Asianet Suvarna News Asianet Suvarna News

ಸಂಸತ್ ಚುನಾವಣೆ: 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ನೇರ ಸ್ಪರ್ಧೆ

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಂದಾಗಲು ನಿರ್ಧರಿಸಿರುವ ವಿಪಕ್ಷಗಳು, ಕನಿಷ್ಠ 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ರೂಪಿಸಿವೆ.

Parliment election 2023 Oppositions big plan to Direct contest aganist BJP in 450 Lok Sabha constituencies akb
Author
First Published Jun 22, 2023, 8:31 AM IST

ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಂದಾಗಲು ನಿರ್ಧರಿಸಿರುವ ವಿಪಕ್ಷಗಳು, ಕನಿಷ್ಠ 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ರೂಪಿಸಿವೆ. ಲೋಕಸಭಾ ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್‌ ಕುಮಾರ್‌ ಜೂ.23ರ ಶುಕ್ರವಾರ ಪಟನಾದಲ್ಲಿ ವಿಪಕ್ಷಗಳ ಬೃಹತ್‌ ಸಭೆ ಹಮ್ಮಿಕೊಂಡಿದ್ದಾರೆ. ಈ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ನಿರ್ಧರಿಸಲಾಗಿದ್ದು, ಈ ಪೈಕಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ವಿಷಯ ಪ್ರಮುಖ ಚರ್ಚೆಯ ವಿಷಯವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ನೇರಾ ನೇರ ಹಣಾಹಣಿ ಬಗ್ಗೆ ಈಗಾಗಲೇ ನಿತೀಶ್‌ ಕುಮಾರ್‌ (nithish Kumar) ಮತ್ತು ಆರ್‌ಜೆಡಿ ಮುಖಂಡ (RJD Leader) ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದು ಸದ್ಯಕ್ಕೆ ವಿಪಕ್ಷಗಳನ್ನು ಒಗ್ಗೂಡಿಸಲು ಇರುವ ಏಕೈಕ ಮಾರ್ಗ. ಪಂಜಾಬ್‌ (Punjab), ಕೇರಳ, ಬಂಗಾಳ ಹೊರತುಪಡಿಸಿ ಉಳಿದೆಲ್ಲೆಡೆ ಈ ಸೂತ್ರ ವಿಪಕ್ಷಗಳಿಗೆ ಹೊಂದಾಣಿಕೆಯಾಗುತ್ತದೆ. ಇದನ್ನು ಮಮತಾ ಬ್ಯಾನರ್ಜಿ, ಅಖಿಲೇಶ್‌ ಯಾದವ್‌ ಕೂಡಾ ಒಪ್ಪಿದ್ದಾರೆ. ಆದರೆ ಹಲವು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್‌ ಜೊತೆಗೆ ಈ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳುವುದು ನಮ್ಮ ಮುಂದಿನ ಸವಾಲು ಎಂದು ಜೆಡಿಯು, ಆರ್‌ಜೆಡಿ ನಾಯಕರು ಹೇಳಿದ್ದಾರೆ. ಈ ವಿಷಯದ ಜೊತೆಗೆ ಜಾತಿ ಗಣತಿ, ಕೇಂದ್ರದ ತನಿಖಾ ಸಂಸ್ಥೆಗಳ ದುರುದ್ದೇಶದ ದಾಳಿ, ಹಿಂದೂ-ಮುಸ್ಲಿಂ ಮತ ಧ್ರುವೀಕರಣದ ಯತ್ನ ವಿಷಯದಲ್ಲೂ ಒಮ್ಮತ ಮೂಡಿಸಲು ಶುಕ್ರವಾರದ ಸಭೆಯನ್ನು ಬಳಸಿಕೊಳ್ಳಲು ವಿವಿಧ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ.

ಅಕ್ಕಿಗೆ ಕೇಂದ್ರದ ಡರ್ಟಿ ಪಾಲಿಟಿಕ್ಸ್‌: ಸಿಎಂ ಸಿದ್ದರಾಮಯ್ಯ 

ಅಕ್ಕಿ ಘೋಷಣೆ ಮಾಡುವಾಗ ಜ್ಞಾನ ಇರಲಿಲ್ವೇ? ಕಾಂಗ್ರೆಸ್ ಉಚಿತ ಗ್ಯಾರೆಂಟಿ ವಿರುದ್ಧ ಹೆಚ್‌ಡಿಕೆ ಗರಂ!

Follow Us:
Download App:
  • android
  • ios