ಶ್ರೀನಗರ(ಮೇ.10): ವಿಶ್ವಾದ್ಯಂತ ಕೊರೋನಾ ಆತಂಕ ಹುಟ್ಟು ಹಾಕಿದೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ಕೊರೋನಾ ವ್ಯಾಪಿಸಿದ್ದು, ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಇದು ಅಪಾರ ಸಾವು ನೋವು ಉಂಟು ಮಾಡಿದೆ. ಈ ನಡುವೆ ಪಾಕಿಸ್ತಾನಕ್ಕೆ ಭಾರತದ ಭಯ ಕಾಡಲಾರಂಭಿಸಿದೆ. ಹೌದು ಜಮ್ಮು ಕಾಶ್ಮೀರದ ಹಂದ್ವಾಡಾ ಪ್ರದೇಶದಲ್ಲಿಭಾರತೀಯ ಯೋಧರ ಮೇಲೆ ನಡೆದಿದ್ದ ಉಗ್ರ ದಾಳಿ ಬಳಿಕ ಇದು ತನ್ನ ಗಡಿ ಪ್ರದೇಶದಲ್ಲಿ ಪೆಟ್ರೋಲಿಂಗ್(ಕಣ್ಗಾವಲು) ಹೆಚ್ಚಿಸಿದೆ.

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

ಜಮ್ಮು ಕಾಶ್ಮೀರದ ಹಂದ್ವಾಡಾದಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಭಾರತೀಯ ಸೇನೆಯ ಕರ್ನಲ್ ಆಶುತೋಷ್ ಶರ್ಮಾ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರ ಎಂಬಂತೆ ಭಾರತೀಯ ಸೇನೆಯು ಹಿಜ್ಬುಲ್‌ ಕಮಾಂಡರ್ ರಿಯಾಜ್‌ ನಾಯ್ಕೂನನ್ನು ಹೊಡೆದುರುಳಿಸಿತ್ತು. ಭಾರತ ಇಷ್ಟಕ್ಕೇ ಸುಮ್ಮನಾಗದೇ ಇನ್ನಷ್ಟು ಕಾರ್ಯಾಚರಣೆ ನಡೆಸಿ ಹಂದ್ವಾಡಾ ದಾಳಿಗೆ ಮತ್ತಷ್ಟು ಪ್ರತೀಕಾರ ತೀರಿಸಿಕೊಳ್ಳಲಿದೆ ಎಂಬ ಭಯ ಸದ್ಯ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಹೀಗಾಗೇ ಈ ಘಟನೆ ಮರುಕ್ಷಣದಿಂದಲೇ ಪಾಕ್ ವಾಯುಸೇನೆ ಫ್ಲೈಯಿಂಗ್ ಆಪರೇಷನ್ ಹೆಚ್ಚಿಸಿದೆ.

ಪಾಕ್ ಸೇನಾ ಮೇಜರ್ ಸೇರಿ 6 ಯೋಧರ ಹತ್ಯೆ; ದಾಳಿ ಹೊಣೆ ಹೊತ್ತ ಬಲೂಚ್ ಲಿಬರೇಶನ್ ಆರ್ಮಿ!

ಸುದ್ದಿ ಸಂಸ್ಥೆ ANI ಅನ್ವಯ ಜಮ್ಮು ಕಾಶ್ಮೀರದ ಹಂದ್ವಾಡಾದಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರು ಹುತಾತ್ಮರಾಗಿದ್ದರು. ಇದಾದ ಬಳಿಕ ಭಾರತ ತನ್ನ ಮೇಲೂ ಕಾರ್ಯಾಚರಣೆ ನಡೆಸಬಹುದೆಂಬ ಪಾಕಿಸ್ತಾನವನ್ನು ಕಾಡಲಾರಂಭಿಸಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಎಚ್ಚರಗೊಂಡಿರುವ ಪಾಕಿಸ್ತಾನ ತನ್ನ ಗಡಿಭಾಗದಲ್ಲಿ ಜೆಟ್ ವಿಮಾನಗಳನ್ನು ಹಾರಾಟ ಆರಂಭಿಸಿ, ಕಣ್ಗಾವಲು ಇಡಲಾರಂಭಿಸಿದೆ ಎಂದಿದೆ.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಇನ್ನು ಸರ್ಕಾರದ ಉನ್ನತ ಮೂಲಗಳಿಂದ ANIಗೆ ಸಿಕ್ಕ ಮಾಹಿತಿ ಅನ್ವಯ ಹಂದ್ವಾಡಾ ಎನ್‌ಕೌಂಟರ್ ವೇಳೆ, ಮೊದಲಿಂದಲೂ ಪಾಕಿಸ್ತಾನದ ವಿಮಾನವೊಂದು ಹಾರಾಟ ನಡೆಸುತ್ತಿದ್ದು, ಈ ಸಂಬಂಧ ಭಾರತಕ್ಕೂ ಮಾಹಿತಿ ಇದೆ ಎಂದಿದೆ. ಅಲ್ಲದೇ ಎನ್ಕೌಂಟರ್‌ನಲ್ಲಿ ಕರ್ನಲ್ ಉತಾತ್ಮರಾದ ಬೆನ್ನಲ್ಲೇ ಪಾಕಿಸ್ತಾನದ ವಾಯುಸೇನೆ ಗಸ್ತು ಹಾರಾಟ ಆರಂಭಿಸಿದೆ. ಪಾಕ್ ವಾಯುಸೇನೆಯ ಎಫ್ 16 ಹಾಗೂ ಜೆಎಫ್ 17 ಸೇರಿ ಅನೇಕ ಯುದ್ಧ ವಿಮಾಗಳು ಭಾರತೀಯ ಗಡಿ ಬಳಿ, ಪಾಕಿಸ್ತಾನ ಪ್ರದೇಶದಲ್ಲಿ ಗಸ್ತು ನಡೆಸುತ್ತಿವೆ. ಇವುಗಳನ್ನು ನಮ್ಮ ಭಾರತೀಯ ಸೇನೆಯೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.