ಪಕ್ಷ ಯಾವುದೇ ಇರಬಹುದು, ನಾವೆಲ್ಲ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ, ಖರ್ಗೆ!

ಈ ಸೆಂಟ್ರಲ್ ಹಾಲ್ ಹಲವು ಐತಿಹಾಸಿಕ ಭಾಷಣಗಳಿಗೆ ಸಾಕ್ಷಿಯಾಗಿದೆ. ಪ್ರಧಾನಿ ಜವಾಹರ್ ಲಾಲ್ ನೆಹರೂ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮಾಡಿದ ಭಾಷಣವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಮೋದಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ. ಹಳೇ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ

Mallikarjun kharge address at central hall ahead of first session of new Parliament ckm

ನವದೆಹಲಿ(ಸೆ.19) ಇದೇ ಸೆಂಟ್ರಲ್ ಹಾಲ್‌ನಲ್ಲಿ ಸ್ವಾತಂತ್ರ್ಯ ಸಿಕ್ಕ ದಿನ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮಾಡಿದ ಭಾಷಣವನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ನೆಹರೂ ಮಾತನ್ನು ಉಲ್ಲೇಖಿಸಿದ ಪ್ರದಾನಿ ನರೇಂದ್ರ ಮೋದಿಗೆ ಧನ್ಯವಾದ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಹೊಸ ಸಂಸತ್ ಭವನದಲ್ಲಿನ ಮೊದಲ ಅಧಿವೇಶನಕ್ಕೂ ಮೊದಲು ಹಳೇ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ದೇಶದ ಅಭಿವೃದ್ಧಿಗೆ ನಾವೆಲ್ಲ ಒಗ್ಗಟ್ಟಾಗಿ ಶ್ರಮಿಸೋಣ ಎಂದಿದ್ದಾರೆ.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಜವಾಹರ್ ಲಾಲ್ ನೆಹರೂ 1947ರ ಆಗಸ್ಟ್ 15 ರಂದು ಮಾಡಿದ ಭಾಷಣದ ಕೆಲ ಬಾಗವನ್ನು ಉಲ್ಲೇಖಿಸಿದ್ದಾರೆ. ಈ ಸಂಸತ್ ಭವನದ ಪ್ರತಿ ಮೂಲೆ ಮೂಲೆ ಭಾರತದ ಅಭಿವೃದ್ಧಿಗೆ, ನವ ಭಾರತಕ್ಕೆ ಸಾಕ್ಷಿಯಾಗಿದೆ. ಸಂಸತ್ತಿನ ಕರ್ತವ್ಯವನ್ನು ನಾವು ಹೊಸ ಸಂಸತ್ ಭವನದಲ್ಲಿ ಮುಂದುವರಿಸುತ್ತೇವೆ. ಆದರೆ ಹಳೇ ಸಂಸತ್ ಭವನವನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಹೆಸರು ಸೂಚಿಸಿದ ಮೋದಿ, ವಿಪಕ್ಷಗಳ ಅನುಮತಿ ಕೋರಿದ ಪ್ರಧಾನಿ!

ಸಂಸತ್ ಸದಸ್ಯರಾದ ನಾವು ಎಲ್ಲಾ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿರ್ವಹಿಸಬೇಕು. ನಮ್ಮ ನಡುವೆ ಯಾವುದೇ ಪಕ್ಷ ಇರಬಬಹುದು. ಆದರೆ ನಾವು ಸರಿಯಾದ ದಿಕ್ಕಿನಲ್ಲಿ ಕರ್ತವ್ಯ ನಿಭಾಯಸಿಬೇಕು. ಒಗ್ಗಟ್ಟಾಗಿ ಭಾರತದ ಅಭಿವೃದ್ಧಿಗೆ ಶ್ರಮಿಸೋಣ. ನಾವೆಲ್ಲ ಒಂದಾಗಿ ನಮ್ಮ ಸಂವಿಧಾನವನ್ನು ರಕ್ಷಿಸಬೇಕು, ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಖರ್ಗೆ ಹೇಳಿದ್ದಾರೆ. 

ಖರ್ಗೆ ಭಾಷಣಕ್ಕೂ ಮೊದಲು ಲೋಕಸಭಾ ಸ್ಪೀಕರ್ ಒಂ ಬಿರ್ಲಾ, ಲೋಕಸಭಾ ವಿಪಕ್ಷ ನಾಯಕ ಅಧಿರಂಜನ್ ಚೌಧರಿ, ಲೋಕಸಭೆಯ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ ಮಾಡಿದ್ದಾರೆ. ಈ ವೇಳೆ ಸಂಸತ್ ಭವನದ ಹಲವು ಐತಿಹಾಸಿಕ ಕ್ಷಣಗಳನ್ನು ಮೆಲಕು ಹಾಕಿದ್ದಾರೆ. 

ಕಾರ್ಯಕ್ರಮದ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ಸ್ವಾತಂತ್ರ್ಯ ಭಾರತದಲ್ಲಿ ಸಂಸತ್ ಭವನ ನಿರ್ವಹಿಸಿದ ಪಾತ್ರವನ್ನು ಮೆಲಕು ಹಾಕಿದ್ದಾರೆ. ಜಿ20 ಶೃಂಗಸಭೆ ಆಯೋಜನೆ, ಆತ್ಮನಿರ್ಭರತೆ ಭಾರತ, ಐತಿಹಾಸಿಕ ಮಸೂದೆಗಳ ಮಂಡನೆ, ಕಾನೂನುಗಳ ಪಾಸ್ ಮಾಡಿದ ಕ್ಷಣಗಳನ್ನು ಹೇಳಿದ್ದಾರೆ. ಜಮ್ಮ ಮತ್ತು ಕಾಶ್ಮೀರದ ಆರ್ಟಿಕಲ್ 370, ತ್ರಿವಳಿ ತಲಾಖ್ ಸೇರಿದಂತೆ ಹಲವು ಮಸೂದೆಗಳ ಕುರಿತು ಮಾತನಾಡಿದ್ದಾರೆ. 

ಹೊಸ ಸಂಸತ್ ಭವನದ ಮೊದಲ ಅಧಿವೇಶನಕ್ಕೂ ಮೊದಲು ಲೋಕಸಭಾ ಹಿರಿಯ ಸದಸ್ಯೆ ಮೇನಕಾ ಗಾಂಧಿ ಭಾಷಣ!

Latest Videos
Follow Us:
Download App:
  • android
  • ios