ಪಾಕ್ ಸೇನಾ ಹಿಡಿತದಿಂದ ಜಾರಿದ ಬಲೂಚಿಸ್ತಾನ್; 130 ಯೋಧರ ಹತ್ಯೆ ಕಾರ್ಯಾಚರಣೆ ವಿಡಿಯೋ ಔಟ್!
ಬಲೂಚಿಗಳ ಹೋರಾಟ ತೀವ್ರಗೊಂಡಿದೆ. ಪಾಕಿಸ್ತಾನ ಸೇನೆ ವಿರುದ್ಧ ಶುರುವಾದ ದಂಗೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಬರೋಬ್ಬರಿ 20 ಗಂಟೆ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ 130 ಯೋಧರನ್ನು ಬಲೂಚಿ ಲಿಬರೇಶನ್ ಆರ್ಮಿ ಹತ್ಯೆಗೈದಿದೆ. ಈ ವಿಡಿಯೋವನ್ನು ಬಲೂಚಿ ಬಿಡುಗಡೆ ಮಾಡಿದೆ.
ಬಲೂಚಿಸ್ತಾನ್(ಆ.27) ಪಾಕಿಸ್ತಾನದಲ್ಲಿ ಆರ್ಥಿಕತೆ ಹದಗೆಟ್ಟು ಹಳ್ಳ ಹಿಡಿದಿದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಇದರ ಜೊತೆಗೆ ಪಾಕಿಸ್ದಾನ ಹಿಡಿತದಲ್ಲಿರುವ ಬಲೂಚಿಸ್ತಾನದಲ್ಲೂ ತೀವ್ರ ಸಮಸ್ಯೆ ಎದುರಾಗಿದೆ. ಬಲೂಚಿಸ್ತಾನವನ್ನು ಪಾಕ್ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಹೋರಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೋರಾಟ ತೀವ್ರಗೊಳಿಸಿದೆ. ಪಾಕಿಸ್ತಾನ ಸೇನೆ ವಿರುದ್ಧ ಬರೋಬ್ಬರಿ 20 ಗಂಟೆ ಕಾರ್ಯಚರಣೆ ನಡೆಸಿ 130 ಪಾಕಿಸ್ತಾನ ಯೋಧರ ಹತ್ಯೆಗೈದಿದೆ. ಈ ಕಾರ್ಯಾಚರಣೆ ವಿಡಿಯೋವನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ ಬಿಡುಗಡೆ ಮಾಡಿದೆ.
ಪಾಕಿಸ್ತಾನ ಸೇನೆಯಿಂದ ಹತನಾದ ಬಲೂಚಿಸ್ತಾನ ಪ್ರಮುಖ ನಾಯಕ ಅಕ್ಬರ್ ಭುಗ್ತಿಯ 18ನೇ ವರ್ಷಾಚರಣೆ ಪ್ರಯುಕ್ತ ಬಲೂಚಿ ಲಿಬರೇಶನ್ ಆರ್ಮಿ ಈ ದಾಳಿ ಸಂಘಟಿಸಿದೆ. ಬಲೂಚಿಗಳ ಮೇಲೆ ಪಾಕಿಸ್ತಾನ ನಿರಂತರ ದೌರ್ಜನ್ಯ, ದಾಳಿ ಎಸಗುತ್ತಿದೆ ಅನ್ನೋ ಆರೋಪ ಹಲವು ದಶಕಗಳಿಂದ ಕೇಳಿಬರುತ್ತಿದೆ. ಸ್ವತಂತ್ರ ಬಲೂಚಿಸ್ತಾನಕ್ಕೆ ನಿರಂತರ ಹೋರಾಟ ನಡೆಯುತ್ತಿದೆ. ಇದೀಗ ಬಲೂಚಿ ಲಿಬರೇಶನ್ ಆರ್ಮಿ ಆಗಸ್ಟ್ 25 ರಂದು ಪಾಕಿಸ್ತಾನ ಸೇನೆ ಮೇಲೆ ಭೀಕರ ದಾಳಿ ನಡೆಸಿದೆ. ಆಪರೇಶನ್ ಹೆರೋಫ್ ಹೆಸರಿನಲ್ಲಿ ಈ ದಾಳಿ ನಡೆಸಲಾಗಿತ್ತು.
ಪಾಕಿಸ್ತಾನದ 2ನೇ ಅತೀದೊಡ್ಡ ನೇವಿ ಏರ್‌ಬೇಸ್ ಮೇಲೆ ಬಲೂಚಿಸ್ತಾನದ ಮಜೀದ್ ಬ್ರಿಗೇಡ್ ದಾಳಿ
ಪಾಕಿಸ್ತಾನ ಸೇನೆ ಮೇಲೆ ಯಶಸ್ವಿಯಾಗಿ ಆಪರೇಶನ್ ಹೆರೋಫ್ ನಡೆಸಲಾಗಿದೆ. ಬಲೂಚ್ ಲಿಬರೇಶನ್ ಆರ್ಮಿಯ ಹಲವು ವಿಭಾಗಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಮಜೀದ್ ಬ್ರಿಗೇಡ್ ಆತ್ಮಾಹುತಿ ದಾಳಿ ಸಂಘಟಿಸಿದೆ. ಪಾಕಿಸ್ತಾನ ಯೋಧರ ಕ್ಯಾಂಪ್ ಮೇಲೆ ಈ ಮಜೀದ್ ಬ್ರಿಗೇಡ್ ದಾಳಿ ನಡೆಸಿದೆ. ಈ ದಾಳಿಯಲ್ಲಿ 68 ಪಾಕಿಸ್ತಾನಿ ಯೋಧರು ಹತ್ಯೆಯಾಗಿದ್ದಾರೆ.
ಇನ್ನು ಫತಾಹ್ ಸೈನ್ಯ ಬಲೂಚಿಸ್ತಾನದ ಪ್ರಮುಖ ರಸ್ತೆಗಳನ್ನು ಬ್ಲಾಕ್ ಮಾಡಿ ಪಾಕಿಸ್ತಾನದ ಯೋಧರ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ 62 ಯೋಧರು ಹತ್ಯೆಯಾಗಿದ್ದಾರೆ. ಒಟ್ಟು 130 ಪಾಕಿಸ್ತಾನ ಯೋಧರನ್ನು ಹತ್ಯೆ ಮಾಡಿರುವುದಾಗಿ ಬಲೂಚಿಸ್ತಾನ ಲಿಬರೇಶನ್ ಆರ್ಮಿ ನಾಯಕ ಜಿಯಾಂದ್ ಬಲೂಚ್ ಸ್ಪಷ್ಟಪಡಿಸಿದ್ದಾರೆ.
1948ರಿಂದ ಬಲೂಚಿಸ್ತಾನವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಸ್ವತಂತ್ರ ಬಲೂಚಿಸ್ತಾನಕ್ಕಾಗಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಲಿಬರೇಶನ್ ಆರ್ಮಿ ಎಚ್ಚರಿಸಿದೆ. 76 ವರ್ಷಗಳಿಂದ ಬಲೂಚಿಸ್ತಾನದಲ್ಲಿ ಬಲೂಚಿಗಳ ಮೇಲೆ ನಿರಂತರ ದಾಳಿ ನಡೆಸಲಾಗಿದೆ. ಹೆಣ್ಣುಮಕ್ಕಳ ಮೇಲೆ ಪಾಕಿಸ್ತಾನ ದೌರ್ಜನ್ಯ ಎಸಗಿದೆ. ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಜಯೀಂದ್ ಬಲೂಚ್ ಆರೋಪಿಸಿದ್ದಾರೆ.
ಪಾಕಿಸ್ತಾನದ ಪ್ರಖ್ಯಾತ ಗ್ವಾದರ್ ಬಂದರಿನ ಮೇಲೆ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ದಾಳಿ!