Asianet Suvarna News Asianet Suvarna News

ಪಾಕಿಸ್ತಾನದ ಹೊಸ ವರಸೆ, ಹಳೆ ಕ್ಯಾಸೆಟ್ ಮತ್ತೆ ಹಾಕಿ ಭಾರತಕ್ಕೆ ಬೆದರಿಕೆ!

  • ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) 2019ರಲ್ಲಿ ರದ್ದು
  • ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಮೋದಿ ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಪಾಕ್
  • ಭಾರತ ಸರ್ಕಾರ ನಿರ್ಧಾರ ಬದಲಿಸುವ ವರೆಗೆ ಮಾತುಕತೆ ಇಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್
Pakistan Will not hold talks with India Until central govt restore article 370 says Imran Khan ckm
Author
Bengaluru, First Published May 12, 2021, 7:17 PM IST

ಇಸ್ಲಾಮಾಬಾದ್(ಮೇ.12):  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ಕೇಂದ್ರದ ನಿರ್ಧಾರವನ್ನು ಕಾಶ್ಮೀರ ಜನತೆ ಸ್ವಾಗತಿಸಿದ್ದಾರೆ. ಇದೀಗ ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶನ್ನಾಗಿ ಬದಲಾಯಿಸಿ  2 ವರ್ಷಗಳೇ ಉರುಳಿದೆ. ಆದರೆ ನೆರೆ ರಾಷ್ಟ್ರ ಪಾಕಿಸ್ತಾನ ಈಗಲೂ ಕಿಡಿ ಕಾರುತ್ತಲೇ ಇದೆ. ಇದೀಗ ಮತ್ತೊಮ್ಮೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರು ಕಲ್ಪಿಸುವ ವರೆಗೆ ಭಾರತದ ಜೊತೆ ಮಾತುಕತೆ ಸಾಧ್ಯವಿಲ್ಲ ಎಂದಿದೆ.

'ಕಾಶ್ಮೀರದಲ್ಲಿ 17 ತಿಂಗಳಲ್ಲಿ ಏನಾಗಿದೆ ಕೇಳುವ ಕಾಂಗ್ರೆಸ್, 70 ವರ್ಷದಲ್ಲಿ ಏನು ಮಾಡಿದ್ದೀರಿ ಹೇಳಿ'?

ಜಮ್ಮ ಮತ್ತು ಕಾಶ್ಮೀರ ಕೇವಲ ಭಾರತದ ಭಾಗವಲ್ಲ. ಭಾರತದ ಮಾತ್ರ ಸಮಸ್ಯೆ ಅಲ್ಲ. ವಿಶ್ವಸಂಸ್ಥೆ ಕಾರ್ಯಸೂಚಿಯಲ್ಲಿರುವಂತೆ ಭದ್ರತಾ ಮಂಡಳಿ ನಿರ್ಣಯಗಳಿವೆ. ಏಕಾಏಕಿ ಭಾರತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಲು ಅಥವಾ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಕಾಶ್ಮೀರಕ್ಕೆ ವಿಶೇಷ ಸ್ಥಾನ ಮರು ಕಲ್ಪಿಸಿದರೆ ಮಾತ್ರ ಭಾರತದ ಜೊತೆ ಮಾತುಕತೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

71 ವರ್ಷದಲ್ಲಿ ಸಿಗದೇ ಇದ್ದದ್ದು, ಕಳೆದೊಂದು ವರ್ಷದಲ್ಲಿ ಸಿಕ್ಕಿದೆ; ಲಡಾಖ್ ಸಂಸದ ಜಮ್ಯಾಂಗ್!

ಪಾಕ್ ಪ್ರಧಾನಿ ಹೇಳಿಕೆಗೂ ಮೊದಲು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಇದೇ ಮಾತನ್ನು ಆಡಿದ್ದರು. ಕಾಶ್ಮೀರ ಜನತೆಯ ಸ್ವಾತಂತ್ರ್ಯ ಕಿತ್ತುಕೊಂಡ ಭಾರತ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಒತ್ತಡ ಹಾಕಿ ಕಾಶ್ಮೀರ ಜನತೆಗೆ ಸ್ವಾತಂತ್ರ್ಯ ಒದಗಿಸುವ ವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.

ಆರ್ಟಿಕಲ್ 370:
2019ರ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿತ್ತು. ಇನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದೆ. ಈ ಐತಿಹಾಸಿಕ ನಿರ್ಧಾರಕ್ಕೆ ಇಡೀ ದೇಶವೆ ಸಮ್ಮತಿ ನೀಡಿತ್ತು. ಆದರೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. 

Follow Us:
Download App:
  • android
  • ios