ಪಾಕಿಸ್ತಾನದ ಜನತೆಗೆ ಪ್ರಧಾನಿ ಎಂದರೆ ಭಾರಿ ಕ್ರೇಜ್, ಅಭಿಮಾನವಿದೆ. ಮೋದಿಯಂತ ನಾಯಕ ಪಾಕಿಸ್ತಾನ ಮುನ್ನಡೆಸಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಇದು ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಅಂಜು ಹೇಳಿದೆ. ಮಾತು. ಅಂಜು ಮೋದಿ ಕುರಿತು ಪಾಕಿಸ್ತಾನ ಜನತೆಗಿರುವ ಅಭಿಮಾನ, ಅಭಿಪ್ರಾಯದ ಕುರಿತು ಹಲವು ರೋಚಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ರಾಜಸ್ಥಾನ(ಡಿ.8) ಫೇಸ್‌ಬುಕ್ ಮೂಲಕ ಪರಿಚಯವಾಗಿ, ಗೆಳೆಯನ ನೋಡಲು ತನ್ನ ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿ ಅಲ್ಲೆ ಸೆಟ್ಲ್ ಆದ ಭಾರತದ ಅಂಜು ಇತ್ತೀಚೆಗೆ ಸ್ವದೇಶಕ್ಕೆ ಮರಳಿದ್ದಾರೆ. ಪಾಕಿಸ್ತಾನದ ನಸ್ರುಲ್ಲಾ ಜೊತೆಗೆ ಸ್ನೇಹ ಹಾಗೂ ಆತ್ಮೀಯತೆಯಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು, ನಸ್ರುಲ್ಲಾ ವರಿಸಿ, ಇಸ್ಲಾಂಗೆ ಮತಾಂತರವಾಗಿರುವ ಹಲವು ವರದಿಗಳು ಬಹಿರಂಗವಾಗಿತ್ತು. ಇದೀಗ ಮಕ್ಕಳನ್ನು ನೋಡಲು ಭಾರತಕ್ಕೆ ಮರಳಿದ ಅಂಜು ಪಾಕಿಸ್ತಾನ ಜನತೆಯ ಕೆಲ ಕುತೂಹಲ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಗೆ ಪಾಕಿಸ್ತಾನದಲ್ಲಿ ಭಾರಿ ಬೆಂಬಲವಿದೆ. ಮೋದಿಯಂತಹ ನಾಯಕ ಪಾಕಿಸ್ತಾನಕ್ಕೆ ಅವಶ್ಯಕತೆ ಇದೆ ಎಂದು ಬಹುತೇಕರು ಹೇಳುತ್ತಾರೆ ಎಂದು ಅಂಜು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಮೋದಿ ಎಂದರೆ ಜನತೆಗೆ ಭಾರಿ ಕ್ರೇಜ್ ಇದೆ. ಮೋದಿ ಭಾರತ ಮಾತ್ರವಲ್ಲ, ಜಗತ್ತನ್ನೇ ಬದಲಿಸಬಲ್ಲ ನಾಯಕ. ಮೋದಿ ನಿರ್ಧಾರಗಳನ್ನು ವಿಶ್ವವೇ ಒಪ್ಪಿಕೊಳ್ಳುತ್ತದೆ. ಭಾರತ ಇದೀಗ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಾನು ಭಾರತೀಯಳು ಎಂದಾಗ ನನ್ನ ಬಳಿ ಕೇಳುವ ಮೊದಲ ಪ್ರಶ್ನೆ ಪ್ರಧಾನಿ ಮೋದಿ ಕುರಿತು. ಮೋದಿ ಆಡಳಿತ, ಭಾರತದಲ್ಲಿ ಆಗಿರುವ ಬದಲಾವಣೆ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅಂಜು ಹೇಳಿದ್ದಾರೆ.
ಪಾಕಿಸ್ತಾನಿ ಗೆಳೆಯನನ್ನು ಮದುವೆಯಾಗಲು ನೆರೆಯ ದೇಶಕ್ಕೆ ತೆರಳಿದ್ದ ಅಂಜು ಭಾರತಕ್ಕೆ ವಾಪಸ್!
ಪಾಕಿಸ್ತಾನದ ಯಾವುದೇ ಮೂಲೆಗೆ ಹೋದರು ಮೋದಿಗೆ ಅಭಿಮಾನಿಗಳಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ಒಂದೊಂದು ದಿನದ ಅಂತರದಲ್ಲಿ ಸ್ವತಂತ್ರಗೊಂಡಿದೆ. ಭಾರತ ಚಂದ್ರನ ಮೇಲೆ ಕಾಲಿಟ್ಟು ಹೊಸ ಇತಿಹಾಸ ರಚಿಸಿದೆ. ಆದರೆ ಪಾಕಿಸ್ತಾನ ಇನ್ನು ಗೋಧಿ ಹಿಟ್ಟು, ಅಕ್ಕಿ, ಬೇಳೆ ಕಾಳು, ಹಾಲು ಸೇರಿದಂತೆ ಆಹಾರಗಳನ್ನೇ ಸಾಲ ಪಡೆಯುವಂತಾಗಿದೆ. ಪಾಕಿಸ್ತಾನದಲ್ಲಿರುವ ಸಂಪನ್ಮೂಲ, ಇಲ್ಲಿನ ಪ್ರವಾಸೋದ್ಯಮ, ಇಲ್ಲಿರುವ ಅವಕಾಶಗಳನ್ನು ಸದ್ಬಳಕೆ ಮಾಡಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಪ್ರಧಾನಿ ಮೋದಿಯಂತ ನಾಯಕ ಪಾಕಿಸ್ತಾನಕ್ಕೆ ಬೇಕು ಎಂದು ಪಾಕಿಸ್ತಾನದ ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅಂಜು ಹೇಳಿದ್ದಾರೆ.
ಇದೇ ವೇಳೆ ತಮ್ಮ ವೈಯುಕ್ತಿಕ ಬದುಕಿನ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ದುಬೈನಲ್ಲಿ ನೆಲೆಸಲು ಯೋಚಿಸುತ್ತಿದ್ದೇನೆ ಎಂದು ಅಂಜು ಹೇಳಿದ್ದಾರೆ. ಮಕ್ಕಳನ್ನು ಕರೆದುಕೊಂಡು ಪಾಕಿಸ್ತಾನಕ್ಕೆ ತೆರಳಲು ಅಂಜು ಮನಸ್ಸು ಮಾಡಿದ್ದಾರೆ. ಅಂಜು ಈ ನಿರ್ಧಾರಕ್ಕೆ ಭಾರತದ ಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಕ್ಕಳ ಭವಿಷ್ಯವನ್ನು ಹಾಳು ಮಾಡಬಾರದು ಅನ್ನೋ ಎಚ್ಚರಿಕೆಯನ್ನು ನೀಡಿದ್ದರೆ. ಈ ಎಚ್ಚರಿಕೆ ಬೆನ್ನಲ್ಲೇ ಭಾರತದ ಪತಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ.
ಸೀಮಾ, ಅಂಜು ಆಯ್ತು, ಪ್ರಿಯಕರನಿಗಾಗಿ ಗಂಡ, ಮಕ್ಕಳನ್ನು ಬಿಟ್ಟು ಕುವೈತ್‌ಗೆ ಪರಾರಿಯಾದ ರಾಜಸ್ಥಾನದ ಮಹಿಳೆ!
