ಉತ್ತರ ಪ್ರದೇಶ-ಬಿಹಾರ ರೈಲು ಸ್ಫೋಟಿಸಲು ಪಾಕಿಸ್ತಾನ ISI ಸಂಚು; ಗುಪ್ತಚರ ಇಲಾಖೆ ಅಲರ್ಟ್!
- ದೇಶದಲ್ಲಿ ಶಾಂತಿ ಕದಡಲು ಪಾಕಿಸ್ತಾನ ISI ಸಂಚು
- ರೈಲು ಸ್ಫೋಟಿಸಲು ಸಂಚು ನಡೆಸಿರುವ ಮಾಹಿತಿ ಬಹಿರಂಗ
- ಹೈ ಅಲರ್ಟ್ ನೀಡಿದ ಗುಪ್ತಚರ ಇಲಾಖೆ
ನವದೆಹಲಿ(ಜು.13): ಉಗ್ರರಿಗೆ ಬೆಂಬಲ ನೀಡಿ ಭಾರತದ ವಿರುದ್ಧ ಪಿತೂರಿ ನಡೆಸುವ ಪಾಕಿಸ್ತಾನ ಇದೀಗ ಪಾಕ್ ISI ಭಾರತದಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಿದೆ. ಉತ್ತರ ಪ್ರದೇಶ ಹಾಗೂ ಬಿಹಾರ ರೈಲು ಗುರಿಯಾಗಿಸಿ ಬಾಂಬ್ ಸ್ಫೋಟಿಸುವ ಕುರಿತು ಭಾರತೀಯ ಗುಪ್ತಚರ ಇಲಾಖೆ ಹೈ ಅಲರ್ಟ್ ನೀಡಿದೆ.
ರಾಜಸ್ಥಾನದಲ್ಲಿ ಉಗ್ರರ ದಾಳಿ ಎಚ್ಚರಿಕೆ; 144 ಸೆಕ್ಷನ್, ನೈಟ್ ಕರ್ಫ್ಯೂ ಜಾರಿ!
ಉತ್ತರ ಪ್ರದೇಶ ಹಾಗೂ ಬಿಹಾರ ನಡುವಿನ ರೈಲಿನಲ್ಲಿ ಕಾರ್ಮಿಕರ ಪ್ರಯಾಣ ಹೆಚ್ಚಾಗಿದೆ. ಇಂತಹ ರೈಲು ಸ್ಫೋಟಿಸಿ ಭಾರತಕ್ಕೆ ಅತೀ ಹೆಚ್ಚಿನ ಅಪಾಯ ತಂದೊಡ್ಡುವ ಸಂಚನ್ನು ಪಾಕಿಸ್ತಾನ ಐಎಸ್ಐ ಮಾಡಿದೆ ಎಂದು ಗುಪ್ತರ ಇಲಾಖೆ ಮಾಹಿತಿ ನೀಡಿದೆ
ರೈಲು ಸ್ಫೋಟಿಸುವ ಸಂಚಿಗೆ ಪಾಕಿಸ್ತಾನ ISI ಉಗ್ರರಿಗೆ ತರಬೇತಿ ನೀಡಿರುವ ಮಾಹಿತಿಯನ್ನೂ ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ಪಂಜಾಬ್ ಮೂಲಕ ಉಗ್ರರಿಗೆ ಬಾಂಬ್ ಸೇರಿದಂತೆ ಇತರ ಸ್ಫೋಟಕ ರವಾನೆಯಾಗುವ ಸಾಧ್ಯತೆ ಇದೆ. ಉಗ್ರರು, ಸ್ಲೀಪರ್ ಸೆಲ್ ಸೇರಿದಂತೆ ಹಲವರ ನೆರವು ಈ ಸಂಚಿಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಪಾಕಿಸ್ತಾನಕ್ಕೆ ತಿರುಗುಬಾಣ; ಉಗ್ರರ ದಾಳಿಯಲ್ಲಿ ಪಾಕ್ ಸೇನಾ ಕ್ಯಾಪ್ಟನ್, 11 ಯೋಧರು ಹತ್ಯೆ!
ಗುಪ್ತಚರ ಇಲಾಖೆ ಈಗಾಗಲೇ ರೈಲ್ವೈ ಇಲಾಖೆಗೆ ಮಾಹಿತಿ ನೀಡಿದೆ. ಇತ್ತ ಕೇಂದ್ರ ಗೃಹ ಇಲಾಖೆಗೆ ತಕ್ಷಣವೇ ಅಲರ್ಟ್ ಸಂದೇಶ ರವಾನಿಸಿದೆ. ಯುಪಿ ಹಾಗೂ ಬಿಹಾರದಲ್ಲಿ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ.
ಈಗಾಗಲೇ ರಾಜಸ್ಥಾನದ ಮೇಲೆ ಉಗ್ರರ ದಾಳಿ ಸಾಧ್ಯತೆ ಇರುವ ಕಾರಣ ಕೆಲ ಪ್ರದೇಶಗಳಲ್ಲಿ ಸೆಕ್ಷನ್ 144 ಹಾಗೂ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.