ದೇಶದೊಳಗೆ ಗಲಭೆ ಎಬ್ಬಿಸಿ ಆಯೋಧ್ಯೆ ಮೇಲೆ ದಾಳಿಗೆ ಉಗ್ರರ ಸ್ಕೆಚ್, ನೇಪಾಳ ಮೂಲಕ ಎಂಟ್ರಿ!
ಹೊಸ ವರ್ಷದ ಆರಂಭದಲ್ಲೇ ಉಗ್ರರ ದಾಳಿಗೆ ಎಚ್ಚರಿಕೆ ಆತಂಕ ಸೃಷ್ಟಿಸಿದೆ. ಭಾರತದ ಶ್ರದ್ಧಾ ಭಕ್ತಿ ಕೇಂದ್ರ ಆಯೋಧ್ಯೆ ಮೇಲೆ ದಾಳಿ ಮಾಡಲು ಉಗ್ರರು ಭಾರಿ ಪ್ಲಾನ್ ಮಾಡಿರುವುದು ಬಹಿರಂಗವಾಗಿದೆ. ಪಾಕಿಸ್ತಾನ ಮೂಲಕ ಲಷ್ಕರ್ ಇ ತೈಬಾ, ಜೈಶ್ ಇ ಮೊಹಮ್ಮದ್ ಉಗ್ರರು ಈ ದಾಳಿಗೆ ಯೋಜನೆ ಸಿದ್ದಪಡಿಸಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಡಿಸಿದೆ.
ನವದೆಹಲಿ(ಜ.10): ಆಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಂದಿರ ಉದ್ಘಾಟನೆ ದಿನಾಂಕ ಘೋಷಿಸಿದ್ದಾರೆ. ಜನವರಿ 1, 2024ಕ್ಕೆ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಈ ಘೋಷಣೆ ಕೋಟ್ಯಾಂತರ ಹಿಂದುಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ಆದರೆ ಶ್ರೀರಾಮ ಮಂದಿರದ ಮೇಲೆ ಉಗ್ರರು ದಾಳಿಗೆ ಸ್ಕೆಚ್ ಹಾಕಿದ್ದಾರೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ. ಪಾಕಿಸ್ತಾನದ ಲಷ್ಕರ್ ಇ ತೈಬಾ, ಜೈಶ್ ಇ ಮೊಹಮ್ಮದ್ ಉಗ್ರರು ಈ ದಾಳಿಗೆ ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ನೇಪಾಳ ಮೂಲಕ ಭಾರತಕ್ಕೆ ಪ್ರವೇಶ ಕೊಡಲು ಮಾಸ್ಟರ್ ಪ್ಲಾನ್ ರೆಡಿ ಮಾಡಿರುವುದಾಗಿ ಬಹಿರಂಗವಾಗಿದೆ.
2024ರ ಲೋಕಸಭಾ ಚುನಾವಣೆಗೂ ಮೊದಲು ಆಯೋಧ್ಯೆ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಉಗ್ರರು ಪ್ಲಾನ್ ಹಾಕಿಕೊಂಡಿದ್ದಾರೆ. ಮೊದಲು ಭಾರತದೊಳಗೆ ಗಲಭೆ ಸೃಷ್ಟಿಸಿ, ಅದೇ ಸಮಯದಲ್ಲಿ ಆಯೋಧ್ಯೆ ಮೇಲೆ ದಾಳಿ ಮಾಡಲು ಬಹುದೊಡ್ಡ ಪ್ಲಾನ್ ರೆಡಿಯಾಗಿದೆ. ಭಾರತದಲ್ಲಿ ಹಿಂದೂ ಮುಸ್ಲಿಮ್ ನಡುವೆ ಗಲಭೆ ಸೃಷ್ಟಿಸಿ, ರಾಮ ಮಂದಿ ಸ್ಫೋಟಿಸುವ ಪ್ಲಾನ್ ಮಾಹಿತಿ ಭಾರತೀಯ ಗುಪ್ತಚರ ಇಲಾಖೆ ಹೇಳಿದೆ. ಈ ಕುರಿತು ನ್ಯೂಸ್18 ಮಾಧ್ಯಮ ವರದಿ ಮಾಡಿದೆ.
ಅಮಿತ್ ಶಾ ರಾಜಕಾರಣಿ, ಪೂಜಾರಿಯಲ್ಲ, ರಾಮ ಮಂದಿರ ಉದ್ಘಾಟನೆ ಘೋಷಣೆಗೆ ಕೆರಳಿದ ಖರ್ಗೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಉಗ್ರರ ಒಳನಸುಳುವಿಕೆ, ಪಾಕಿಸ್ತಾನದಿಂದ ಆಗಮಿಸಿ ಕಾಶ್ಮೀರ ಕಣಿವೆಯಲ್ಲಿ ನಡೆಸುತ್ತಿದ್ದ ಉಗ್ರರ ಉಪಟಳಕ್ಕೆ ಬ್ರೇಕ್ ಬಿದ್ದಿದೆ. ಇದೀಗ ಇಲ್ಲಿರುವ ಯುವಕರನ್ನೇ ಬಳಸಿಕೊಂಡು ಕಾಶ್ಮೀರ ಹಿಂದೂಗಳು, ಪಂಡಿತರ ಮೇಲೆ ದಾಳಿ ನಡೆಸುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ಇದೀಗ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದೆ. ಹೀಗಾಗಿ ಪಾಕಿಸ್ತಾನದ ಮೂಲಕ ಜಮ್ಮು ಕಾಶ್ಮೀರಕ್ಕೆ ಎಂಟ್ರಿಕೊಡುವುದು ಸುಲಭವಲ್ಲ. ಈ ಕಾರಣಕ್ಕೆ ನೇಪಾಳ ಮೂಲಕ ಭಾರತದೊಳಗೆ ಎಂಟ್ರಿಕೊಡಲು ಉಗ್ರರು ಸ್ಕೆಚ್ ರೂಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದವಾದ ಬಳಿಕ ಪಾಕಿಸ್ತಾನದ ಐಎಸ್‌ಐ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಭೀತಿ ಸೃಷ್ಟಿಸಲು ಹರಸಾಹಸ ಪಡುತ್ತಿದೆ. ಆದರೆ ಐಎಸ್ಐ ಪ್ಲಾನ್ ಕೈಗೂಡುತ್ತಿಲ್ಲ. ಇತ್ತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ತಾಲಿಬಾನ್ ಉಗ್ರರು ಪಾಕಿಸ್ತಾನ ವಿರುದ್ದ ತಿರುಗಿ ಬಿದ್ದಿದ್ದಾರೆ. ಇದರಿಂದ ಆಫ್ಘಾನಿ ತಾಲಿಬಾನ್ ಉಗ್ರರಿಂದಲೂ ಪಾಕಿಸ್ತಾನಕ್ಕೆ ನಿರೀಕ್ಷಿತ ನೆರವು ಸಿಗುತ್ತಿಲ್ಲ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಡೇಟ್ ಫಿಕ್ಸ್..!
ಇತ್ತ ಕೇಂದ್ರ ಸರ್ಕಾರ ಭಾರತದಲ್ಲಿ ಅಭಿವೃದ್ಧಿ ಜೊತೆಗೆ ಗಡಿಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ ಪಾಕಿಸ್ತಾನ ಉಗ್ರರ ಲೆಕ್ಕಾಚಾರಗಳು ಉಲ್ಟಾ ಆಗಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಮೊದಲು ಉಗ್ರರ ಸ್ಲೀಪರ್‌ಸೆಲ್ ಮೂಲಕ ಗಲಭೆ ಸೃಷ್ಟಿಸಲು ಪ್ಲಾನ್ ಮಾಡಲಾಗಿದೆ. ಸೈದ್ಧಾಂತಿಕ ವಿಚಾರ, ಹಿಂದೂ ಮುಸ್ಲಿಮ್ ವಿಚಾರಗಳನ್ನು ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಿ ಭಾರತದೊಳಗ ಆತಂರಿಕ ಗಲಭೆ ಸೃಷ್ಟಿಸಿ ಆಯೋಧ್ಯೆ ಮೇಲೆ ದಾಳಿಗೆ ಉಗ್ರರು ಸಜ್ಜಾಗಿದೆ.
ಗುಪ್ತಚರ ಇಲಾಖೆ ವರದಿ ಬೆನ್ನಲ್ಲೇ ದೇಶದ ಪ್ರಮುಖ ಸ್ಥಳಗಳಲ್ಲಿ ಹೈಅಲರ್ಟ್‌ಗೆ ಸೂಚನೆ ನೀಡಲಾಗಿದೆ. ಇತ್ತ ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಹದ್ದಿನ ಕಣ್ಣಿಡಲು ಭಾರತೀಯ ಸೇನೆ ಸಜ್ಜಾಗಿದೆ. ಆಯೋಧ್ಯೆ ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳ ಭದ್ರತೆ ಹೆಚ್ಚಳಕ್ಕೆ ಕೇಂದ್ರ ಚಿಂತನೆ ನಡೆಸಿದೆ.