Asianet Suvarna News Asianet Suvarna News

ಸಂಸತ್‌ ವಿಶೇಷ ಅಧಿವೇಶನ: ಬಿಜೆಪಿ, ಕಾಂಗ್ರೆಸ್‌ ಸಂಸದರಿಗೆ ವಿಪ್ ಜಾರಿ

ಸಂಸತ್‌ ವಿಷೇಷ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ, ತಮ್ಮ ತಮ್ಮ ಪಕ್ಷದ ಸಂಸದರಿಗೆ ವಿಪ್‌ (ಸಚೇತಕಾಜ್ಞೆ) ಜಾರಿ ಮಾಡಿವೆ. ಇದರಿಂದ ಎಲ್ಲ ಸಂಸದರಿಗೆ ಇಡೀ 5 ದಿನದ ಕಲಾಪದಲ್ಲಿ ಹಾಜರಿರುವುದು ಕಡ್ಡಾಯವಾಗಿದೆ.

Parliment special session Congress and the BJP have issued WHIPs to the MPs of their respective parties akb
Author
First Published Sep 15, 2023, 10:06 AM IST

ನವದೆಹಲಿ: ಸಂಸತ್‌ ವಿಷೇಷ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ, ತಮ್ಮ ತಮ್ಮ ಪಕ್ಷದ ಸಂಸದರಿಗೆ ವಿಪ್‌ (ಸಚೇತಕಾಜ್ಞೆ) ಜಾರಿ ಮಾಡಿವೆ. ಇದರಿಂದ ಎಲ್ಲ ಸಂಸದರಿಗೆ ಇಡೀ 5 ದಿನದ ಕಲಾಪದಲ್ಲಿ ಹಾಜರಿರುವುದು ಕಡ್ಡಾಯವಾಗಿದೆ. 75 ವರ್ಷದ ಸಂಸತ್‌ ಇತಿಹಾಸದ ಚರ್ಚೆ, ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕ ಸೇರಿ 4 ಮಸೂದೆಗಳು ಮಂಡನೆ ಆಗಲಿರುವ ಕಾರಣ ಅಧಿವೇಶನ ಮಹತ್ವದ್ದಾಗಿದೆ. ಹೀಗಾಗಿ ಎಲ್ಲ ಸಂಸದರಿಗೂ ಕಡ್ಡಾಯ ಹಾಜರಿಗೆ ಸೂಚಿಸಲಾಗಿದೆ. ಸೆ.18ರಿಂದ ಸೆ.22ರವರೆಗೆ ವಿಶೇಷ ಅಧಿವೇಶನ ನಡೆಯಲಿದ್ದು, ಕುತೂಹಲ ಕೆರಳಿಸಿದೆ.

75 ವರ್ಷಗಳ ಸಂಸದೀಯ ಇತಿಹಾಸ ಚರ್ಚೆ

ನವದೆಹಲಿ: ಸೆ.18ರಿಂದ 5 ದಿನಗಳ ಕರೆಯಲಾಗಿರುವ ಸಂಸತ್ತಿನ ಉಭಯ ಸದನಗಳ ಅಧಿವೇಶನದ ಅಜೆಂಡಾವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಇದು ಭಾರಿ ಕುತೂಹಲವನ್ನು ಮೂಡಿಸಿದೆ. ಈ ಅಧಿವೇಶನದಲ್ಲಿ ಚರ್ಚೆಯಾಗಬಹುದು ಎಂದು ಅಂದಾಜಿಸಲಾಗಿದ್ದ ವಿಷಯಗಳನ್ನು ಹೊರತುಪಡಿಸಿ ಹೊಸ ವಿಷಯಗಳನ್ನು ಕೇಂದ್ರ ಸರ್ಕಾರ (central government) ಪ್ರಸ್ತಾಪಿಸಿದೆ.

ಇನ್ಮುಂದೆ ಸುಪ್ರೀಂ ಕೇಸುಗಳ ಮಾಹಿತಿಯೂ ಕ್ಷಣದಲ್ಲೇ ವೆಬ್‌ಸೈಟ್‌ನಲ್ಲಿ ಲಭ್ಯ

ಸಂಸತ್ತಿನ 75 ವರ್ಷಗಳ ಇತಿಹಾಸದ ಬಗ್ಗೆ ಮೊದಲ ದಿನದ ಕಲಾಪದಲ್ಲಿ ಚರ್ಚಿಸಲಾಗುತ್ತದೆ. ಜೊತೆಗೆ 3 ಮಸೂದೆಗಳನ್ನು ಮಂಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಕ್ಕೆ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಓರ್ವ ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿ ರಚನೆಯ ಮಸೂದೆ, ವಕೀಲರ ತಿದ್ದುಪಡಿ ಮಸೂದೆ 2023 ಮತ್ತು ಪೋಸ್ಟ್‌ ಆಫೀಸ್‌ ಮಸೂದೆ 2023ನ್ನು ಮಂಡಿಸಲಾಗುವುದು ಎಂದು ತಿಳಿಸಲಾಗಿದೆ. ಈ 3 ಮಸೂದೆಗಳನ್ನು ಈಗಾಗಲೇ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ವಕೀಲರ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಈಗಾಗಲೇ ಒಪ್ಪಿಗೆ ಸೂಚಿಸಿದೆ.

ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ, ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸುವುದು, ಅವಧಿಪೂರ್ವ ಚುನಾವಣೆ ಘೋಷಿಸಿ ಸಂಸತ್ತನ್ನು ವಿಸರ್ಜಿಸುವುದು.. ಇತ್ಯಾದಿ ಮಹತ್ವದ ವಿಚಾರಗಳು ಸರ್ಕಾರದ ಅಜೆಂಡಾದಲ್ಲಿ ಇವೆ ಎನ್ನಲಾಗಿತ್ತಾದರೂ ಅದಾವ್ಯುದೂ ಅಧಿಕೃತ ಕಾರ್ಯಸೂಚಿಯಲ್ಲಿ ಇಲ್ಲ.

ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕೆ.ಕವಿತಾಗೆ ಇ.ಡಿ.ಸಮನ್ಸ್‌

ಮರಾಠಾ ಮೀಸಲು ಹೋರಾಟಗಾರ ಮನೋಜ್‌ 17 ದಿನದ ಉಪವಾಸ ಅಂತ್ಯ

ಜಾಲ್ನಾ(ಮಹಾರಾಷ್ಟ್ರ): ಮರಾಠ ಮೀಸಲು ಕೋರಿ 17 ದಿನಗಳಿಂದ ಉಪವಾಸ ನಡೆಯುತ್ತಿದ್ದ ಸಾಮಾಜಿಕ ಹೋರಾಟಗಾರ ಮನೋಜ್‌ ಜರಂಗೆ (Social activist Manoj Jarange), ಸತ್ಯಾಗ್ರಹ ನಿಲ್ಲಿಸಿದ್ದಾರೆ. ಗುರುವಾರ ಇಲ್ಲಿನ ಅಂತರ್ವಾಲಿ ಸಾರಥಿ ಗ್ರಾಮದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ (Chief Minister Eknath Shinde) ಹಾಗೂ ಸಚಿವರು ಭೇಟಿ ನೀಡಿದರು. ಈ ವೇಳೆ ಮರಾಠರಿಗೆ ಮೀಸಲು ನೀಡುವುದಕ್ಕೆ ಬದ್ಧವಾಗಿರುವುದಾಗಿ ತಿಳಿಸಿದರು. ಬಳಿಕ ಮನೋಜ್‌ರನ್ನು ಕೊಂಡಾಡಿದ ಶಿಂಧೆ, ‘ಮನೋಜ್‌ ಅವರು ತಮ್ಮ ವೈಯಕ್ತಿಕವಲ್ಲದೇ ಸಮಾಜಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಕಾರಣ ಅವರಿಗೆ ಇಷ್ಟು ಜನ ಬೆಂಬಲ ದೊರೆತಿದೆ. ಈ ಹಿಂದೆಯೂ ಮೀಸಲು ನೀಡಲಾಗಿತ್ತು. ಆದರೆ ಸುಪ್ರೀಂ ಕೋರ್ಟಿನಲ್ಲಿ ಅದು ಸಾಧ್ಯವಾಗಲಿಲ್ಲ’ ಎಂದು ಶಿಂಧೆ ಹೇಳಿದರು.

ಶಾಲೆಗೆ ತೆರಳುತ್ತಿದ್ದ ವೇಳೆ ದೋಣಿ ಮಗುಚಿ 10 ಮಕ್ಕಳು ನಾಪತ್ತೆ

ಮುಜಪ್ಫರ್‌ಪುರ (ಜಿಹಾರ): ಇಲ್ಲಿನ ಬಾಗಮತಿ (Bagmati River) ನದಿ ದಾಟುತ್ತಿದ್ದ 30 ಶಾಲಾ ವಿದ್ಯಾರ್ಥಿಗಳು ಇದ್ದ ದೋಣಿ ಮಗುಚಿದ್ದು, 10 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. 20 ಮಕ್ಕಳನ್ನು ರಕ್ಷಿಸಲಾಗಿದೆ. ಗುರುವಾರ ಬೆಳಗ್ಗೆ 10:30ರಿಂದ 11 ಗಂಟೆ ವೇಳೆಗೆ ಮಧುಪುರ ಪಟ್ಟಿ ಘಾಟ್‌ನಲ್ಲಿ 30 ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ದೋಣಿ ಏಕಾಏಕಿ ಮಗುಚಿ ಈ ದುರ್ಘಟನೆ ಸಂಭವಿಸಿದೆ.ಇದರ ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪ್ಪತ್ತು (National Disaster Management Force) ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಮಾಡುತ್ತಿದೆ. ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.

Follow Us:
Download App:
  • android
  • ios