Asianet Suvarna News Asianet Suvarna News

ಪಾಕಿಸ್ತಾನಿ ಗೆಳೆಯನನ್ನು ಮದುವೆಯಾಗಲು ನೆರೆಯ ದೇಶಕ್ಕೆ ತೆರಳಿದ್ದ ಅಂಜು ಭಾರತಕ್ಕೆ ವಾಪಸ್‌!


ಈ ವರ್ಷದ ಆರಂಭದಲ್ಲಿ ಅಂಜು ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾಗುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ್ದಳು. ಇತ್ತೀಚೆಗೆ ಅವರು ಭಾರತಕ್ಕೆ ವಾಪಸ್‌ ಆಗಿದ್ದಾರೆ.

Anju who went to Pakistan to marry her friend returns India san
Author
First Published Nov 29, 2023, 7:05 PM IST

ನವದೆಹಲಿ (ನ.29): ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾಗುವ ಸಲುವಾಗಿ ಕಳೆದ ಜುಲೈನಲ್ಲಿ ಪಾಕಿಸ್ತಾನಕ್ಕೆ ಅಕ್ರಮವಾಗಿ ಹೋಗಿದ್ದ ಅಂಜು ಇತ್ತೀಚೆಗಷ್ಟೇ ವಾಘಾ ಗಡಿ ಮೂಲಕ ಭಾರತಕ್ಕೆ ವಾಪಸ್‌ ಆಗಿದ್ದಾರೆ. ಏಜೆನ್ಸಿಗಳ ವಿಚಾರಣೆಯ ನಂತರ, ಆಕೆಯನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು, ಅಲ್ಲಿಂದ ಆಕೆ ದೆಹಲಿಗೆ ಬಂದಿದ್ದಾರೆ. ಇಸ್ಲಾಂಗೆ ಮತಾಂತರಗೊಂಡು ಈಗ ಫಾತಿಮಾ ಆಗಿ ಬದಲಾಗಿರುವ 34 ವರ್ಷದ ಮಹಿಳೆ ಕಳೆದ ಜುಲೈನಿಂದಲೂ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ವಾಸ ಮಾಡುತ್ತಿದ್ದರು. ಅಂಜು ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾದ ನಂತರ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಆರಂಭದಲ್ಲಿ, ಅಂಜು ಮತ್ತು ನಸ್ರುಲ್ಲಾ ಅವರು ಮದುವೆಯಾಗುವ ಯಾವುದೇ ಯೋಜನೆ ಹೊಂದಿರಲಿಲ್ಲ. ತಮ್ಮ ವೀಸಾ ಅವಧಿ ಮುಗಿದ ನಂತರ ಆಗಸ್ಟ್ 20 ರಂದು ಭಾರತಕ್ಕೆ ಮರಳುವುದಾಗಿ ಅವರು ಹೇಳಿಕೊಂಡಿದ್ದರು ಆದರೆ, ಇಂತಹ ಹೇಳಿಕೆಗಳನ್ನು ನೀಡಿದ ಒಂದು ದಿನದ ನಂತರ ಇವರಿಬ್ಬರೂ ಪಾಕಿಸ್ತಾನದಲ್ಲಿಯೇ ವಿವಾಹವಾಗಿದ್ದ ಫೋಟೋ ಹಾಗೂ ವಿಡಿಯೋ ವೈರಲ್‌ ಆಗಿದ್ದವು.

ಆಗಸ್ಟ್‌ನಲ್ಲಿ, ಪಾಕಿಸ್ತಾನವು ಅಂಜು ಅವರ ವೀಸಾವನ್ನು ಒಂದು ವರ್ಷ ವಿಸ್ತರಿಸಿತು, ಆಕೆಯು ಇಸ್ಲಾಂಗೆ ಮತಾಂತರಗೊಂಡು ನಸ್ರುಲ್ಲಾನನ್ನು  ಮದುವೆಯಾದ ನಂತರ ಫಾತಿಮಾ ಎನ್ನುವ ಹೆಸರು ಪಡೆದುಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ, ಅಂಜು ಅವರ ಪತಿ ನಸ್ರುಲ್ಲಾ ಅವರು ತಮ್ಮ ಪತ್ನಿ "ಮಾನಸಿಕವಾಗಿ ತೊಂದರೆಗೀಡಾಗಿದ್ದಾರೆ. ಅವರು ಭಾರತದಲ್ಲಿರುವ ತಮ್ಮ ಮಕ್ಕಳನ್ನು ನೋಡುವ ದೊಡ್ಡ ಹಂಬಲದಲ್ಲಿದ್ದಾರೆ ಎಂದು ಹೇಳಿದ್ದರು.

ರಾಜಸ್ಥಾನದ ಭಿವಾಡಿ ಜಿಲ್ಲೆಯ ಮೂಲದವರಾಗಿದ್ದ ಅಂಜು ಅವರು ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ಮತ್ತು ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಭೇಟಿಯಾಗಲು ಪಾಕಿಸ್ತಾನದ ವಾಯುವ್ಯದಲ್ಲಿರುವ  ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸಿದ್ದರು.  ಕೆಲವು ದಿನ ಜೈಪುರಕ್ಕೆ ಹೋಗುವುದಾಗಿ ಪತಿ ಅರವಿಂದ್‌ಗೆ ತಿಳಿಸಿ, ಅಂಜು ಪ್ರಯಾಣ ಮಾಡಿದ್ದರು. ಆದರೆ, ಆಕೆ ಗಡಿ ದಾಟಿ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ಗೊತ್ತಾಗಿತ್ತು.

ಭಾರತಕ್ಕೆ ಮರಳಲು ಪಾಕಿಸ್ತಾನ ಸರ್ಕಾದ NOCಗೆ ಕಾಯುತ್ತಿರುವ ಫಾತಿಮಾ ಅಲಿಯಾಸ್ ಅಂಜು!

ಈ ಬಗ್ಗೆ ಮಾತನಾಡಿದ ಅರವಿಂದ್, ಪತ್ನಿ ವಾಟ್ಸಾಪ್ ಮೂಲಕ ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಆದರೆ, ಲಾಹೋರ್‌ಗೆ ತೆರಳಿದ ದಿನ ಸಂಜೆ 4 ಗಂಟೆ ಸುಮಾರಿಗೆ ಅರವಿಂದ್‌ಗೆ ಕರೆ ಮಾಡಿದ ಅಂಜು ತಾನು ಲಾಹೋರ್‌ನಲ್ಲಿದ್ದೇನೆ ಮತ್ತು ಎರಡು ಮೂರು ದಿನಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದಳು.  ಪಾಕಿಸ್ತಾನದಲ್ಲಿ ಅಂಜು ಅವರ ಪ್ರೇಮಿಯ ಬಗ್ಗೆ ಕೇಳಿದಾಗ, ಅರವಿಂದ್ ಅವರು ಅವಳ ಸಂಬಂಧದ ಬಗ್ಗೆ ತಿಳಿದಿದ್ದರು ಮತ್ತು ಅವರ ಪತ್ನಿ ಮುಂದೊಂದು ದಿನ ತನ್ನ ಬಳಿಗೆ ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಇಬ್ಬರು ಮಕ್ಕಳನ್ನು ಹೊಂದಿರುವ ಅಂಜು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಅರವಿಂದ್ ಅವರೊಂದಿಗೆ ಮದುವೆಯಾಗಿದ್ದಾರೆ.

ಸಾಕಾಯ್ತು ಪಾಕಿಸ್ತಾನ ಸಹವಾಸ, ಅಕ್ಟೋಬರ್‌ನಲ್ಲಿ ಅಂಜು ಭಾರತಕ್ಕೆ ವಾಪಸ್!

Follow Us:
Download App:
  • android
  • ios