ಕೊರೋನಾ ಸೋಂಕು ತಗುಲಿದ್ದರೂ ಸಚಿವರನ್ನು ನಿವಾಸಕ್ಕೆ ಕರೆಸಿ ಸಭೆ ನಡೆಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್| ಇಮ್ರಾಣ್ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ

ಇಸ್ಲಮಾಬಾದ್(ಮಾ.27)‌: ಕೊರೋನಾ ಸೋಂಕು ತಗುಲಿದ್ದರೂ ಸಚಿವರನ್ನು ನಿವಾಸಕ್ಕೆ ಕರೆಸಿ ಸಭೆ ನಡೆಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಡೆಗೆ ವಿಪಕ್ಷಗಳು ಮತ್ತು ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಾಕ್‌ ಪ್ರಧಾನಿಗೆ ಕೊರೋನಾ, ಶೀಘ್ರ ಗುಣಮುಖರಾಗಿ ಎಂದ ಪಿಎಂ ಮೋದಿ!

68 ವರ್ಷದ ಖಾನ್‌ ಅವರಿಗೆ ಕಳೆದ ಶನಿವಾರ ಸೋಂಕು ದೃಢಪಟ್ಟಿತ್ತು. ಆದರೂ ಇತ್ತೀಚೆಗೆ ಇಮ್ರಾನ್‌, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶಿಬ್ಲಿ ಫರಾಹ್‌ ಮತ್ತಿತರರೊಂದಿಗೆ ಸಭೆ ನಡೆಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದ್ದು, ಪ್ರಧಾನಿ ಇಮ್ರಾನ್‌ ಖಾನ್‌ ಅವರ ಬನಿಗಾಲಾ ನಿವಾಸದಲ್ಲಿಯೇ ಈ ಸಭೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಹಾಗಾಗಿ ಸ್ವತಃ ಪ್ರಧಾನಿಯೇ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿಪಕ್ಷಗಳು ಮತ್ತು ಸಾರ್ವಜನಿಕರು ಟೀಕಿಸುತ್ತಿದ್ದಾರೆ.