Asianet Suvarna News Asianet Suvarna News

ಇಂದಿನಿಂದ ಚಳಿಗಾಲ ಸಂಸತ್‌ ಅಧಿವೇಶನ: ಮಿನಿ ಸಮರ ಗೆದ್ದ ಹುಮ್ಮಸ್ಸಿನೊಂದಿಗೆ ಬಿಜೆಪಿ ಆಗಮನ

ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಡುವಣ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇಂದು  ಚಾಲನೆ ಸಿಗಲಿದೆ.

Parliament Winter session from today BJP arrives with full confidence after winning in Three state Assembly election akb
Author
First Published Dec 4, 2023, 5:53 AM IST

ಪಿಟಿಐ ನವದೆಹಲಿ: ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಡುವಣ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇಂದು  ಚಾಲನೆ ಸಿಗಲಿದೆ. ಪ್ರಮುಖ ರಾಜ್ಯಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಹೊಸ ಹುಮ್ಮಸ್ಸಿನಲ್ಲಿ ಸಂಸತ್‌ನಲ್ಲಿ ತನಗೆ ಬೇಕಾದ ಮಸೂದೆಗಳನ್ನು ಮಂಡಿಸಲು ಸಜ್ಜಾಗಿ ನಿಂತಿದ್ದರೆ, ಮತ್ತೊಂದೆಡೆ ವಿಪಕ್ಷದ ಇಂಡಿಯಾ ಮೈತ್ರಿಕೂಟಕ್ಕೆ ವಿಧಾನಸಭಾ ಚುನಾವಣಾ ಸೋಲು ಮಂಕು ಬಡಿದಂತಾಗಿದೆ. ಇದರಿಂದ ಬಿಜೆಪಿಯನ್ನು ಕಟ್ಟಿಹಾಕುವ ಯೋಜನೆಗೆ ಹಿನ್ನಡೆ ಉಂಟಾದಂತಾಗಿದೆ. ಡಿ.4ರಿಂದ ಡಿ.22ರವರೆಗೆ ಅಧಿವೇಶನ ನಡೆಯಲಿದ್ದು, 15 ದಿನದ ಕಲಾಪ ಇರಲಿದೆ. ಈ ಅವಧಿಯಲ್ಲಿ 19 ಮಸೂದೆಗಳು ಹಾಗೂ 2 ಹಣಕಾಸು ವಿಷಯಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (central Govt) ಶನಿವಾರ ವಿಪಕ್ಷಗಳ ನಾಯಕರ ಸಭೆ ಕರೆದಿತ್ತು. ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ಪೀಯೂಶ್‌ ಗೋಯಲ್‌, ಅನೇಕ ವಿಪಕ್ಷ ನಾಯಕರು ಪಾಲ್ಗೊಂಡು ಎಲ್ಲ ಮಸೂದೆಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜೋಶಿ (Pralhad Joshi), ಎಲ್ಲ ವಿಷಯಗಳ ಚರ್ಚೆಗೆ ಅವಕಾಶ ನೀಡಲಾಗುವುದು. ಆದರೆ ಕಲಾಪವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಹೊಣೆ ವಿಪಕ್ಷಗಳದ್ದು ಎಂದು ತಿಳಿಸಿದ್ದರು. ಹೊಸ ಸಂಸತ್‌ ಭವನದಲ್ಲಿ ನಡೆಯುತ್ತಿರುವ ಪ್ರಪ್ರಥಮ ಪೂರ್ಣ ಪ್ರಮಾಣದ ಅಧಿವೇಶನ ಇದಾಗಿದೆ.

ಹೊಸ ಸಂಸತ್ ಭವನದಲ್ಲಿ ಮೋದಿ ಮೊದಲ ಭಾಷಣ, ಮಹಿಳಾ ಮೀಸಲಾತಿ ಬಿಲ್ ತರಲು ಬದ್ಧ!

 ಡಿ.6ಕ್ಕೆ ದೆಹಲಿಯಲ್ಲಿ ಇಂಡಿಯಾ ಕೂಟದ ಸಭೆ:  ಪಂಚರಾಜ್ಯ ಚುನಾವಣೆ ಸೋಲಿನ ಬಗ್ಗೆ ಪರಾಮರ್ಶೆ

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಮುಂಬರುವ ಲೋಕಸಭಾ ಚುನಾವಣೆಗೆ (Prlimentary Election) ಕಾರ್ಯತಂತ್ರ ರೂಪಿಸಲು ಡಿ.6ರ ಬುಧವಾರದಂದು 'ಇಂಡಿಯಾ' ಮೈತ್ರಿಕೂಟದ ನಾಯಕರು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಂಜೆ ಸಭೆ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ರಣತಂತ್ರ ರೂಪಿಸಲು ಇಂಡಿಯಾ ಕೂಟವು ಪಂಚ ರಾಜ್ಯ ಚುನಾವಣೆಗಳ ಫಲಿತಾಂಶಕ್ಕಾಗಿ ಕಾಯುತ್ತಿತ್ತು. ಆದರೆ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್‌ ಹಾಗೂ ಇಂಡಿಯಾ ಕೂಟ ಸೋತಿದೆ. ಇದೀಗ ಈ ಸಭೆಯಲ್ಲಿ ಅದು ತನ್ನ ಕಾರ್ಯತಂತ್ರದ ಯೋಜನೆಗಳನ್ನು ಕೆಲ ಮಟ್ಟಿಗೆ ಬದಲಾಯಿಸಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷ ಯಾವುದೇ ಇರಬಹುದು, ನಾವೆಲ್ಲ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ, ಖರ್ಗೆ!

ಈ ಹಿಂದೆ ಪಟನಾ, ಬೆಂಗಳೂರು ಮತ್ತು ಮುಂಬೈಗಳಲ್ಲಿ ಇಂಡಿಯಾ ಕೂಟದ 26 ಪಕ್ಷಗಳ ನಾಯಕರ ಸಭೆ ನಡೆದಿವೆ. ಇನ್ನು ವಿಧಾನಸಭೆ ಚುನಾವಣೆಯ ಹಿನ್ನೆಲೆ ನಿಲ್ಲಿಸಲಾಗಿದ್ದ ಜಂಟಿ ರ್‍ಯಾಲಿಗಳನ್ನು ಈಗ ಯೋಜಿಸಲಾಗುವುದು ಹಾಗೂ ಪ್ರಾದೇಶಿಕ ಸೀಟು ಹಂಚಿಕೆಯ ಮಾತುಕತೆ ಕೂಡ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios