜೆ ರಮೇಶ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಇಬ್ಬರಿಗೂ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದು, ನಾಲ್ಕು ಗಿಳಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಡಲೂರಿನಲ್ಲಿ ಎನ್‌ಡಿಎ ಮೈತ್ರಿಯ ಭಾಗವಾಗಿರುವ ಪಿಎಂಕೆಯ ತಂಗರಬಚ್ಚನ್  ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರ  ಭಾನುವಾರ ಭವಿಷ್ಯ ನುಡಿದಿತ್ತು.' ಕಡಲೂರು ಜಿಲ್ಲೆಯ ತೆನ್ನಂಪಕ್ಕಂನಲ್ಲಿರುವ ಆಕುಮುತ್ತು ಅಯ್ಯನಾರ್ ದೇವಸ್ಥಾನದ ಬಳಿ ಕಿಲಿ ಸೋತ್‌ಗೆ ಭೇಟಿ ನೀಡುತ್ತಿದ್ದ ಸೆಲ್ವರಾಜ್‌ನನ್ನು ತಮಿಳುನಾಡು ಸರ್ಕಾರದ ಅರಣ್ಯ ಇಲಾಖೆ ಬಂಧಿಸಿದೆ. ಕಡಲೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ನಿರ್ದೇಶಕ ತಂಗರಬಚ್ಚನ್ ಅವರು ಪಟ್ಟಾಲಿ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗಿಣಿ ಮರಿ ಹೇಳಿದ್ದನ್ನು ಸಹಿಸಲಾಗದೆ ಡಿಎಂಕೆ ಸರ್ಕಾರ ಈ ಸೇಡಿನ ಕ್ರಮ ಕೈಗೊಂಡಿದೆ. ಇದು ಫ್ಯಾಸಿಸಂನ ಪರಮಾವಧಿಯಾಗಿರುವುದರಿಂದ ಈ ಕೃತ್ಯ ಖಂಡನೀಯ' ಎಂದು ಪಿಎಂಕೆ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ.ಅನ್ಬುಮಣಿ ರಾಮದಾಸ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಗಿಣಿಶಾಸ್ತ್ರದವನು ತಂಗರಬಚ್ಚನ್ ಗೆಲ್ಲುತ್ತಾರೆ ಎಂದು ಹೇಳಿದ್ದನ್ನು ಸಹಿಸದ ಡಿಎಂಕೆ ಸರ್ಕಾರ, ಚುನಾವಣಾ ಫಲಿತಾಂಶವನ್ನು ಹೇಗೆ ಸಹಿಸಿಕೊಳ್ಳುತ್ತದೆ? ಡಿಎಂಕೆ ಸರ್ಕಾರ, ತಂಗರಬಚ್ಚನ್‌ಗೆ ಮತ ಹಾಕಿದ್ದಕ್ಕೆ ಕಡಲೂರು ಕ್ಷೇತ್ರದ ಲಕ್ಷಾಂತರ ಜನರನ್ನು ಬಂಧಿಸುತ್ತದೆಯೇ? ಈ ನಡೆಯಿಂದ ಡಿಎಂಕೆಗೆ ಸೋಲಿನ ಭೀತಿ ಎದುರಾಗಿದೆ. ತರ್ಕಬದ್ಧ ಪಕ್ಷ ಎಂದು ಹೇಳಿಕೊಳ್ಳುವ ಡಿಎಂಕೆಗೆ ಸೋಲಿನ ಭವಿಷ್ಯದ ಸುದ್ಧಿಯನ್ನೂ ಸಹಿಸಲಾಗುತ್ತಿಲ್ಲ ಎಂದರೆ ಆ ಪಕ್ಷ ಎಷ್ಟು ಮೌಢ್ಯ ಮತ್ತು ಮೂಢನಂಬಿಕೆಯಲ್ಲಿ ಮುಳುಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಟೀಕೆ ಮಾಡಿದ್ದಾರೆ.

ನಿವೇತಾ ಪೇತುರಾಜ್‌-ಉದಯನಿಧಿ ಸ್ಟ್ಯಾಲಿನ್‌ ಕುರಿತಾಗಿ 'ಬಿಗ್‌; ಗಾಸಿಪ್‌, 'ಇದೆಲ್ಲ ಸುಳ್ಳು..' ಎಂದ ನಟಿ!

“ಗಿಳಿಯನ್ನು ಪಂಜರದಲ್ಲಿ ಸಾಕುವುದು ಅಪರಾಧ ಎಂದು ಸರ್ಕಾರ ಹೇಳಿದೆ ಮತ್ತು ಅದಕ್ಕಾಗಿಯೇ ಸೆಲ್ವರಾಜ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ. ತಮಿಳುನಾಡಿನಾದ್ಯಂತ ಲಕ್ಷಗಟ್ಟಲೆ ಗಿಳಿ ಜ್ಯೋತಿಷಿಗಳು ಅದೃಷ್ಟ ಹೇಳಲು ಗಿಳಿಗಳನ್ನು ಪಂಜರದಲ್ಲಿ ಇಡುತ್ತಾರೆ. ಇದೀಗ ಬಂಧಿತರಾಗಿರುವ ಜ್ಯೋತಿಷಿ ಹಲವು ವರ್ಷಗಳಿಂದ ಇದೇ ಸ್ಥಳದಲ್ಲಿ ಗಿಣಿಶಾಸ್ತ್ರ ಹೇಳುತ್ತಿದ್ದಾರೆ. ಆಗ ಆತನನ್ನು ಬಂಧಿಸಿರಲಿಲ್ಲ. ಎಂಕೆ ಸ್ಟ್ಯಾಲಿನ್‌ ಮುಖ್ಯಮಂತ್ರಿಯಾಗ್ತಾರಾ ಎಂದು ಅವರ ಹೆಂಡತಿ ನೂರಾರು ಗಿಣಿಶಾಸ್ತ್ರದವರಿಂದ ಭವಿಷ್ಯ ಕೇಳಿರಬಹುದು. ಅಂಥ ಯಾರನ್ನೂ ಬಂಧಿಸಿಲ್ಲ. ಆದರೆ, ತಂಗರಬಚ್ಚನ್ ಗೆಲುವು ಸಾಧಿಸುತ್ತದೆ ಎಂದು ಗಿಣಿಶಾಸ್ತ್ರ ಹೇಳಿದ್ದಕ್ಕೆ, ಗಿಣಿಯ ಮಾಲೀಕನನ್ನೇ ಬಂಧನ ಮಾಡಲಾಗಿದೆ.ಇದರ ಹಿಂದಿನ ಕಾರಣ ಸುಲಭವಾಗಿ ಅರ್ಥವಾಗುತ್ತದೆ ಎಂದು ರಾಮದಾಸ್ ಬರೆದಿದ್ದಾರೆ.

ಪ್ರಧಾನಿ ಮೋದಿ 28 ಪೈಸೆ ಪಿಎಂ ಎಂದ ಉದಯನಿಧಿ ಸ್ಟ್ಯಾಲಿನ್‌

'ತಮಿಳುನಾಡಿನ ಕಾಡುಗಳಲ್ಲಿ ಲಕ್ಷಾಂತರ ಮರಗಳು ಮತ್ತು ಸಾವಿರಾರು ಪ್ರಾಣಿಗಳು ನಾಶವಾಗುತ್ತಿವೆ. ಇದನ್ನೆಲ್ಲ ವಿನೋದದಿಂದ ನೋಡುತ್ತಿರುವ ಡಿಎಂಕೆ ಸರ್ಕಾರ ಬಡ ಗಿಣಿಶಾಸ್ತ್ರಜ್ಞನ ಬಂಧಿಸುವ ಮೂಲಕ ತನ್ನ ಶೌರ್ಯ ಮೆರೆದಿದೆ. ಆ ಜ್ಯೋತಿಷಿಯ ಬದುಕಿಗೆ ಮಣ್ಣು ಹಾಕಿದೆ. ಇದಕ್ಕೆ ಕಾರಣರಾದವರಿಗೆ ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios