ಪಾಟ್ನಾ(ಮೇ.11): ಕೊರೋನಾ ಅಬ್ಬರಿಸುತ್ತಿದ್ದರೂ ಅನೇಕ ಮಂದಿ ಇಂದಿಗೂ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಲಾಕ್‌ಡೌನ್ ಹೇರಿದ್ದರೂ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಅಡ್ಡಾಡಿಕೊಂಡಿರುತ್ತಾರೆ. ಹೀಗಿರುವಾಗ ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಡಿ ಮಾಜಿ ಸಂಸದ ಹಾಗೂ ಜನ್‌ ಅಧಿಕಾರಿ ಪಾರ್ಟಿಯ ಮುಖ್ಯಸ್ಥ ಪಪ್ಪೂ ಯಾದವ್ ಅರೆಸ್ಟ್‌ ಆಗಿದ್ದಾರೆ. 

ಮಂಗಳವಾರ ಬೆಳಗ್ಗೆ ಪಪ್ಪೂ ಯಾದವ್‌ರವರ ಪಾಟ್ನಾದಲ್ಲಿರುವ ಮನೆಯಲ್ಲಿ ಟೌನ್‌ ಡಿಎಸ್‌ಪಿ ನೇತೃತ್ವದಲ್ಲಿ ಪೊಲೀಸರ ಒಂದು ತಂಡ ತಲುಪಿತ್ತು. ಬಳಿಕ ಪಪ್ಪೂರನ್ನು ಅರೆಸ್ಟ್ ಮಾಡಲಾಗಿದೆ. ಅವರ ವಿರುದ್ಧ ಬಿಹಾರದಲ್ಲಿ ಲಾಕ್‌ಡೌನ್ ಉಲ್ಲಂಘಿಸಿರುವ ಆರೋಪವಿದೆ. 

ಗಂಗೆಯಲ್ಲಿ ಹರಿದು ಬಂತು ಶವಗಳ ರಾಶಿ, ನಮ್ಮದಲ್ಲ ಉ. ಪ್ರದೇಶದ್ದೆಂದ ಬಿಹಾರ!

ಆರಂಭದಲ್ಲಿ ಪಪ್ಪೂರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅವರನ್ನು ಪಾಟ್ನಾದ ಬುದ್ಧ ಕಾಲೋನಿಯ ಠಾಣೆಗೆ ಕರೆದೊಯ್ದಿದ್ದರು. ಬಳಿಕ ಅರೆಸ್ಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಅವರ ವಿರುದ್ಧ ಸರ್ಕಾರಿ ಕೆಲಸಕ್ಕೆ ತೊಡಕುಂಟು ಮಾಡಿದ ಹಾಗೂ ಲಾಕ್‌ಡೌನ್ ಉಲ್ಲಂಘಿಸಿದ ಆರೋಪವಿದೆ. ಇದರೊಂದಿಗೆ ಮೇಧಾಪಪುರಕ್ಕೆ ಸಂಬಂಧಿಸಿದ ಕೆಲ ಆರೋಪಗಳೂ ಇವೆ.

ಪೊಲೀಸರು ಪಪ್ಪೂ ಯಾದವ್ ಬಳಿ ಪಾಸ್‌ ಮಾಡಿಸಿ ತಿರುಗಾಡಿ ಎಂದು ಮನವಿ ಮಾಡಿದ್ದರು. ಆದರೆ ಪೊಲೀಸರ ಮಾತು ಕೇಳದ ಅವರು ಪದೇ ಪದೇ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದರು. ಬುದ್ಧ ಕಾಲೋನಿಯ ಠಾಣೆಯ ಪೊಲಿಸರು ಅವರನ್ನು ಪೀರ್‌ಬಹೋರ್‌ ಪೊಲೀಸರಿಗೆ ಹಸ್ತಾಂತರಿಸಿದ್ದು, ಇಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಪಿಎಂಸಿಎಚ್ ತಲುಪಿದ್ದ ಮಾಜಿ ಸಂಸದ

ಮಂಗಳವಾರ ಬೆಳಗ್ಗೆ ಪಪ್ಪೂ ಯಾದವ್ ಪಾಟ್ನಾದ ಪಿಎಂಸಿಎಚ್‌ನ ಕೋವಿಡ್‌ ವಾರ್ಡ್‌ ತಲುಪಿ, ಪರಿಸ್ಥಿತಿಯ ಲಾಭ ಪಡೆದುಕೊಳ್ಳಲಾರಂಭಿಸಿದ್ದರು. ಮಾಧ್ಯಮ ಪ್ರತಿನಿಧಿಗಳಿಗೂ ಈ ಬಗ್ಗೆ ಹೇಳಿಕೆ ನೀಡಿದ್ದರೆನ್ನಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona