ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಭಾರೀ ದೊಡ್ಡ ನಿಧಿಯೊಂದು ಸಿಕ್ಕಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಂಧೂ ನದಿಯ ಪಾತ್ರದಲ್ಲಿ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದರ ಮೌಲ್ಯ 80000 ಕೋಟಿ ರು. ಇರಬಹುದು ಎಂದು ಸರ್ಕಾರ ಅಂದಾಜಿಸಿದೆ.
ಇಸ್ಲಾಮಾಬಾದ್ (ಮಾ.5): ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಭಾರೀ ದೊಡ್ಡ ನಿಧಿಯೊಂದು ಸಿಕ್ಕಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಂಧೂ ನದಿಯ ಪಾತ್ರದಲ್ಲಿ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದರ ಮೌಲ್ಯ 80000 ಕೋಟಿ ರು. ಇರಬಹುದು ಎಂದು ಸರ್ಕಾರ ಅಂದಾಜಿಸಿದೆ.
ಚಿನ್ನದ ನಿಕ್ಷೇಪದ ಇರುವ ಕುರಿತು ಕಳೆದ ತಿಂಗಳೇ ಮಾಹಿತಿ ಇತ್ತಾದರೂ, ಆ ಮಾಹಿತಿಯನ್ನು ಇದೀಗ ಸರ್ಕಾರ ಖಚಿತಪಡಿಸಿದ್ದು, ಗಣಿಗಾರಿಕೆಗೆ ಹರಾಜು ಶುರು ಮಾಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
ಪಾಕಿಸ್ತಾನದ ಪಂಜಾಬ್‌ನ ಅಟೋಕ್ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದನ್ನು ಗಣಿಗಾರಿಕೆ ಮತ್ತು ಹರಾಜು ಹಾಕಲು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಚಿನ್ನದ ನಿರ್ವಹಣೆಯ ಹೊಣೆ ಹೊತ್ತಿರುವ ಪಾಕಿಸ್ತಾನದ ರಾಷ್ಟ್ರೀಯ ಎಂಜಿನಿಯರಿಂಗ್ ಸರ್ವೀಸಸ್ (ನೆಸ್‌ಪಾಕ್)ನ ನಿರ್ದೇಶಕ ಝರ್ಗಾಂ ಇಶಾಕ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಪಂಚದಲ್ಲೇ ಅತಿ ದೊಡ್ಡ ಚಿನ್ನದ ಗಣಿ: ಈ ದೇಶದಲ್ಲಿ ತೋಡಿದಷ್ಟು ಬಂಗಾರ!
ಈ ಚಿನ್ನವು ನಿಕ್ಷೇಪವು ಭಾರತದ ಹಿಮಾಲಯದ ತಪ್ಪಲಿನ ಸಿಂಧೂ ನದಿ ಮೂಲಕ ಪಾಕಿಸ್ತಾನಕ್ಕೆ ಹರಿದುಬಂದಿವೆ. ಸಾಮಾನ್ಯವಾಗಿ ದೊಡ್ಡ ಗಟ್ಟಿಯ ರೂಪದಲ್ಲಿರುವ ಚಿನ್ನವು, ನದಿಯಲ್ಲಿ ಸಾವಿರಾರು ಕಿ.ಮೀ ದೂರ ಹರಿದು ಬರುವ ವೇಳೆ ತನ್ನ ಆಕಾರವನ್ನು ಬದಲಾಯಿಸಿ, ಸಣ್ಣ ಸಣ್ಣ ಹರಳು ಅಥವಾ ಮರಳಿನ ರೂಪದಲ್ಲಿ ಪಾಕಿಸ್ತಾನದ ನದಿ ತೀರದಲ್ಲಿ ಸಂಗ್ರಹವಾಗಿದೆ ಎಂದು ಭೂಗರ್ಭಶಾಸ್ತ್ರಜ್ಞರು ಹೇಳಿದ್ದಾರೆ.
ಇಲ್ಲಿ ಚಿನ್ನ ಇರುವಿಕೆಯ ಸುದ್ದಿ ಹರಿದಾಡುತ್ತಿದ್ದಂತೆ ಗಣಿಗಾರಿಕೆ ಕಂಪನಿಗಳು ಪಂಜಾಬ್‌ಗೆ ಆಗಮಿಸಿದ್ದವು. ಚಿನ್ನ ತೆಗೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಭಾರಿ ಒತ್ತಡ ಹಾಕಿದ್ದವು.
